ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಬೇಕು ಎಂದರೆ ಸಂಜೆ ರಾತ್ರಿಯಾಗುವ ಮುನ್ನ ಈ ಚಿಕ್ಕ ಕೆಲಸ ಮಾಡಿ ಸಾಕು. ಹಣದ ಮಳೆಯೇ ಸುರಿಯುತ್ತದೆ.
ನಮಸ್ಕಾರ ಸ್ನೇಹಿತರೇ ನಾವು ಪ್ರತಿಯೊಬ್ಬರೂ ಕೂಡ ನಮ್ಮ ಜೀವನದಲ್ಲಿ ಹಾಗೂ ನಮ್ಮ ಕುಟುಂಬದ ನಡುವೆ ಸುಖ-ಶಾಂತಿ-ನೆಮ್ಮದಿ ಹಾಗೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು ಎನ್ನುವ ಕನಸನ್ನು ಕಾಣುತ್ತಲೇ ಇರುತ್ತೇವೆ. ಇದು ಕೇವಲ ನಾವಷ್ಟೇ ಅಲ್ಲ ಜೀವನದಲ್ಲಿ ಚೆನ್ನಾಗಿ ಹಾಗೂ ಸ್ಥಿತಿವಂತರಾಗಿರ ಬೇಕು ಎಂದು ಬಯಸುವ ಪ್ರತಿಯೊಬ್ಬ ಮನುಷ್ಯನು ಕೂಡ ಇದನ್ನೇ ಯೋಚಿಸುತ್ತಾನೆ ಹಾಗೂ ಪ್ರತಿದಿನ ದೇವರಲ್ಲಿ ಬೇಡಿಕೊಳ್ಳುತ್ತಾನೆ. ಹಿಂದೂ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಉತ್ತಮವಾದ ಆರೋಗ್ಯ ಹಾಗೂ ಸಮೃದ್ಧಿ ಮತ್ತು ಆರ್ಥಿಕ ಸ್ಥಿತಿ ಚೆನ್ನಾಗಿರಬೇಕೆಂದರೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಆಗುವುದು ಪ್ರಮುಖವಾಗಿರುತ್ತದೆ. ಲಕ್ಷ್ಮೀದೇವಿಯನ್ನು ಶಾಸ್ತ್ರಗಳ ಪ್ರಕಾರ ಸಮೃದ್ಧಿ ಹಾಗೂ ಸಂಪತ್ತಿನ ದೇವತೆ ಎಂಬುದಾಗಿ ಪೂಜಿಸಲಾಗುತ್ತದೆ.
ಹೀಗಾಗಿ ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು ಎಂದರೆ ಶ್ರೀ ಲಕ್ಷ್ಮಿ ದೇವಿಯ ಪೂಜೆ ಮಾಡುವುದು ಹಾಗೂ ಆಕೆಯನ್ನು ಪ್ರಸನ್ನಗೊಳಿಸುವ ಪ್ರಮುಖವಾಗಿರುತ್ತದೆ. ಇದಕ್ಕಾಗಿ ನಾವು ಕೆಲವೊಂದು ಕಾರ್ಯಗಳನ್ನು ಕೂಡ ಜೀವನದಲ್ಲಿ ಮಾಡಬೇಕಾಗುತ್ತದೆ. ದಿನ ಹಾಗೂ ರಾತ್ರಿಗಳ ನಡುವೆ ಇರುವಂತಹ ಸಂಧಿ ಸಮಯವನ್ನು ಸಂಧ್ಯಾ ಕಾಲ ಎನ್ನಲಾಗುತ್ತದೆ. ಈ ಸಮಯಕ್ಕೆ ಮುನ್ನ ಎರಡು ಕಾರ್ಯಗಳನ್ನು ಮಾಡುವ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಲಕ್ಷ್ಮಿ ಮಾತೆಯ ಆಶೀರ್ವಾದ ಸದಾಕಾಲ ಇರುತ್ತದೆ ಎಂಬುದಾಗಿ ಶಾಸ್ತ್ರಗಳ ಪ್ರಕಾರ ಹೇಳಲಾಗಿದೆ.
ಮೊದಲನೆಯದಾಗಿ ತುಳಸಿ ಪೂಜೆ; ಹಿಂದೂ ಧರ್ಮದ ಪ್ರಕಾರ ತುಳಸಿ ವೃಕ್ಷವನ್ನು ಅತ್ಯಂತ ಪವಿತ್ರ ಎನ್ನುವುದಾಗಿ ಭಾವಿಸಲಾಗುವುದು. ಹೀಗಾಗಿ ಸೂರ್ಯಾಸ್ತಕ್ಕೆ ಮುನ್ನ ಶುಚಿಯಾಗಿ ತುಳಸಿ ವೃಕ್ಷಕ್ಕೆ ಜಲಪ್ರೋಕ್ಷಣೆ ಮಾಡಿ ದೀಪವನ್ನು ಹಚ್ಚಬೇಕು. ಇದರಿಂದಾಗಿ ತುಳಸಿ ಮಾತೆ ಮಾತ್ರವಲ್ಲದೆ ಲಕ್ಷ್ಮಿ ಮಾತೆ ಕೂಡ ಪ್ರಸನ್ನಳಾಗಿ ನಿಮಗೆ ಆಶೀರ್ವಾದವನ್ನು ನೀಡುತ್ತಾಳೆ.
ಎರಡನೇದಾಗಿ ಸೂರ್ಯಾಸ್ತಕ್ಕೆ ಮುನ್ನ ಸ್ವಚ್ಛತೆ ಕಾರ್ಯವನ್ನು ಮಾಡುವುದು; ಸೂರ್ಯಾಸ್ತಕ್ಕೆ ಮುನ್ನವೇ ಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಉತ್ತಮ ಯಾಕೆಂದರೆ ಸೂರ್ಯಾಸ್ತದ ನಂತರ ಸ್ವಚ್ಛಗೊಳಿಸುವುದು ನಮ್ಮ ಧರ್ಮ ಹಾಗೂ ಶಾಸ್ತ್ರಗಳ ಪ್ರಕಾರ ಅಪಚಾರವಾಗಿದೆ. ಈ ಎರಡು ವಿಚಾರಗಳನ್ನು ನಿಮ್ಮ ಜೀವನದಲ್ಲಿ ಸೂರ್ಯಾಸ್ತಕ್ಕೆ ಮುನ್ನ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಅದೃಷ್ಟ ಸಾಕಾರಗೊಳ್ಳಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.