ತಾನು ಯಾರಿಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತದೆ ಎಂದು ತಿಳಿಸಿ ಭಾರತೀಯ ಯುವ ಕ್ರಿಕೆಟಿಗನನ್ನು ಆಯ್ಕೆಮಾಡಿದ ರಶೀದ್ ಖಾನ್. ಯಾರು ಗೊತ್ತೇ ಆ ಕ್ರಿಕೆಟಿಗ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇನ್ನೂ ಕೇವಲ 23 ವರ್ಷ ದವರಿರಬೇಕಾದರೆ ಅಫ್ಘಾನಿಸ್ತಾನ್ ಮೂಲದ ರಶೀದ್ ಖಾನ್ ರವರು ಈಗಾಗಲೇ ಜಾಗತಿಕ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದು ಪ್ರತಿಯೊಬ್ಬ ಸ್ಟಾರ್ ಬ್ಯಾಟ್ಸ್ಮನ್ಗಳು ಕೂಡ ಅವರ ಬೌಲಿಂಗ್ ಅನ್ನು ಎದುರಿಸಲು ಪರದಾಡುವಂತೆ ಮಾಡಿದ್ದಾರೆ.ಹೌದು ಗೆಳೆಯರೇ ಅದರಲ್ಲೂ ಟಿ-ಟ್ವೆಂಟಿ ಮಾದರಿಯ ಕ್ರಿಕೆಟ್ ನಲ್ಲಿ ರಶೀದ್ ಖಾನ್ ಅವರ ಸಾಧನೆ ಇನ್ನಷ್ಟು ಉತ್ತಮವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಕೂಡ ಚಾಂಪಿಯನ್ ತಂಡವಾಗಿರುವ ಗುಜರಾತ್ ಟೈಟಾನ್ಸ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದು ಗೆಲುವಿನ ಕಾರಣೀಭೂತರಾಗಿರುವ ಆಟಗಾರರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ.

ಇನ್ನು ಫೈನಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರನ್ನು ಕಡಿಮೆ ಮೊತ್ತದಲ್ಲಿ ನಿಯಂತ್ರಣ ಮಾಡುವಲ್ಲಿ ರಶೀದ್ ಖಾನ್ ರವರ ಪಾತ್ರವು ಕೂಡ ಪ್ರಮುಖವಾಗಿದ್ದು ಎಂದರೆ ತಪ್ಪಾಗಲಾರದು. ರಶೀದ್ ಖಾನ್ ರವರ ಬೌಲಿಂಗ್ ನೋಡುವುದಾದರೆ ಐಪಿಎಲ್ ನಲ್ಲಿ 97 ಪಂದ್ಯಗಳನ್ನು ಆಡಿದ್ದು ಅವರ ಎಕಾನಮಿ ರೇಟ್ ನೋಡಿದರೆ ಕೇವಲ 6.38 ಇದೆ. ಅಂದರೆ ಕಂಡಿತವಾಗಿ ಬ್ಯಾಟ್ಸ್ಮನ್ಗಳು ರಶೀದ್ ಖಾನ್ ಅವರ ಬೌಲಿಂಗ್ ನಲ್ಲಿ ರನ್ ಗಳಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಪ್ರತಿಯೊಬ್ಬ ಬ್ಯಾಟ್ಸ್ ಮನ್ ಗಳಿಗೆ ಕಬ್ಬಿಣದ ಕಡಲೆಕಾಯಿ ಆಗಿರುವ ರಶೀದ್ ಖಾನ್ ರವರಿಗೆ ಮಾತ್ರ ಈ ಭಾರತೀಯ ಯುವ ಆಟಗಾರನಿಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟ ಅಂತೆ.

ಹೌದು ಗೆಳೆಯರೆ ಗುಜರಾತ್ ಟೈಟನ್ಸ್ ತಂಡದಲ್ಲಿ ಪ್ರಮುಖ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿರುವ ಶುಭಮನ್ ಗಿಲ್ ರವರಿಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟ ಎಂಬುದಾಗಿ ರಶೀದ್ ಖಾನ್ ಅವರು ಅಭಿಪ್ರಾಯಪಟ್ಟಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಶುಭಮನ್ ಪ್ರಮುಖವಾದ ಪಾತ್ರವನ್ನು ವಹಿಸಿದ್ದು ಫೈನಲ್ ಪಂದ್ಯದಲ್ಲಿ 45 ರನ್ನುಗಳನ್ನು ಬಾರಿಸುವ ಮೂಲಕ ಗೆಲುವಿನ ಪ್ರಮುಖ ಕೇಂದ್ರ ಬಿಂದು ಕೂಡ ಆಗಿದ್ದಾರೆ. ಬೇರೆ ಸ್ಟಾರ್ ಆಟಗಾರರನ್ನು ಹೊರತುಪಡಿಸಿ ರಶೀದ್ ಖಾನ್ ರವರು ಶುಭಮನ್ ಗಿಲ್ ರವರನ್ನು ಈ ವಿಭಾಗಕ್ಕೆ ಆಯ್ಕೆ ಮಾಡಿರುವ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.