ಹತ್ತಾರು ವರ್ಷಗಳ ನಂತರ ಶೋಯಬ್ ಅಕ್ತರ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸೆಹ್ವಾಗ್, ದಯವಿಟ್ಟು ಹೀಗೆ ಮಾಡಬೇಡಿ ಎಂದ ಅಕ್ತರ್. ಅಷ್ಟಕ್ಕೂ ಸೆಹ್ವಾಗ್ ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟಗಳು ಎಂದರೆ ಪ್ರತಿಯೊಬ್ಬ ಕ್ರೀಡಾಪ್ರೇಮಿಗಳ ಮನಸ್ಸಿನಲ್ಲಿಯೂ ಕೂಡ ಸಾಕಷ್ಟು ರೋಮಾಂಚನಕಾರಿ ಅನುಭವವನ್ನು ನೀಡುತ್ತಿತ್ತು. ಆಗಲೇ ಪಾಕಿಸ್ತಾನ ಹಾಗು ಭಾರತದ ನಡುವೆ ಇರುವಂತಹ ವಿಚಾರಗಳಿಂದಾಗಿ ಈ ಪಂದ್ಯಗಳು ಪ್ರತಿ ಬಾರಿ ಕೂಡ ವರ್ಲ್ಡ್ ಕಪ್ ಮಾದರಿಯ ಅನುಭವವನ್ನು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗಳಿಗೆ ಕೂಡ ನೀಡುತ್ತಿತ್ತು.
ಆದರೆ ಕೆಲವು ವರ್ಷದಿಂದ ಭಾರತ ಹಾಗೂ ಪಾಕಿಸ್ತಾನಗಳು ದ್ವೀಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಿ ಆಡುತ್ತಿಲ್ಲ. ಯಾವಾಗಲೋ ಒಮ್ಮೆ ಐಸಿಸಿ ಈವೆಂಟ್ ಗಳಲ್ಲಿ ಮಾತ್ರ ಎರಡು ತಂಡಗಳು ಪರಸ್ಪರ ಆಡುತ್ತಿವೆ. ಹೀಗಾಗಿ ಈ ತಂಡಗಳ ನಡುವೆ ಪಂದ್ಯ ನಡೆದಾಗಲೆಲ್ಲ ಕೇವಲ ಭಾರತ ಹಾಗು ಪಾಕಿಸ್ತಾನದ ಅಭಿಮಾನಿಗಳಿಗೆ ಮಾತ್ರವಲ್ಲದೆ ಬೇರೆ ದೇಶದ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಇದು ಕಣ್ಣಿಗೆ ಹಬ್ಬ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಕ್ರಿಕೆಟಿಗರ ನಡುವೆ ಇರುವಂತಹ ಗೆಲ್ಲಲೇ ಬೇಕು ಎನ್ನುವ ಜಿದ್ದಾಜಿದ್ದಿನ ಮನೋಭಾವ ಕೂಡ ಕ್ರಿಕೆಟ್ ಅಂಗಳದಲ್ಲಿ ಕಂಡುಬರುತ್ತಿತ್ತು. ಆದರೆ ಈಗ ಕ್ರೀಡಾಂಗಣದ ಹೊರಭಾಗದಲ್ಲಿ ಇಬ್ಬರು ಮಾಜಿ ಆಟಗಾರರ ಹೇಳಿಕೆಯ ಮಾತಿನ ಸಮರ ಈಗ ಎಲ್ಲರ ಗಮನವನ್ನು ಸೆಳೆದಿದೆ.
ಹೌದು ಗೆಳೆಯರೇ ಇತ್ತೀಚಿಗಷ್ಟೇ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ವೀರೇಂದ್ರ ಸೆಹವಾಗ್ ರವರು ಶೋಯಬ್ ಅಖ್ತರ್ ರವರ ಬೌಲಿಂಗ್ ಶೈಲಿ ನ್ಯಾಯಯುತ ಆಗಿರಲಿಲ್ಲ ಅವರು ಚಕಿಂಗ್ ಬೌಲಿಂಗ್ ಮಾಡುತ್ತಿದ್ದರು. ಇಲ್ಲದಿದ್ದರೆ ಯಾಕೆ ಐಸಿಸಿ ಅವರನ್ನು ಬ್ಯಾನ್ ಮಾಡುತ್ತಿತ್ತು ನೀವೇ ಹೇಳಿ ಎಂಬುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಬ್ರೆಟ್ಲಿ ಹಾಗೂ ಶೋಯಬ್ ಅಕ್ತರ್ ಅವರನ್ನು ಹೋಲಿಸಿ ಬ್ರೆಟ್ಲಿ ರವರ ಕೈ ನೇರವಾಗಿ ಬರುತ್ತಿತ್ತು ಆದರೆ ಶೋಯಬ್ ಅಖ್ತರ್ ಅವರ ಕೈ ಎಲ್ಲಿದೆ ಎಂಬುದನ್ನು ಹುಡುಕಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಅವರು ಸೆಹ್ವಾಗ್ ಅವರು ಇಂತಹ ಹೇಳಿಕೆಯನ್ನು ನೀಡುವುದನ್ನು ಬಿಡಬೇಕು. ಅವರೊಬ್ಬ ಉತ್ತಮ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟಿಗರಲ್ಲಿ ಅತ್ಯುತ್ತಮರು ಕೂಡ ಆಗಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಐಸಿಸಿ ಗಿಂತ ಹೆಚ್ಚಾಗಿ ತಿಳಿದಿದ್ದರೆ ಅವರು ಮಾತನಾಡಲಿ ನನಗೆ ತನ್ನ ದೇಶದ ಪರವಾಗಿ ಆಡಿರುವ ಯಾವುದೇ ಆಟಗಾರನನ್ನು ಟೀಕಿಸಲು ಇಷ್ಟ ಇಲ್ಲ ಎಂಬುದಾಗಿ ತಮ್ಮ ಹೇಳಿಕೆಯನ್ನು ಮುಗಿಸಿದ್ದಾರೆ.