ಬಾಹುಬಲಿ ರಾಧೇಶ್ಯಾಮ್ ಬಜೆಟ್ ಅನ್ನು ಮೀರಿಸಿದ ಆದಿಪುರುಷ್. ಬಜೆಟ್ ಕಂಡು ಶಾಕ್ ಆದ ಜನತೆ, ಒಂದು ಸಿನಿಮಾಗೆ ಖರ್ಚು ಮಾಡುತ್ತಿರುವುದು ಎಷ್ಟು ಕೋಟಿ ಗೊತ್ತೆ??
ನಮಸ್ಕಾರ ಸ್ನೇಹಿತರೆ ಬಾಹುಬಲಿ ಸಿನಿಮಾ ಸರಣಿಗಳ ನಂತರ ರೆಬಲ್ ಸ್ಟಾರ್ ಪ್ರಭಾಸ್ ರವರ ಜನಪ್ರಿಯತೆ ಎನ್ನುವುದು ಜಾಗತಿಕವಾಗಿ ಹೆಚ್ಚಾಗಿದೆ. ಆದರೆ ಬಾಹುಬಲಿ ಸರಣಿ ಚಿತ್ರಗಳ ನಂತರ ಬಿಡುಗಡೆಯಾದ ಸಾಹೋ ಹಾಗೂ ರಾಧೇಶ್ಯಾಮ್ ಎರಡು ಚಿತ್ರಗಳು ಕೂಡ ಬಾಕ್ಸಾಫೀಸ್ ನಲ್ಲಿ ನೆಲಕಚ್ಚಿವೆ. ಹೀಗಿದ್ದರೂ ಕೂಡ ಪ್ರಭಾಸ್ ರವರ ಮುಂದಿನ ಸಿನಿಮಾ ಆಗಿರುವ ಆದಿಪುರುಷ್ ಸಿನಿಮಾಗಾಗಿ ನಿರ್ಮಾಪಕ ಹಾಗೂ t-series ಸಂಸ್ಥೆಯ ಮಾಲೀಕ ಆಗಿರುವ ಭೂಷಣ್ ಕುಮಾರ್ ರವರು ಅತ್ಯಧಿಕ ಬಜೆಟನ್ನು ಹೂಡಿಕೆ ಮಾಡಿದ್ದಾರೆ.
ಹೌದು ಗೆಳೆಯರೇ ಬಾಹುಬಲಿ 1 ಹಾಗೂ 2 ಚಿತ್ರಗಳಿಗಾಗಿ ಒಟ್ಟಾರೆಯಾಗಿ ನಿರ್ಮಾಪಕರು 430 ಕೋಟಿ ರೂಪಾಯಿ ಅನ್ನು ವೆಚ್ಚ ಮಾಡಿದರೂ ಅದರ ಪ್ರತಿಫಲವಾಗಿ ಅವರಿಗೆ 2300 ಕೋಟಿ ರೂಪಾಯಿ ಹಿಂತಿರುಗಿ ಬಂದಿದೆ. ಅದಾದನಂತರ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರುವ ಸಾಹೋ ಚಿತ್ರಕ್ಕಾಗಿ 350 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಅದರಿಂದ ಕೂಡ ಹೆಚ್ಚಿನ ಮಟ್ಟದ ಲಾಭ ಸಿಗಲಿಲ್ಲ ಹಾಗೂ ಪ್ರತಿಕ್ರಿಯೆ ಕೂಡ ನೀರಸವಾಗಿತ್ತು. ಅದಾದನಂತರ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ರಾಧೇಶ್ಯಾಮ್ ಚಿತ್ರಕ್ಕಾಗಿ 300 ಕೋಟಿ ರೂಪಾಯಿಗೂ ಅಧಿಕ ಬಜೆಟ್ ಹೂಡಲಾಗಿತ್ತು ಆದರೆ ಇದು ಅಕ್ಷರಶಃ ಬಾಕ್ಸಾಫೀಸ್ ನಲ್ಲಿ ನೆಲಕಚ್ಚಿತ್ತು. ಆದರೆ ಈಗ ತಾನಾಜಿ ಖ್ಯಾತಿಯ ನಿರ್ದೇಶಕ ಓಂ ರಾವತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾಗೂ ರೆಬಲ್ ಸ್ಟಾರ್ ಪ್ರಭಾಸ್ ನಾಯಕತ್ವದಲ್ಲಿ ಮೂಡಿ ಬಂದಿರುವ ಆದಿಪುರುಷ್ ಸಿನಿಮಾಗಾಗಿ 500 ಕೋಟಿ ರೂಪಾಯಿ ಬಜೆಟ್ ಅನ್ನು ಭೂಷಣ್ ಕುಮಾರ್ ಹೂಡಿಕೆ ಮಾಡಿದ್ದಾರೆ.

ಈ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಹಾಗೂ ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ರವರು ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ನಷ್ಟಗಳ ನಡುವೆಯೂ ಕೂಡ ಪ್ರಭಾಸ್ ರವರ ಸಿನಿಮಾಗಾಗಿ ದುಡ್ಡು ಸುರಿಯಲು ನಿರ್ಮಾಪಕರು ಯಾವುದೇ ಹಿಂಜರಿಕೆಯಿಲ್ಲದೆ ಮುಂದೆ ಬರುತ್ತಿದ್ದಾರೆ. ನಿರ್ಮಾಪಕ ಭೂಷಣ್ ಕುಮಾರ್ ಹೇಳಿರುವಂತೆ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಟಿಕೆಟ್ ದರವನ್ನು ಕೂಡ ಹೆಚ್ಚಿಸಲಾಗುತ್ತದೆ. ಯಾಕೆಂದರೆ ಇದೊಂದು ಮಹೋನ್ನತ ವಾಗಿ ನಿರ್ಮಾಣಗೊಂಡಿರುವ ಸಿನಿಮಾ ಇದು ಜೀವಮಾನದಲ್ಲಿ ಕೆಲವೊಮ್ಮೆ ಬಿಡುಗಡೆ ಆಗುವಂತಹ ಸಿನಿಮಾಗಳ ಪಟ್ಟಿಯಲ್ಲಿ ಸೇರುತ್ತದೆ ಹೀಗಾಗಿ ಈ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಖಂಡಿತವಾಗಿ ಸಿನಿಮಾ ಥಿಯೇಟರ್ ಗಳಿಗೆ ಬರುತ್ತಾರೆ ಎಂಬುದಾಗಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.