ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು ಎಂದರೆ, ಇಂದಿನಿಂದಲೇ ಈ ಕೆಲಸ ಮಾಡಿ ನೋಡಿ. ಖಂಡಿತಾ ಲಕ್ಷ್ಮಿ ನೆಲೆಸುತ್ತಾರೆ. ಏನು ಮಾಡಬೇಕು ಗೊತ್ತೇ?
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಈ ಯುಗದಲ್ಲಿ ಹಣದ ಕುರಿತಂತೆ ಹೆಚ್ಚಾಗಿ ತಲೆಕೆಡಿಸಿಕೊಂಡಿದ್ದಾರೆ ಹಾಗೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಎಷ್ಟೇ ಪರಿಶ್ರಮದಿಂದ ಕೆಲಸ ಮಾಡಿದರೂ ಕೂಡ ಅವರಿಗೆ ಬೇಕಾಗುವಷ್ಟು ಹಣ ಹಗಲು-ರಾತ್ರಿ ದುಡಿದರೂ ಕೂಡ ಸಿಗುವುದಿಲ್ಲ. ಹಣ ಕೈಗೆ ಬಂದ ತಕ್ಷಣವೇ ಖಾಲಿಯಾಗಿ ಹೋಗುತ್ತದೆ. ಲಕ್ಷ್ಮೀದೇವಿ ನಿಮ್ಮ ಜೀವನದಲ್ಲಿ ಒಲಿಯಬೇಕು ಎನ್ನುವ ಆಸೆ ಇದ್ದರೆ ಚಾಣಕ್ಯರು ತಮ್ಮ ಗ್ರಂಥದಲ್ಲಿ ಬರೆದಿರುವ ಈ ಕೆಲವೊಂದು ಕೆಲಸಗಳನ್ನು ಮಾಡಬೇಕು.
ಮೊದಲನೇದಾಗಿ, ಪ್ರತಿಯೊಂದು ಮನೆಯಲ್ಲಿ ಅಥವಾ ಸಂಸಾರದಲ್ಲಿ ಪತಿ-ಪತ್ನಿ ಇಬ್ಬರೂ ಕೂಡ ಪರಸ್ಪರ ಸಮಾನತೆ ಹಾಗೂ ಸಹಬಾಳ್ವೆಯಿಂದ ಜೀವನ ಮಾಡಬೇಕು. ಅದರಲ್ಲೂ ಮನೆಯ ಗ್ರಹಲಕ್ಷ್ಮಿ ಆಗಿರುವ ಹೆಂಡತಿಯನ್ನು ಚೆನ್ನಾಗಿ ಗೌರವದಿಂದ ನೋಡಿಕೊಂಡರೆ ಖಂಡಿತವಾಗಿ ಆ ಮನೆಯಲ್ಲಿ ಲಕ್ಷ್ಮಿ ಬಂದು ನೆಲೆಸುತ್ತಾಳೆ. ಎರಡನೇದಾಗಿ ಯಾರ ಮನೆಯಲ್ಲಿ ಹೆಚ್ಚಾಗಿ ಗುರು ಸಂತರಿಗೆ ಗೌರವವನ್ನು ನೀಡುತ್ತಾರೆಯೋ ಹಾಗೂ ಸಾಧುಗಳಿಗೆ ಸರ್ಕಾರ ನೀಡುತ್ತಾರೆಯೆ ಮತ್ತು ಯಾರ ಮನೆಯಲ್ಲಿ ಅನೈ’ತಿಕ ಕಾರ್ಯಗಳು ನಡೆಯುವುದಿಲ್ಲವೋ ಆ ಮನೆಯಲ್ಲಿ ನ್ಯಾಯಪರತೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ.

ಮೂರನೇದಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಅಗಳು ಅನ್ನವನ್ನು ಬೆಳೆಯಲು ರೈತ ಎಷ್ಟು ಕಷ್ಟ ಪಡುತ್ತಾನೆ ಎಂದು ನಿಮಗೆಲ್ಲ ತಿಳಿದಿದೆ. ಹೀಗಾಗಿ ಅನ್ನ ಅಂದರೆ ಅನ್ನಪೂರ್ಣೇಶ್ವರಿ ಯನ್ನು ಗೌರವದಿಂದ ಕಾಣಬೇಕು. ಮನೆಯಲ್ಲಿ ಅತಿಥಿಗಳು ಬಂದರೆ ಅವರನ್ನು ಸತ್ಕರಿಸಬೇಕು ಮನೆಯಲ್ಲಿ ಕೊಳಕಾಗಿ ಇಟ್ಟುಕೊಳ್ಳಬಾರದು ಶುಚಿಯಾಗಿರಿಸಿ ಕೊಳ್ಳಬೇಕು. ಹೀಗಿದ್ದರೆ ಮಾತ್ರ ನಿಮ್ಮ ಜೀವನದಲ್ಲಿ ಹಾಗೂ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.