ಇದ್ದಕ್ಕಿದ್ದ ಹಾಗೆ ಕನ್ನಡಿಗ ಕೆಎಲ್ ರಾಹುಲ್ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ ಪಾಕ್ ಕ್ರಿಕೆಟಿಗ. ಯಾಕೆ ಗೊತ್ತೆ??

24

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಎಲ್ ರಾಹುಲ್ ರವರು ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಕಪ್ತಾನನಾಗಿ ಲಕ್ನೋ ತಂಡವನ್ನು ಎಲಿಮಿನೇಟರ್ ಹಂತಕ್ಕೆ ತಲುಪುವಂತೆ ಮಾಡಿದ್ದಾರೆ ಹಾಗೂ ಬ್ಯಾಟ್ಸ್ ಮ್ಯಾನ್ ಆಗಿ ಕೂಡ ಈ ಬಾರಿ ಐಪಿಎಲ್ ನಲ್ಲಿ ಎರಡನೇ ಅತ್ಯಂತ ಹೆಚ್ಚು ಸ್ಕೋರ್ ಮಾಡಿರುವ ಬ್ಯಾಟ್ಸ್ಮನ್ ಆಗಿದ್ದಾರೆ.

ಹೌದು ಗೆಳೆಯರೇ ಈ ಬಾರಿಯ ಹೊಸ ತಂಡ ಆಗಿರುವ ಲಕ್ನೋ ತಂಡದ ಕಪ್ತಾನನಾಗಿ ಹೊಸ ತಂಡವನ್ನು ಲೀಗ್ ಪಂದ್ಯಗಳ ಉದ್ದಕ್ಕೂ ಸಮತೋಲನವಾಗಿ ಗೆಲುವಿನ ಕಡೆಗೆ ತಂಡ ಹೋಗುವಂತೆ ಮಾಡಿದ್ದರು. ಮೊದಲ ಅಥವಾ ಎರಡನೇ ಸ್ಥಾನದಲ್ಲಿ ಲೀಗ್ ಹಂತವನ್ನು ಮುಗಿಸಬೇಕಾಗಿದ್ದ ಲಕ್ನೋ ತಂಡ ಕೊನೆಯ ಕೆಲವು ತಪ್ಪುಗಳಿಂದಾಗಿ ಮೂರನೇ ಹಂತದಲ್ಲಿ ಮುಗಿಸಿತ್ತು. ಹೀಗಾಗಿ ತಂಡ ಮೂರನೇ ಸ್ಥಾನದಲ್ಲಿ ಪ್ಲೇಆಫ್ ಅಂತ್ಯದಲ್ಲಿ ಕೇವಲ ಒಂದೇ ಒಂದು ಅವಕಾಶವನ್ನು ಮಾತ್ರ ಪಡೆಯಲು ಸಾಧ್ಯವಾಗಿತ್ತು. ಇನ್ನು ಅವಕಾಶದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡ ಸುಲಭವಾಗಿ ಸೋತು ಶರಣಾಯಿತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಮಾಜಿ ಕ್ರಿಕೆಟಿಗ ರಶಿದ್ ಲತಿಫ್ ರವರು ಕೆಎಲ್ ರಾಹುಲ್ ಅವರ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕೆ ಎಲ್ ರಾಹುಲ್ ರವರು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರವರಂತೆ ಅತ್ಯುತ್ತಮ ಕ್ರಿಕೆಟಿಗ ಹೌದು ಆದರೆ ಅವರಿಬ್ಬರು ಕೊನೆಯವರೆಗೆ ಇದ್ದರೆ ತಂಡ ಗೆಲ್ಲುತ್ತದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡದ ಪರವಾಗಿ ಕೆಎಲ್ ರಾಹುಲ್ ರವರು ಕೊನೆಯವರೆಗೆ ಇದ್ದರೂ ಕೂಡ ತಂಡ ಸೋಲಲು ಅವರೇ ಪ್ರಮುಖ ಕಾರಣರಾಗಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೊನೆಯವರೆಗೆ ಇದ್ದರೆ ತಂಡ ಗೆಲ್ಲುತ್ತದೆ ಆದರೆ ಕೆ ಎಲ್ ರಾಹುಲ್ ರವರು ಕೊನೆಯವರೆಗೆ ಇದ್ದರೆ ತಂಡ ಸೋಲುತ್ತದೆ ಎಂಬುದಾಗಿ ಟೀಕಿಸಿದ್ದಾರೆ. ರಶಿದ್ ಲತಿಫ್ ರವರ ಪ್ರತಿಕ್ರಿಯೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.