ಜೀವನದಲ್ಲಿ ನಿಮ್ಮ ಬಳಿ ಹಣ ಶಾಶ್ವತವಾಗಿ ಉಳಿಯಬೇಕು ಎಂದರೆ ಕೇವಲ ಈ ವಾಸ್ತು ಟಿಪ್ಸ್ ಫಾಲೋ ಮಾಡಿ ಸಾಕು..

22

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಸಾಕಷ್ಟು ಹಣವನ್ನು ಸಂಪಾದಿಸಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಬೇಕಾಗುವಷ್ಟು ಹಣವನ್ನು ಸಂಪಾದಿಸಲು ಸಾಧ್ಯವಿಲ್ಲ. ಇಲ್ಲಿ ಕೆಲವೊಂದು ವಾಸ್ತುದೋಷದ ಕಾರಣದಿಂದಲೂ ಕೂಡ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ಅದಕ್ಕಾಗಿಯೇ ನೀವು ಕೆಲವೊಂದು ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. ಬನ್ನಿ ಅದೇನೆಂದು ತಿಳಿಯೋಣ.

ಮೊದಲನೇದಾಗಿ ತುಳಸಿ ಗಿಡವನ್ನು ನಮ್ಮ ಧರ್ಮದಲ್ಲಿ ಪವಿತ್ರ ಎಂದು ಭಾವಿಸಲಾಗುತ್ತದೆ. ಇದನ್ನು ನಿಮ್ಮ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಟ್ಟರೆ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ವಚ್ಛಗೊಳಿಸಿ ಬಿಳಿಬಣ್ಣದ ಸ್ಫಟಿಕವನ್ನು ಇಟ್ಟರೆ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಹಾಗೂ ಆರ್ಥಿಕಸ್ಥಿತಿ ಮಟ್ಟವು ಕೂಡ ಉನ್ನತ ವಾಗುತ್ತದೆ. ವೃತ್ತಿಜೀವನ ಅಥವಾ ವ್ಯಾಪಾರ ಸದಾ ವೃದ್ಧಿಯಾಗಲು ಈಶಾನ್ಯ ಜಾಗವನ್ನು ನೀವು ಸ್ವಚ್ಛವಾಗಿ ಇಡಲೇಬೇಕು. ಸ್ವಚ್ಛಗೊಳಿಸಲು ಅಥವಾ ಒರೆಸಲು ಬಳಸುವ ನೀರಿನಲ್ಲಿ ಸ್ವಲ್ಪ ಚಿಟಿಕೆ ಅರಿಶಿನವನ್ನು ಸೇರಿಸಿ ಸ್ವಚ್ಛಗೊಳಿಸಿದರೆ ಗುರು ಬಲಗೊಳ್ಳುತ್ತದೆ ಹಾಗೂ ಇದು ನಿಮ್ಮ ವ್ಯಾಪಾರಕ್ಕೆ ಲಾಭವನ್ನು ತಂದು ಕೊಡುತ್ತದೆ. ಉತ್ತರ ದಿಕ್ಕನ್ನು ಸಂಪತ್ತಿನ ಒಡೆಯ ಕುಬೇರನ ದಿಕ್ಕು ಎಂಬುದಾಗಿ ಪರಿಗಣಿಸಲಾಗುತ್ತದೆ.

ಇಲ್ಲಿ ಕಮಾನನ್ನು ಇಡಬೇಕು ಹಾಗೂ ಉತ್ತರ ದಿಕ್ಕಿಗೆ ಬಾಗಿಲು ತೆರೆಯುವಂತೆ ಬೀರುವನ್ನು ಇಡಬೇಕು. ಇದರಿಂದಾಗಿ ಸಂಪತ್ತಿನಲ್ಲಿ ಹೆಚ್ಚಳ ಕಂಡುಬರುತ್ತದೆ. ಕ್ರಾಸ್ಸುಲ ಸಸ್ಯವನ್ನು ಮನೆಯಲ್ಲಿ ಇಡುವುದರಿಂದಾಗಿ ಸಕರಾತ್ಮಕ ಶಕ್ತಿಗಳು ಹೆಚ್ಚಾಗಿ ಮನೆಯಲ್ಲಿ ಆರ್ಥಿಕ ಸ್ಥಿತಿ ಗುಣವೂ ಕೂಡ ಹೆಚ್ಚಾಗುತ್ತಾದೆ. ಸೂರ್ಯ ಯಂತ್ರವನ್ನು ಮನೆಯಲ್ಲಿ ಸ್ಥಾಪಿಸುವ ಮೂಲಕ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಬಹುದಾಗಿದೆ. ನಕರಾತ್ಮಕ ಶಕ್ತಿಗಳು ದೂರ ಆಗುವ ಕಾರಣದಿಂದಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ಹಾಗೂ ಎಲ್ಲರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ.

Get real time updates directly on you device, subscribe now.