ಸೂರ್ಯನ ಬೆಳಕಿನಿಂದಲೂ ಕೂಡ ನೀವು ತಿಂಗಳಿಗೆ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು, ಹೇಗೆ ಗೊತ್ತೇ?? ಉತ್ತಮ ಆದಾಯದ ಮೂಲವೇನು ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕಿಂತ ಜಾಸ್ತಿ ವ್ಯಾಪಾರ-ವ್ಯವಹಾರ ಮಾಡುವುದೇ ಸೇಫ್ ಎನ್ನುವುದಾಗಿ ಭಾವಿಸಿರುತ್ತಾರೆ. ಇದು ನಿಜ ಕೂಡ ಹೌದು. ಆದರೆ ಯಾವ ಉದ್ಯಮವನ್ನು ಮಾಡಿದರೆ ಕಡಿಮೆ ಬಂಡವಾಳದಲ್ಲಿ ಅತ್ಯಂತ ಹೆಚ್ಚಿನ ಆದಾಯವನ್ನು ಪಡೆಯಬಹುದು ಎನ್ನುವುದರ ಕುರಿತಂತೆ ಗೊಂದಲವಿರುತ್ತದೆ. ಅವುಗಳಲ್ಲಿ ಒಂದು ವಿಧಾನವನ್ನು ಇಂದು ನಾವು ನಿಮಗೆ ಹೇಳಲು ಹೊರಟಿದ್ದೇವೆ. ತಪ್ಪದೇ ಈ ವಿಚಾರವನ್ನು ಕೊನೆಯವರೆಗೂ ಓದಿ.

ಹೆಚ್ಚಿನ ಬಂಡವಾಳದ ಅಗತ್ಯವೂ ಕೂಡ ಇಲ್ಲ. ಕೇವಲ ಎಪ್ಪತ್ತು ಸಾವಿರ ರೂಪಾಯಿಯಲ್ಲಿ ಈ ವ್ಯವಹಾರವನ್ನು ಆರಂಭಿಸಬಹುದಾಗಿದೆ. ಒಂದು ಲಕ್ಷಕ್ಕಿಂತಲೂ ಕಡಿಮೆ ಬಂಡವಾಳದಲ್ಲಿ ವ್ಯವಹಾರವನ್ನು ಆರಂಭಿಸಬೇಕು ಎನ್ನುವ ಯೋಚನೆ ನಿಮ್ಮಲ್ಲಿದ್ದರೆ ಸೋಲಾರ್ ಫಲಕಗಳ ವ್ಯಾಪಾರವನ್ನು ನೀವು ಮಾಡಬಹುದಾಗಿದೆ. ಒಂದು ವೇಳೆ ನಿಮ್ಮ ಮನೆಯ ಮೇಲೆ ಖಾಲಿ ಜಾಗವಿದ್ದರೆ ಸೋಲಾರ್ ಫಲಕವನ್ನು ನೀವು ಅಳವಡಿಸಿಕೊಂಡು ಈ ವ್ಯಾಪಾರವನ್ನು ಪ್ರಾರಂಭಿಸಬಹುದಾಗಿದೆ.

ಈ ಸೋಲಾರ್ ಫಲಕಗಳಿಂದ ಉತ್ಪಾದನೆಯಾಗುವ ಅಂತಹ ವಿದ್ಯುತ್ ನಿಂದ ಗ್ರಿಡ್ ಗಳಿಗೆ ಸರಬರಾಜು ಮಾಡುವ ಮೂಲಕ ವ್ಯಾಪಾರವನ್ನು ಮಾಡಬಹುದಾಗಿದೆ. ಕೇಂದ್ರ ಸರ್ಕಾರದಿಂದ ಮನೆಯ ಮಹಡಿಯ ಮೇಲೆ ಸೌರ ಸ್ಥಾವರಗಳನ್ನು ಸ್ಥಾಪಿಸುವವರಿಗೆ 30% ಸಬ್ಸಿಡಿಯನ್ನು ನೀಡುವುದಾಗಿ ಘೋಷಿಸಿದೆ. ಇದರಿಂದಾಗಿ ನಿಮಗೆ 30000 ಇನ್ನಷ್ಟು ಎಕ್ಸ್ಪ್ರೆಸ್ ಸಿಗಲಿದೆ. ಅಂದರೆ ಒಂದು ಲಕ್ಷ ಹೂಡಿಕೆಯಲ್ಲಿ ನಿಮಗೆ 30% ಇನ್ನಷ್ಟು ಹೆಚ್ಚಾಗಿ ಎಂದರೆ 30000 ಆಗುತ್ತದೆ.

ಕೇಂದ್ರ ಸರ್ಕಾರ ಈ ಕಾರ್ಯಕ್ಕೆ ನೀಡುವಂತಹ ಅನುದಾನ ಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರವೂ ಕೂಡ ಸಬ್ಸಿಡಿಯಲ್ಲಿ ಕೂಡ ಹೆಚ್ಚುವರಿ ಸಿಗಬಹುದಾಗಿದೆ‌. ನೀವು ಈ ಕಾರ್ಯಕ್ಕಾಗಿ ಬ್ಯಾಂಕ್ಗಳಿಂದ ಸಹಾಯಧನ ಯೋಜನೆ ಅಥವಾ ಕುಸುಮ್ ಯೋಜನೆ ಅಡಿಯಲ್ಲಿ 60ರಿಂದ 70 ಸಾವಿರ ರೂಪಾಯಿ ಲೋನ್ ಅನ್ನು ತೆಗೆದುಕೊಳ್ಳಬಹುದಾಗಿದೆ. ಇನ್ನು ವ್ಯಾಪಾರ ತಿಂಗಳಿಗೆ ಕಡಿಮೆಯೆಂದರೂ 30ರಿಂದ ಗರಿಷ್ಠ ಒಂದು ಲಕ್ಷದವರೆಗೂ ಆದಾಯವನ್ನು ತಂದು ನೀಡಲಿದೆ.

ಈ ವ್ಯಾಪಾರವನ್ನು ಹೇಗೆ ಆರಂಭಿಸುವುದು ಹಾಗೂ ಇದರ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ನೀವು ಇಂಧನ ಸಂಪನ್ಮೂಲ ಸಚಿವಾಲಯದ ಅಧಿಕೃತ ವೆಬ್ಸೈಟಿನಲ್ಲಿ ಕಾಣಬಹುದಾಗಿದೆ. ಇನ್ನು ಅಳವಡಿಸಲಾಗುವ ಸೋಲಾರ್ ಫಲಕದ ಬಾಳಿಕೆ 25 ವರ್ಷಗಳು. ಇವುಗಳನ್ನು ಅತಿಸುಲಭವಾಗಿ ಅಳವಡಿಸಬಹುದಾಗಿದೆ ಹಾಗೂ ಇದರ ನಿರ್ವಹಣೆಗೆ ಹೆಚ್ಚಿನ ಹಣ ಕೊಡಬೇಕಾಗಿಲ್ಲ. ಆದರೆ ಇದಕ್ಕೆ ಅಳವಡಿಸಲಾಗುವ ಬ್ಯಾಟರಿಯನ್ನು ಹತ್ತು ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಇನ್ನು ಇದಕ್ಕೆ ಅಳವಡಿಸಲಾಗುವ ಬ್ಯಾಟರಿಯ ಬೆಲೆ ಬರೋಬ್ಬರಿ ಇಪ್ಪತ್ತು ಸಾವಿರ ರೂಪಾಯಿ.

ಇನ್ನು ಇವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ. ಇವುಗಳಲ್ಲಿ ಗ್ರಿಡ್ ಮೂಲಕ ಸರ್ಕಾರ ಅಥವಾ ಬೇರೆ ಕಂಪನಿಗಳಿಗೆ ಮಾರಾಟ ಮಾಡಿದಂತಹ ವಿದ್ಯುತ್ ಅನ್ನು ಹೊರತುಪಡಿಸಿ ನಿಮ್ಮ ವೈಯಕ್ತಿಕ ಉಪಯೋಗಕ್ಕೂ ಕೂಡ ವಿದ್ಯುತ್ತನ್ನು ಉಪಯೋಗಿಸಬಹುದಾಗಿದೆ. ಕನಿಷ್ಠ ಈ ಸೌರ ಫಲಕಗಳ ಮೂಲಕ ಹತ್ತು ಗಂಟೆಯ ಸೂರ್ಯನ ಬಿಸಿಲು ಸಿಕ್ಕರೂ ಸಾಕು 10 ಯೂನಿಟ್ ವಿದ್ಯುತ್ ಅನ್ನು ನೀವು ಉತ್ಪಾದಿಸಲಿದ್ದೀರಿ.

ಕನಿಷ್ಠಪಕ್ಷ ಇದೇ ಲೆಕ್ಕಾಚಾರದಲ್ಲಿ ಹೋದರು ಕೂಡ ನೀವು ತಿಂಗಳಿಗೆ 300 ಯೂನಿಟ್ ವಿದ್ಯುತ್ತನ್ನು ಈ ಸೌರ ಫಲಕಗಳ ಮೂಲಕ ನೀವು ಉತ್ಪಾದಿಸಲಿದ್ದೀರಿ. ಸೌರಫಲಕಗಳನ್ನು ಖರೀದಿಸಲು ರಾಜ್ಯ ಸರ್ಕಾರದ ಇಂದಿನ ಇಲಾಖೆ ಅಭಿವೃದ್ಧಿ ಕೇಂದ್ರದಲ್ಲಿ ಅಥವಾ ಖಾಸಗಿ ಮಾರಾಟಗಾರರಲ್ಲಿ ಕೂಡ ನೀವು ಖರೀದಿಸಬಹುದಾಗಿದೆ. ತಪ್ಪದೇ ಶೀಘ್ರದಲ್ಲಿ ಈ ವ್ಯವಹಾರವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಆರಂಭ ಮಾಡುವುದು ಉತ್ತಮ ಎಂದು ಭಾವಿಸುತ್ತೇವೆ. ಈ ವ್ಯಾಪಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.