ದರ್ಶನ್ ಹಾಗೂ ಯಶ್ ಕ್ಲೋಸ್ ಏನೋ ಇದ್ದಾರೆ, ಆದರೆ ನ್ಯಾಷನಲ್ ಸ್ಟಾರ್ ಜೊತೆ ಸಿನಿಮಾ ಮಾಡ್ತಾರಾ ಡಿ ಬಾಸ್?? ದರ್ಶನ್ ಹೇಳಿದ್ದೇನು ಗೊತ್ತೇ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಶ್ರೀನಿವಾಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇವರಿಬ್ಬರನ್ನು ಕೂಡ ಜೋಡೆತ್ತುಗಳು ಎನ್ನುವುದಾಗಿ ಕರೆಯುತ್ತಾರೆ. ಇಬ್ಬರು ಕೂಡ ಹೆಚ್ಚುಕಮ್ಮಿ ಒಂದೇ ಪ್ರಾದೇಶಿಕ ಹಿನ್ನೆಲೆಯನ್ನು ಹೊಂದಿರುವವರು. ಹೀಗಾಗಿ ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ತೆರೆ ಹಿಂದೆ ಕೂಡ ಸ್ನೇಹವನ್ನು ಇವರಿಬ್ಬರೂ ಪರಸ್ಪರ ಹೊಂದಿದ್ದಾರೆ.

ಹೌದು ಗೆಳೆಯರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡಮಟ್ಟದ ಅಭಿಮಾನಿಗಳನ್ನು ಹೊಂದಿರುವ ನಟ. ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಈಗಾಗಲೇ ಜಾಗತಿಕವಾಗಿ ಅಭಿಮಾನಿ ಬಳಗವನ್ನು ಹೊಂದಿರುವ ನಟ ಆಗಿದ್ದಾರೆ. ಇಬ್ಬರು ಕೂಡ ಕನ್ನಡ ಚಿತ್ರರಂಗವನ್ನು ಬೆಳೆಸುವಲ್ಲಿ ತಮ್ಮದೇ ಆದಂತಹ ಪ್ರಯತ್ನವನ್ನು ನೀಡುತ್ತಿದ್ದಾರೆ. ಇನ್ನು ನಿಜಜೀವನದಲ್ಲಿ ಇಷ್ಟೊಂದು ಅನ್ಯೋನ್ಯವಾಗಿ ಗೆಳೆಯ ರಾಗಿರುವ ಇವರಿಬ್ಬರು ಒಂದೇ ಸಿನಿಮಾದಲ್ಲಿ ಯಾಕೆ ನಟಿಸಬಾರದು ಎನ್ನುವುದಾಗಿ ಹಿಂದೆ ಸಂದರ್ಶನವೊಂದರಲ್ಲಿ ಡಿಬಾಸ್ ರವರನ್ನು ಕೇಳಲಾಗಿತ್ತು. ಅದಕ್ಕೆ ಡಿ ಬಾಸ್ ರವರು ಕೂಡ ಅರ್ಥಪೂರ್ಣವಾಗಿ ಉತ್ತರ ನೀಡಿದ್ದು ಈಗ ಆ ಸಂದರ್ಶನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಹೌದು ಗೆಳೆಯರೇ ಸಂದರ್ಶನದಲ್ಲಿ ಕೇಳಿದ ಆ ಪ್ರಶ್ನೆಗೆ ಡಿ ಬಾಸ್ ರವರು ಖಂಡಿತ ನಮ್ಮ ಹೀರೋ ಜೊತೆ ಸಿನಿಮಾ ಮಾಡ್ತೀನಿ. ಆದರೆ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ನಿರ್ದೇಶಕರು ಹಾಗೂ ಒಂದೊಳ್ಳೆ ಕಥೆ ಸಿಕ್ಕರೆ ಖಂಡಿತವಾಗಿ ಅವರ ಜೊತೆಗೆ ನಟಿಸಲು ನಾನು ಸಿದ್ಧನಾಗಿದ್ದೇನೆ ಎಂಬುದಾಗಿ ಡಿ ಬಾಸ್ ರವರು ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರರ್ ಸಿನಿಮಾ ಗಳು ಕಂಡುಬಂದಿಲ್ಲ ಹೀಗಾಗಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದರೆ ಖಂಡಿತವಾಗಿ ಅಭಿಮಾನಿಗಳು ಸೆಲೆಬ್ರೇಶನ್ ಯಾವ ಮಟ್ಟಕ್ಕೆ ಇರಲಿದೆ ಎಂಬುದು ಊಹೆಗೂ ಕೂಡ ನಿಲುಕುವುದಿಲ್ಲ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದರೆ ಹೇಗಿರಬೇಕು ಎಂಬ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.