ಅಪ್ಪು ಮತ್ತು ಅಶ್ವಿನಿ ಅವರ ಕನಸಿನ ಮನೆಯ ಗೃಹಪ್ರವೇಶ ಕಾರ್ಯಕ್ರಮದ ಸಂತೋಷದ ಕ್ಷಣಗಳ ಹೇಗಿವೆ ಗೊತ್ತೇ?? ವೈರಲ್ ಆದ ಯೌಟ್ಯೂಬ್ ವಿಡಿಯೋ.
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ ಒಬ್ಬ ಸೂಪರ್ಸ್ಟಾರ್ ಮಾತ್ರವಲ್ಲದೆ ನಿಜಜೀವನದಲ್ಲಿ ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಆಗಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಬೇರೆ ನಟರು ಚಿತ್ರೀಕರಣ ಬಿಟ್ಟರೆ ತಮ್ಮ ಗೆಳೆಯರೊಂದಿಗೆ ಸಮಯವನ್ನು ಕಳೆದರೆ ನಮ್ಮ ನೆಚ್ಚಿನ ಅಪ್ಪು ಚಿತ್ರೀಕರಣದಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಕುಟುಂಬದ ಜೊತೆಗೆ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದರವರು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತೆರೆಯಮೇಲೆ ಎಷ್ಟು ಪವರ್ಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದರೋ ತೆರೆಯ ಹಿಂದೆ ಕೂಡ ಒಬ್ಬ ಉತ್ತಮ ಗಂಡನಾಗಿ ಹಾಗೂ ತಮ್ಮ ಮಕ್ಕಳಿಗೆ ಉತ್ತಮ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದರು ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ಸಾಕ್ಷಿಯೆನ್ನುವಂತೆ ಹಲವಾರು ಭಾವಚಿತ್ರಗಳು ಕೂಡ ನಮಗೆ ಸಿಗಬಹುದಾಗಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರ ದಾಂಪತ್ಯ ಜೀವನದ ಕುರಿತಂತೆ ಮಾತನಾಡುವುದಾದರೆ ಇಬ್ಬರೂ ಕೂಡ ಪ್ರೀತಿಸಿ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯಾದವರು. ಇವರಿಬ್ಬರ ಪ್ರೀತಿ ಹಾಗೂ ದಾಂಪತ್ಯ ಜೀವನದ ಫಲವಾಗಿ ವಂದಿತ ಹಾಗೂ ದೃತಿ ಎನ್ನುವ ಇಬ್ಬರು ಹೆಣ್ಣುಮಕ್ಕಳು ಜನಿಸುತ್ತಾರೆ.
ಇಷ್ಟೊಂದು ಚೆನ್ನಾಗಿದ್ದ ಕುಟುಂಬದ ಮೇಲೆ ಆ ದೇವರಿಗೆ ಯಾವ ಕಣ್ಣು ಬಿತ್ತೋ ಏನೋ ಪುನೀತ್ ರಾಜಕುಮಾರ್ ಅವರು ಈಗ ನಮ್ಮನ್ನು ಅಕಾಲಿಕವಾಗಿ ಆಗಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಮರಣ ಹೊಂದುವುದಕ್ಕಿಂತ ಮುಂಚೆ ಒಂದು ಹೊಸ ಮನೆಯನ್ನು ಖರೀದಿಸಿದ್ದರು. ಹೌದು ಗೆಳೆಯರೇ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಇಬ್ಬರೂ ಸೇರಿಕೊಂಡು ತಮ್ಮ ಸದಭಿರುಚಿಗೆ ತಕ್ಕಂತೆ ಈ ಹೊಸ ಮನೆಯನ್ನು ವಿನ್ಯಾಸಗೊಳಿಸಿದ್ದರು. ಈ ಮನೆಯ ಗೃಹಪ್ರವೇಶದ ಸಂದರ್ಭದ ಸಂತೋಷದ ಕ್ಷಣದ ಫೋಟೋಗಳನ್ನು ಹೊಂದಿರುವ ವಿಡಿಯೋ ತುಣುಕು ಈಗಾಗಲೇ ವೈರಲ್ ಆಗುತ್ತಿದೆ ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದೆ. ವಿಡಿಯೋ ನೋಡಿದ ನಂತರ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.