ಲವ್ ಫೇಲ್ಯೂರ್ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ ನನಗೆ ನಿಜಕ್ಕೂ ಲವ್ ಫೇಲ್ಯೂರ್ ಆಗಿಲ್ಲ ಎಂದದ್ದು ಯಾಕೆ ಗೊತ್ತಾ?? ಇದೇನಪ್ಪ ಹೊಸ ಟ್ವಿಸ್ಟ್ ಎಂದ ನೆಟ್ಟಿಗರು..
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹೊಸ ಸಿನಿಮಾ ಆಗಿರುವ 777 ಚಾರ್ಲಿ ಸಿನಿಮಾ ಇದೇ ಜೂನ್ 10ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಹೀಗಾಗಿ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡ ಹಲವಾರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದೆ.ಇನ್ನು ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗಷ್ಟೇ ನಿರೂಪಕಿ ಅನುಶ್ರೀ ಅವರ ಯುಟ್ಯೂಬ್ ಚಾನಲ್ ನಲ್ಲಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ.
ಅದು ಕೂಡ ರಕ್ಷಿತ್ ಶೆಟ್ಟಿ ಅವರು ಸಂದರ್ಶನದಲ್ಲಿ ಭಾಗಿಯಾಗಿರುವುದು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಜೊತೆಗೆ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಪರಸ್ಪರ ನಟರು ಹಲವಾರು ಪ್ರಶ್ನೆಗಳನ್ನು ಕೇಳಿಕೊಂಡಿದ್ದು ಅದಕ್ಕೆ ಸಿಕ್ಕಿರುವ ಉತ್ತರವೂ ಕೂಡ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ವಿಡಿಯೋನ ಪ್ರೋಮೋ ಮಾತ್ರ ಬಿಡುಗಡೆಯಾಗಿದ್ದು ಪ್ರಮೋದ್ ಇಂದಲೇ ಈ ವಿಡಿಯೋ ಸಾಕಷ್ಟು ಹೈಪ್ ಪಡೆದುಕೊಂಡಿದೆ. ಈ ಪ್ರೋಮೋ ದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ರಕ್ಷಿತ್ ಶೆಟ್ಟಿ ರವರಿಗೆ ಕೇಳಿರುವ ಒಂದು ಪ್ರಶ್ನೆ ಈಗ ದೊಡ್ಡ ಮಟ್ಟದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಚರ್ಚೆಗೆ ಒಳಗಾಗಿದೆ ಎಂದು ಹೇಳಬಹುದಾಗಿದೆ.
ಹೌದು ಗೆಳೆಯರೇ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರಿಗೆ ನಿಮಗೆ ಲವ್ ಫೇಲ್ಯೂರ್ ಆಗಿರುವ ಕಾರಣಕ್ಕೆ ನೀವು ಇಷ್ಟೊಂದು ಸಕ್ಷೆಸ್ ಕಂಡಿದ್ದೀರಾ ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಜಗತ್ತು ನನಗೆ ಲವ್ ಫೇಲ್ಯೂರ್ ಆಗಿದೆ ಎಂಬುದಾಗಿ ಅಂದುಕೊಂಡಿದ್ದೆ ಆದರೆ ನನಗೆ ಹಾಗೆ ಆಗಿಲ್ಲ ಎಂಬುದಾಗಿ ನಗುತ್ತಲೇ ತಮಾಷೆಯಿಂದ ಉತ್ತರ ನೀಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನವರ ನಿಶ್ಚಿತಾರ್ಥವು ಕೂಡ ನಡೆದು ಮದುವೆ ಕೂಡ ನಿಗದಿಯಾಗಿತ್ತು. ಆದರೆ ಇವರಿಬ್ಬರ ನಡುವೆ ಯಾವ ಕಾರಣದಿಂದಾಗಿ ಮದುವೆ ಮುರಿದುಬಿತ್ತು ಎಂಬುದು ಇಂದಿಗೂ ಕೂಡ ತಿಳಿದುಬಂದಿಲ್ಲ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.