ಡೆಲ್ಲಿ ಪರ ಕಣಕ್ಕಿಳಿದಿದ್ದ ಚೇತನ್ ಸಕಾರಿಯಾ ಐಪಿಎಲ್ ಫೈನಲ್ ನಲ್ಲಿ ರಾಜಸ್ಥಾನ ತಂಡಕ್ಕೆ ಬೆಂಬಲ ನೀಡಿದ್ದು ಯಾಕೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ 15ನೇ ಆವೃತ್ತಿಯ ಐಪಿಎಲ್ 2022 ರ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಬಲಿಷ್ಠ ರಾಜಸ್ತಾನ ರಾಯಲ್ಸ್ ತಂಡವನ್ನು ಸುಲಭವಾಗಿ ಮಣಿಸುವ ಮೂಲಕ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಬಾರಿಯ ಐಪಿಎಲ್ ನಲ್ಲಿ ಪ್ರತಿಯೊಂದು ಪಂದ್ಯಗಳು ಕೂಡ ರೋಚಕತೆಯನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಆರು ವರ್ಷಗಳ ನಂತರ ಈ ಬಾರಿಯ ಐಪಿಎಲ್ ನಲ್ಲಿ ಹೊಸ ಚಾಂಪಿಯನ್ ಅನ್ನೋ ನೋಡುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ದೊರೆತಿದೆ.
ಈ ಬಾರಿ ಖಂಡಿತವಾಗಿ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ನಲ್ಲಿ ಎರಡನೇ ಬಾರಿಗೆ ಪ್ರಶಸ್ತಿಗೆ ಭಾಜನ ವಾಗುತ್ತದೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಲೀಗ್ ಹಂತದಿಂದಲೂ ಕೂಡ ಡಾಮಿನೇಟ್ ಮಾಡಿಕೊಂಡು ಬರುತ್ತಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಫೈನಲ್ ನಲ್ಲಿ ಕೂಡ ಅಧಿಕಾರಯುತವಾಗಿ ಗೆಲ್ಲಲು ಸಾಧ್ಯವಾಯಿತು. ನಿಮಗೆ ಗೊತ್ತಾ ಗೆಳೆಯರೇ ಈ ಬಾರಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿದ್ದ ಚೇತನ್ ಸಕರಿಯ ಫೈನಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಜೆರ್ಸಿ ಅನ್ನು ಹಾಕಿಕೊಂಡು ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಸಪೋರ್ಟ್ ಮಾಡುವುದಕ್ಕೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಡೆಲ್ಲಿ ತಂಡದ ಆಟಗಾರರ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಪೋರ್ಟ್ ಮಾಡಲು ಕಾರಣ ಏನು ಎಂಬುದಾಗಿ ನೀವು ಯೋಚಿಸುತ್ತಿರಬಹುದು ಅಲ್ಲಿಯೂ ಕೂಡ ಒಂದು ಕಾರಣವಿದೆ. ಹೌದು ಗೆಳೆಯರೇ ಚೇತನ್ ಸಕರಿಯಾ ರವರು ಮೊದಲು ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಕಳೆದ ಸೀಸನ್ನಲ್ಲಿ ಆಡುವ ಮೂಲಕ ರಾಜಸ್ಥಾನ ರಾಯಲ್ಸ್ ಅವರಿಗೆ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಎಲ್ಲರ ಮುಂದೆ ಗುರುತಿಸಿಕೊಳ್ಳುವ ಅವಕಾಶವನ್ನು ನೀಡಿತ್ತು. ಇಷ್ಟು ಮಾತ್ರವಲ್ಲದೆ ಕಳೆದ ಬಾರಿ ಮಹಾಮಾರಿ ವಕ್ಕರಿಸಿದ ಸಂದರ್ಭದಲ್ಲಿ ಚೇತನ್ ರವರ ತಂದೆಗೂ ಕೂಡ ಈ ಮಹಾಮಾರಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್ಮೆಂಟ್ ಚೇತನ ರವರಿಗೆ ಆರ್ಥಿಕವಾಗಿ ಸಹಾಯ ಮಾಡಿ ತಂದೆಯ ಚಿಕಿತ್ಸೆಗೆ ಸಹಾಯ ಮಾಡಿತ್ತು. ಇದರ ಗೌರವಾರ್ಥವಾಗಿ ಇಂದಿಗೂ ಕೂಡ ಚೇತನ್ ಸಕರಿಯಾ ರವರು ತಮ್ಮ ಮೊದಲ ತಂಡಕ್ಕೆ ಬೆಂಬಲ ನೀಡಲು ಬಂದಿದ್ದರು. ಈ ಕಾರ್ಯ ಎಲ್ಲರ ಮೆಚ್ಚುಗೆಗೂ ಕೂಡ ಪಾತ್ರವಾಗಿದೆ.