ಕಮಲ್ ಹಾಸನ್ ರವರಿಗೆ ಶಾಕ್ ಕೊಡಲು ತಯಾರಾದ ಕನ್ನಡಿಗರು. ಹೊಸ ಸಿನೆಮಾ ಬಿಡುಗಡೆಯಾದ ಬೆನ್ನಲ್ಲೇ ಬಾರಿ ಶಾಕ್. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೆ ತಲಪತಿ ವಿಜಯ್ ಸಿನಿಮಾ ಆಗಿರುವ ಮಾಸ್ಟರ್ ಸಿನಿಮಾವನ್ನು ನಿರ್ದೇಶಿಸಿರುವ ಲೋಕೇಶ್ ಕನಗರಜ್ ನಿರ್ದೇಶನ ಮಾಡಿರುವ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅತ್ಯುತ್ತಮ ವಿಮರ್ಶೆಗಳನ್ನು ಪಡೆದುಕೊಂಡು ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಸಿನಿಮಾದಲ್ಲಿ ಕೇವಲ ಕಮಲ್ ಹಾಸನ್ ರವರು ಮಾತ್ರವಲ್ಲದೆ ತಮಿಳು ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ನಟ ಆಗಿರುವ ವಿಜಯ ಸೇತುಪತಿ ಹಾಗೂ ಮಲಯಾಳಂ ಸಿನಿಮಾದ ಸ್ಟಾರ್ ಆಗಿರುವ ಫಹಾದ್ ಫಾಸಿಲ್ ರವರು ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಅತಿಥಿ ಪಾತ್ರದಲ್ಲಿ ಸ್ಟಾರ್ ನಟ ಸೂರ್ಯ ರವರು ಕೂಡ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಮತ್ತಷ್ಟು ಸಂತೋಷವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಜೂನ್3ರಂದು ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾಗೆ ಚಿತ್ರ ಪ್ರೇಮಿಗಳಿಂದ ಸಂಪೂರ್ಣ ಬೆಂಬಲ ದೊರಕುತ್ತಿದ್ದು ಕರ್ನಾಟಕದಲ್ಲಿ ಕೆಲವರು ಚಿತ್ರವನ್ನು ಬಹಿಷ್ಕಾರ ಹಾಕುವ ಕುರಿತಂತೆ ಪ್ರತಿಭಟನೆಯನ್ನು ಹಾಗೂ ಧ್ವನಿಯನ್ನು ಎತ್ತಿದ್ದಾರೆ. ಅಷ್ಟಕ್ಕೂ ಅದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಗೆಳೆಯರ ಜೂನ್ 2ರಂದು ಕಮಲ್ ಹಾಸನ್ ಅವರು ಬೆಂಗಳೂರಿಗೆ ಪ್ರಮೋಷನ್ ನಿಮಿತ್ತ ಬಂದಿದ್ದರು. ಆದರೆ ಈ ಸಂದರ್ಭದಲ್ಲಿ ಕಮಲ್ ಹಾಸನ್ ರವರ ಸಂಪೂರ್ಣವಾಗಿ ತಮಿಳಿನಲ್ಲಿ ಮಾತನಾಡಿದರು. ಇದು ಕನ್ನಡಪರ ವ್ಯಕ್ತಿಗಳಿಗೆ ಅಸಮಧಾನವನ್ನು ತಂದಿದ್ದು ಈಗಾಗಲೇ ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಇಲ್ಲದಿದ್ದರೆ ಬಿಸಿನೆಸ್ ಇಲ್ಲ ಎಂಬುದಾಗಿ ವಿಕ್ರಮ್ ಚಿತ್ರತಂಡದ ವಿರುದ್ಧ ಹರಿಹಾಯ್ದಿದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನಗಳು ಪ್ರಾರಂಭವಾಗಿದ್ದು ಇದು ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿದರೆ ಖಂಡಿತವಾಗಿ ವಿಕ್ರಂ ಕಲೆಕ್ಷನ್ ಕರ್ನಾಟಕದಲ್ಲಿ ಕಮ್ಮಿಯಾಗುವುದಂತೂ ನಿಜ.