ಈ ಬಾರಿ ಆರ್ಸಿಬಿ ಫೈನಲ್ ಗೆ ಹೋಗದೆ ಸೋತು ಮನೆಗೆ ಬರಲು ಕಾರಣ ಆ ಒಬ್ಬ ಆಟಗಾರ ಮಾತ್ರ. ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ ಹೊಸ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಹೌದು ಗೆಳೆಯರೇ ವಿರಾಟ್ ಕೊಹ್ಲಿ ಅವರ ಬದಲಿಗೆ ಡುಪ್ಲೆಸಿಸ್ ರವರು ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಹೀಗಾಗಿ ಖಂಡಿತವಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಚಾಂಪಿಯನ್ ಆಗುತ್ತದೆ ಎಂಬುದಾಗಿ ಎಲ್ಲಾ ಅಭಿಮಾನಿಗಳು ಭಾವಿಸಿದ್ದರು.
ಆದರೆ ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಾರ್ಧದಲ್ಲಿ ಸತತವಾಗಿ ಗೆಲುವು ಸಾಧಿಸಲು ಯಶಸ್ವಿಯಾಯಿತು ಆದರೂ ಕೂಡ ಐಪಿಎಲ್ ನ ದ್ವಿತೀಯಾರ್ಧ ಪ್ರಾರಂಭವಾದಾಗ ಸತತವಾಗಿ ಸೋಲುಗಳ ಮೂಲಕ ಕಂಗೆಟ್ಟಿತು. ಇನ್ನು ತಂಡದಲ್ಲಿ ಹಲವಾರು ಕ್ರಿಕೆಟಿಗರು ಆಗಾಗ ಕಳಪೆ ಪ್ರದರ್ಶನವನ್ನು ನೀಡಿರಬಹುದು ಆದರೆ ಒಬ್ಬ ಆಟಗಾರ ಮಾತ್ರ ತಂಡದ ಸೋಲಿಗೆ ಕಾರಣರಾಗಿದ್ದಾರೆ ಎಂಬುದಾಗಿ ಎಲ್ಲಾ ಆರ್ಸಿಬಿ ಅಭಿಮಾನಿಗಳು ಈಗ ಆ ಆಟಗಾರನನ್ನು ದೂಷಿಸುತ್ತಿದ್ದಾರೆ. ಅಷ್ಟಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಪ್ರಮುಖ ಕಾರಣರಾಗಿರುವ ಆ ಆಟಗಾರ ಯಾರು ಎಂಬುದರ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.
ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪ್ರಕಾರ ಆರ್ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣರಾಗಿರುವ ಆಟಗಾರ ಎಂದರೆ ಅದು ಮೊಹಮ್ಮದ್ ಸಿರಾಜ್. ಈ ಬಾರಿ ಆರ್ಸಿಬಿ ತಂಡ ರಿಟೈನ್ ಮಾಡಿಕೊಂಡಿರುವ ಆಟಗಾರರಲ್ಲಿ ಸಿರಾಜ್ ಕೂಡ ಒಬ್ಬರಾಗಿದ್ದಾರೆ. ಹೌದು ಗೆಳೆಯರೇ ಮೊಹಮ್ಮದ್ ಸಿರಾಜ್ ರವರು ಈ ಬಾರಿಯ ಆಡಿರುವ 15 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 9 ವಿಕೆಟ್ ಮಾತ್ರ. ಅದು ಕೂಡ ಹತ್ತಿರ ಸರಾಸರಿಯಲ್ಲಿ ನೀಡಿ ದುಬಾರಿ ಆಗಿದ್ದಾರೆ. ಇನ್ನು ರಾಜಸ್ಥಾನ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕಬೇಕಾಗಿದ್ದ ಸಂದರ್ಭದಲ್ಲಿ ಎರಡು ಓವರ್ ಗೆ ಬರೋಬ್ಬರಿ 32 ರನ್ನುಗಳನ್ನು ನೀಡಿದ್ದರು ಹಾಗೂ ಯಾವುದೇ ವಿಕೆಟ್ ಅನ್ನು ಕೂಡ ಕಿತ್ತಿರಲಿಲ್ಲ. ಹೀಗಾಗಿ ಆರ್ಸಿಬಿ ತಂಡದ ಸೋಲಿಗೆ ನೇರ ಹೊಣೆ ಸಿರಾಜ್ ಎಂಬುದಾಗಿ ಅಭಿಮಾನಿಗಳು ಆರೋಪಿಸಿದ್ದಾರೆ.