ಗಾಯನಕನಾಗಿದ್ದ ಕೆಕೆ ರವರು ತಮ್ಮ ಮಕ್ಕಳಿಗಾಗಿ ಎಷ್ಟು ಕೋಟಿ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಹಲವಾರು ಸೆಲೆಬ್ರಿಟಿಗಳು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗುತ್ತಿದ್ದಾರೆ ಅವರ ಸಾಲಿಗೆ ಈಗ ಬಾಲಿವುಡ್ ಗಾಯಕ ಆಗಿರುವ ಕೆಕೆ ರವರು ಕೂಡ ಸೇರಿಕೊಂಡಿದ್ದಾರೆ. ಅಂದಿನಿಂದಲೂ ಕೂಡ ಕೆಕೆ ರಾಹುಲ್ ತಮ್ಮ ಸುಮಧುರ ಕಂಠದಿಂದ ಸಂಗೀತಪ್ರಿಯರ ಮನವನ್ನು ತಣಿಸಿ ಸಂಗೀತ ಲೋಕದಲ್ಲಿ ತಮ್ಮದೇ ಆದಂತಹ ಸಾಮ್ರಾಜ್ಯವನ್ನು ಸ್ಥಾಪಿಸಿ ಕೊಂಡವರು.
ಇನ್ನು ಅವರು ಇತ್ತೀಚೆಗಷ್ಟೇ ಕೊಲ್ಕತ್ತಾದಲ್ಲಿ ಲೈವ್ ಕಾನ್ಸರ್ಟ್ ನಲ್ಲಿ ಪರ್ಫಾರ್ಮೆನ್ಸ್ ನೀಡುವಾಗ ಹೃದಯದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಡುವೆ ಮರಣವನ್ನು ಹೊಂದುತ್ತಾರೆ. ತಮ್ಮ ಸಂಗೀತದಿಂದಲೇ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಕೇವಲ ಅಭಿಮಾನಿಗಳನ್ನು ಹಾಗೂ ಪ್ರೀತಿಯನ್ನು ಮಾತ್ರ ಅಲ್ಲದೆ ಸಾಕಷ್ಟು ಹಣವನ್ನು ಕೂಡ ಸಂಪಾದಿಸಿದ್ದಾರೆ. ಕೆಕೆ ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಅವರು ವಾಸಿಸುತ್ತಿದ್ದರು. ಮರಣ ಹೊಂದುವಾಗ ಅವರಿಗೆ 53 ವರ್ಷ ವಯಸ್ಸಾಗಿತ್ತು. ಇನ್ನು ಇವರು ಪ್ರತಿ ಹಾಡನ್ನು ಹಾಡುವುದಕ್ಕೆ ಆಗಿ ಐದರಿಂದ ಆರು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಇನ್ನು ಲೈವ್ ಪರ್ಫಾರ್ಮೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಹತ್ತರಿಂದ ಹದಿನೈದು ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು.
ಕೆಕೆಆರ್ ಅವರ ಬಳಿ ದೆಹಲಿ ಹಾಗೂ ಮುಂಬೈ ಸೇರಿದಂತೆ ಹಲವಾರು ಕಡೆಗಳಲ್ಲಿ ಐಷಾರಾಮಿ ಬಂಗಲೆಗಳು ಹಾಗೂ ಲಕ್ಸುರಿ ಕಾರುಗಳು ಕೂಡ ಇವೆ. ಇವರು ಕೇವಲ ಬಾಲಿವುಡ್ನಲ್ಲಿ ಮಾತ್ರವಲ್ಲದೆ ಕನ್ನಡ ತಮಿಳು ತೆಲುಗು ಮರಾಠಿ ಮಲಯಾಳಂ ಬೆಂಗಾಲಿ ಗುಜರಾತ್ ಭಾಷೆಗಳಲ್ಲಿ ಕೂಡ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇನ್ನು ಮೂಲಗಳ ಪ್ರಕಾರ ಕೆಕೆ ರವರ ಹೆಸರಿನಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಇದ್ದು ಇದನ್ನು ತಮ್ಮ ಮಕ್ಕಳಿಗೆ ಬಿಟ್ಟು ಹೋಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅದೇನೇ ಇರಲಿ ಸಂಗೀತ ಲೋಕ ಮಾತ್ರ ಕೆಕೆ ಅವರನ್ನು ಕಳೆದುಕೊಂಡು ದುಃಖದಲ್ಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಕೆ ರವರು ಹಾಡಿರುವ ನಿಮ್ಮ ನೆಚ್ಚಿನ ಹಾಡು ಯಾವುದು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.