ನೀವೇ ಬೇರೆ ಏನು ಬೇಡ, ಕೇವಲ ಮುಂಜಾನೆ ಎದ್ದ ತಕ್ಷಣ ಇವುಗಳನ್ನು ಮಾಡಿ ಸಾಕು, ಜೀವನಪೂರ್ತಿ ಸುಖ-ಸಂಪತ್ತು ನಿಮ್ಮ ಜೀವನದಲ್ಲಿ ತುಂಬಿ ತುಳುಕಲಿದೆ.

41

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಾವು ಪ್ರತಿಯೊಬ್ಬರು ಕೂಡ ಜೀವನದಲ್ಲಿ ಸುಖ ಶಾಂತಿ ಹಾಗೂ ಸಮೃದ್ಧಿಯನ್ನು ನಮ್ಮ ಜೀವನದಲ್ಲಿ ಇರಬೇಕು ಎನ್ನುವುದಾಗಿ ಆಶಿಸುತ್ತೇವೆ. ಇದಕ್ಕಾಗಿ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಕೂಡ ಅದನ್ನು ಪಡೆಯಲು ನಾವು ಸಫಲರಾಗುವುದಿಲ್ಲ. ಆದರೆ ಇಂದು ನಾವು ಕೆಲವೊಂದು ವಿಚಾರಗಳನ್ನು ಹೇಳಲು ಹೊರಟಿದ್ದೇವೆ. ಬೆಳಗ್ಗೆ ಎದ್ದ ತಕ್ಷಣ ನೀವು ಈ ಕಾರ್ಯವನ್ನು ಮಾಡಿದರೆ ಖಂಡಿತವಾಗಿ ಜೀವನದಲ್ಲಿ ಸುಖ ಶಾಂತಿ ಹಾಗೂ ಐಶ್ವರ್ಯವಂತ ರಾಗಿದೆ ವನ ಮಾಡಬಹುದಾಗಿದೆ ಎಂಬುದಾಗಿ ವಾಸ್ತುಶಾಸ್ತ್ರ ಹಾಗೂ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಹಾಗಿದ್ದರೆ ನೀವು ಬೆಳಗ್ಗೆ ಎದ್ದ ತಕ್ಷಣ ಕೂಡಲೇ ಮಾಡಬೇಕಾದ ಆ 6 ಕಾರ್ಯಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹಸ್ತ ದರ್ಶನ; ಪುರಾಣ ಶಾಸ್ತ್ರಗಳ ಪ್ರಕಾರ ಹಸ್ತದಲ್ಲಿ ಮಾತೆ ಲಕ್ಷ್ಮಿ ಸರಸ್ವತಿ ಮಾತೆ ಹಾಗೂ ಭಗವಾನ್ ಮಹಾವಿಷ್ಣು ನೆಲಸಿರುತ್ತಾರೆ ಎಂಬುದಾಗಿ ಹೇಳುತ್ತಾರೆ. ಹೀಗಾಗಿಯೇ ನಾವು ಬೆಳಗ್ಗೆ ಎದ್ದ ತಕ್ಷಣವೇ ಹಸ್ತ ದರ್ಶನವನ್ನು ಮಾಡುವುದರಿಂದಾಗಿ ಆ ದಿನದ ಮೊದಲನೇ ಭಾಗದಿಂದಲೇ ನಾವು ದೇವರ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ ಹಾಗೂ ನಮ್ಮ ಪೂರ್ಣ ದಿನ ಶುಭವಾಗಿ ಮುಂದುವರೆಯಲಿದೆ ಎಂಬ ವಿಚಾರವೂ ಕೂಡ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ನಮ್ಮ ದಿನದ ಆರಂಭದ ಚೆನ್ನಾಗಿದ್ದರೆ ನಮ್ಮ ಇಡೀ ದಿನ ಎನ್ನುವುದು ಲಾಭದಾಯಕವಾಗಿ ನಮಗೆ ಪರಿಣಮಿಸಲಿದೆ ಎಂಬುದಾಗಿ ಇದರಲ್ಲಿ ಒಳಾರ್ಥ ಅಡಗಿದೆ.

ಭೂಮಿ ಮಾತೆಗೆ ನಮಸ್ಕರಿಸುವುದು; ಶಾಸ್ತ್ರಗಳ ಪ್ರಕಾರ ಭೂಮಿ ಮಾತೆಯನ್ನು ತಾಯಿಗೆ ಹೋಲಿಸುತ್ತಾರೆ ಹೀಗಾಗಿ ನಾವು ಎದೆ ತಕ್ಷಣ ಭೂಮಿಗೆ ಕಾಲಿಡುವ ಮುನ್ನ ಭೂಮಿ ಮಾತೆಗೆ ನಮಸ್ಕರಿಸಿ ಮುನ್ನವೇ ಕ್ಷಮೆ ಕೇಳುವುದು ಒಳ್ಳೆಯದು. ಇದರಿಂದಾಗಿ ಭೂಮಿ ಮಾತೆ ಪ್ರಸನ್ನಳಾಗಿ ನಮಗೆ ಆಶೀರ್ವಾದವನ್ನು ನೀಡುತ್ತಾಳೆ ಹಾಗೂ ನಮ್ಮ ಕ್ಷಮೆಯನ್ನು ಸ್ವೀಕರಿಸುತ್ತಾಳೆ. ಇದರಿಂದಾಗಿ ನಮ್ಮ ಇಡೀ ದಿನ ಉತ್ತಮವಾಗಿ ಸಾಗುತ್ತದೆ ಎಂಬುದಾಗಿ ಅರ್ಥವಾಗಿದೆ.

ಸೂರ್ಯದೇವನಿಗೆ ಜಲ ಸಮರ್ಪಣೆ; ಬೆಳಗ್ಗೆ ಎದ್ದ ತಕ್ಷಣವೇ ನಾವು ಸ್ನಾನ ಮಾಡಿದ ನಂತರ ತಾಮ್ರದ ಬಿಂದಿಗೆಯಲ್ಲಿ ನೀರನ್ನು ತೆಗೆದುಕೊಂಡು ಸೂರ್ಯದೇವನಿಗೆ ಅದನ್ನು ಅರ್ಪಿಸಬೇಕು. ಇದರಿಂದಾಗಿ ಸೂರ್ಯದೇವ ಪ್ರಸನ್ನನಾಗಿ ನಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟಗಳನ್ನು ಕೂಡ ದೂರಮಾಡಿ ಸುಖವ ನಿಮ್ಮ ಪಾಲಿಗೆ ಕರುಣಿಸುತ್ತಾನೆ. ಎಲ್ಲಾ ಕೆಲಸಗಳು ಸರಿಯಾದ ಸಮಯದಲ್ಲಿ ನಡೆಯುವಂತೆ ಮಾಡಿ ನಮ್ಮ ಜೀವನದಲ್ಲಿ ಶುಭದಿನಗಳು ಮೂಡುವಂತೆ ಆಶೀರ್ವದಿಸುತ್ತಾನೆ.

ದೇವರ ಮನೆಯ ಸ್ವಚ್ಛತೆ; ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣವೇ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡುವುದನ್ನು ಮಾಡುತ್ತಾರೆ. ಆದರೆ ಅದಕ್ಕೂ ಮುನ್ನ ದೇವರಕೋಣೆ ಎನ್ನುವುದು ಸ್ವಚ್ಛವಾಗಿ ಹಾಗೂ ಅಲ್ಲಿಯ ಎಲ್ಲ ವಸ್ತುಗಳು ಕೂಡ ವ್ಯವಸ್ಥಿತವಾಗಿ ಇರಬೇಕಾಗಿರುವುದು ಮುಖ್ಯವಾಗಿದೆ. ಇಲ್ಲದಿದ್ದಲ್ಲಿ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಓಡಾಡಿಕೊಂಡಿರುತ್ತವೆ. ದೇವರ ಕೋಣೆ ಸೂಚಿಯಾಗಿ ಹಾಗೂ ಸರಿಯಾದ ವ್ಯವಸ್ಥೆಯಲ್ಲಿ ಇರುವುದರಿಂದ ಹಾಗೂ ನೀವು ಅದಾದ ನಂತರವೇ ಪೂಜೆ ಮಾಡುವುದರಿಂದಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಂಬುದು ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

ಮನೆಯ ಮೊದಲ ತುತ್ತು ಆಕಳಿಗೆ; ಸ್ನೇಹಿತರ ಸಾಮಾನ್ಯವಾಗಿ ಮನೆಯ ಆಕಳಿಗೆ ನಿನ್ನೆಯ ಆಹಾರದ ಭಾಗವನ್ನು ತಿನ್ನಲು ನೀಡಲಾಗುತ್ತದೆ. ಹೀಗೆ ಮಾಡಬಾರದು ಮನೆಯ ದಿನದ ಬೆಳಿಗ್ಗಿನ ಮೊದಲ ಆಹಾರ ಎನ್ನುವುದು ಆಕಳಿಗೆ ತಾಜಾವಾಗಿ ನೀಡಬೇಕು. ಗೋಮಾತೆಯ ದೇಹದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಹೀಗಾಗಿ ಗೋಮಾತೆಯೆ ನೀವು ಸಂತೋಷವನ್ನು ಪಡಿಸಿದರೆ ಮುಕ್ಕೋಟಿ ದೇವರುಗಳು ಆಶೀರ್ವಾದ ನಿಮ್ಮ ಮೇಲೆ ಆಗುತ್ತದೆ ಹಾಗೂ ಇದರಿಂದಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಅದೃಷ್ಟಕರ ಘಟನೆಗಳು ನಡೆಯಲಿವೆ.

ಸಕ್ಕರೆ ಹಾಗೂ ಮೊಸರನ್ನು ತಿನ್ನುವುದು; ಹೌದು ಗೆಳೆಯರೇ ನೀವು ಬೆಳಗ್ಗೆ ಬೇಗ ಎದ್ದು ಎಲ್ಲಿಗಾದರೂ ಯಾವ ಕೆಲಸಕ್ಕಾಗಿ ಹೊರಡಲು ಸಿದ್ಧವಾಗಿ ನಿಂತರೆ ಹೋಗುವ ಮೊದಲು ಮೊಸರು ಸಕ್ಕರೆಯನ್ನು ತಿನ್ನುವುದು ಉತ್ತಮ. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಸಕರಾತ್ಮಕ ಶಕ್ತಿ ಸಂಚಾರವಾಗುತ್ತದೆ. ಇದರಿಂದಾಗಿ ನೀವು ಮಾಡುವ ಎಲ್ಲಾ ಕೆಲಸಗಳು ಕೂಡ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಎಲ್ಲ ಕೆಲಸಗಳನ್ನು ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ನೀವು ಸಕಾರಾತ್ಮಕ ಬದಲಾವಣೆಗಳು ಜೊತೆಗೆ ಆರ್ಥಿಕವಾಗಿ ಕೂಡ ಸಬಲರಾಗುತ್ತೀರಿ

Get real time updates directly on you device, subscribe now.