ಪ್ರೀತಿಸುವ ಗಂಡ ಇದ್ದರೂ ಎರಡೆರಡು ಜನರ ಜೊತೆ ಪ್ರೀತಿ ಮಾಡಿದ ಮಾಯಾಂಗನೆ, ಕೊನೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಏನು ಮಾಡಿದ್ದಾಳೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಹೆಣ್ಣು ಕುಲಕ್ಕೆ ಕಳಂಕ ಎಂದೆನಿಸಿರುವ ಹೆಣ್ಣೊಬ್ಬಳ ಕುರಿತಂತೆ. ಈಕೆ ಫೇಸ್ಬುಕ್ನಲ್ಲಿ ಖಾತೆಯನ್ನು ಓಪನ್ ಮಾಡಿ ಗಂಡನಿಗೆ ತಿಳಿಯದಂತೆ ಹಲವಾರು ಯುವಕರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಂಬಂಧವನ್ನು ಹೊಂದಿದ್ದಳು. ಇವರಿಂದಾಗಿ ನಡೆಯುವಂತಹ ಒಂದೊಂದೇ ಘಟನೆಗಳ ಕುರಿತಂತೆ ಮುಂದಿನ ವಿಚಾರಗಳಲ್ಲಿ ತಿಳಿದುಕೊಳ್ಳುವ ಬನ್ನಿ.
ಇದೇ ಮೇ 4ರಂದು ಹೈದರಾಬಾದ್ನ ಪ್ರಶಾಂತಿ ಹಿಲ್ಸ್ ನಲ್ಲಿ ಎಷ್ಮಾ ಕುಮಾರ್ ಎನ್ನುವ ಫೋಟೋಗ್ರಾಫರ್ ಮೇಲೆ ಸುತ್ತಿಗೆಯಿಂದ ಹ’ಲ್ಲೆ ನಡೆಸಲಾಗಿತ್ತು. ನಂತರ ಈತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈತ ಎರಡು ದಿನಗಳ ಕಾಲ ಜೀವನ್ಮರಣದ ನಡುವೆ ಹೋರಾಡಿ ನಂತರವೂ ಕೊನೆಯುಸಿರನ್ನು ಚೆಲ್ಲಿದ್ದ. ನಂತರ ಈ ಪ್ರಕರಣದ ಹಿನ್ನೆಲೆಯನ್ನು ಬೆನ್ನತ್ತಿದ್ದ ಪೊಲೀಸರಿಗೆ ಮೊದಲು ಆತನ ಮೊಬೈಲ್ ಫೋನ್ ಸಿಗುತ್ತದೆ. ಅದನ್ನು ಓಪನ್ ಮಾಡಿದಾಗ ಈ ಪ್ರಕರಣದ ಹಾಗೂ ಈ ಕಥೆಯ ಪ್ರಮುಖ ಕೇಂದ್ರಬಿಂದುವಾಗಿರುವ ಶ್ವೇತಾ ರೆಡ್ಡಿ ಕುರಿತಂತೆ ತಡೆಯಲು ಪ್ರಾರಂಭವಾಗುತ್ತದೆ.
ಶ್ವೇತಾ ರೆಡ್ಡಿ ಹಾಗೂ ವಿಕ್ರಂ ರೆಡ್ಡಿ ಇಬ್ಬರು ಕೂಡ ದಂಪತಿಗಳಾಗಿರುತ್ತಾರೆ. ವಿಕ್ರಂ ರೆಡ್ಡಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಕೆಲಸದ ಒತ್ತಡದಲ್ಲಿ ಕೂಡ ತನ್ನ ಹೆಂಡತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆದರೆ ಸುಂದರ ಹೆಂಡತಿಯಾಗಿರುವ ಶ್ವೇತಾ ರೆಡ್ಡಿ ಮಾತ್ರ ಗಂಡನಿಗಿಂತ ಹೆಚ್ಚಾಗಿ ಪರಪುರುಷರ ಸಹವಾಸವೇ ಬೇಕೆ ಎನ್ನುತ್ತಿದ್ದ ಚಾರಿತ್ರ್ಯ ಹೀನ ಹೆಣ್ಣು ಆಗಿದ್ದಾಳೆ. ಫೇಸ್ಬುಕ್ ನಲ್ಲಿ ಇದೇ ಎಷ್ಮಾ ಕುಮಾರ್ ಎನ್ನುವವನ ಜೊತೆಗೆ ಶ್ವೇತಾ ರೆಡ್ಡಿಗೆ ಪರಿಚಯ ಆರಂಭವಾಗಿ ಇಬರಿಬ್ಬರ ನಡುವೆ ಕಳ್ಳಾಟಗಳು ಪ್ರಾರಂಭವಾಗುತ್ತದೆ. 2018 ರಿಂದ ಪ್ರಾರಂಭವಾಗಿ ನಾಲ್ಕು ವರ್ಷಗಳ ಕಾಲ ನಾನ್ ಸ್ಟಾಪ್ ಆಗಿ ನಡೆಯುತ್ತದೆ. ಕೇವಲ ಇವನ ಜೊತೆಗೆ ಮಾತ್ರವಲ್ಲ ಅಶೋಕ್ ಕುಮಾರ್ ಎನ್ನುವವನು ಜೊತೆಗೆ ಕೂಡ ಶ್ವೇತಾ ರೆಡ್ಡಿಯ ಕಳ್ಳಾಟ ಆರಂಭವಾಗುತ್ತದೆ.
ಮನೆಯಲ್ಲಿ ಪ್ರೀತಿಸುವ ಗಂಡ ಇದ್ದರೂ ಕೂಡ ತಾನೊಬ್ಬ ವಿವಾಹಿತೆ ಎನ್ನುವುದನ್ನು ಮರೆತು ಶ್ವೇತಾ ರೆಡ್ಡಿ ಇಬ್ಬರ ಜೊತೆಗೂ ಕೂಡ ವೀಡಿಯೋ ಚಾಟ್ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಳು. ಆದರೆ ಎಷ್ಮ ಕುಮಾರ್ ಶ್ವೇತಾ ರೆಡ್ಡಿಯ ಕುರಿತಂತೆ ಸಾಕಷ್ಟು ಸೀರಿಯಸ್ ಆಗಿದ್ದ. ಅದರಲ್ಲೂ ಒಮ್ಮೆಯಂತೂ ಶ್ವೇತ ರೆಡ್ಡಿ ಬಳಿ ತನ್ನನ್ನು ಮದುವೆಯಾಗುವಂತೆ ನೇರವಾಗಿ ಕೇಳಿ ಬಿಡುತ್ತಾನೆ. ಆ ಸಂದರ್ಭದಲ್ಲಿ ಶ್ವೇತಾ ರೆಡ್ಡಿ ತಾನು ಈಗಾಗಲೇ ಮದುವೆಯಾಗಿದ್ದೇನೆ ಇನ್ನೊಮ್ಮೆ ನಾನು ಯಾರೊಂದಿಗೂ ಮದುವೆಯಾಗಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾಳೆ.
ಆತ ಈ ರೀತಿ ಹೇಳಿದ ಮೇಲಿಂದ ಶ್ವೇತಾ ರೆಡ್ಡಿ ಆತ ತನ್ನ ಬಗ್ಗೆ ಸೀರಿಯಸ್ ಆಗಿದ್ದಾನೆ ಎಂಬುದಾಗಿ ತಿಳಿದು ಆತನೊಂದಿಗೆ ಕಾಲ ಕ್ರಮೇಣವಾಗಿ ಕೊಂಚಮಟ್ಟಿಗೆ ಸಂಪರ್ಕವನ್ನು ಕ’ಟ್ ಮಾಡಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ಇನ್ನೊಬ್ಬ ಗೆಳೆಯ ಆಗಿದ್ದ ಅಶೋಕ್ ಕುಮಾರ್ ನನ್ನು ಕೂಡ ತನ್ನ ಊರಿನ ಬಳಿಗೆ ಕರೆದುಕೊಂಡು ಆಗಾಗ ಆತನೊಂದಿಗೆ ಹೋಗಿ ಬರುತ್ತಿದ್ದಳು. ಆದರೆ ಈ ಮಧ್ಯದಲ್ಲಿ ಎಷ್ಮಾ ಕುಮಾರ್ ತನ್ನನ್ನು ಮದುವೆ ಆಗು ಎನ್ನುವುದಾಗಿ ಶ್ವೇತಾ ರೆಡ್ಡಿಯನ್ನು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ಇದು ಆಕೆಗೆ ಇಷ್ಟವಾಗುತ್ತಿರಲಿಲ್ಲ.
ಆದರೆ ಕೊನೆಕೊನೆಗೆ ಎಷ್ಮಾ ಕುಮಾರ್ ನೀನು ನನ್ನನ್ನು ಮದುವೆಯಾಗದಿದ್ದರೆ ನಾವಿಬ್ಬರೂ ನಡೆಸಿರುವ ಶೃಂಗಾರ ಲೀಲೆಯ ವಿಡಿಯೋ ತುಣುಕನ್ನು ನಿನ್ನ ಮನೆಯವರಿಗೆ ರವಾನಿಸುತ್ತೇನೆ ನಿನ್ನ ನಿಜಬಣ್ಣವನ್ನು ಅರ್ಥ ಮಾಡಿಸುತ್ತೇನೆ ಎಂಬುದಾಗಿ ಹೆದರಿಸುತ್ತಾನೆ. ಈಗ ತನ್ನ ತಪ್ಪಿನ ಅರಿವು ಮಾಡಿಕೊಂಡ ಶ್ವೇತಾ ರೆಡ್ಡಿ ಸಂಪೂರ್ಣವಾಗಿ ನಡುಗಿ ಹೋಗಿದ್ದಳು. ಕೂಡಲೆ ತನ್ನ ಮತ್ತೊಬ್ಬ ಗೆಳೆಯ ಆಗಿರುವ ಅಶೋಕ್ ಕುಮಾರ್ ಗೆ ಆತನನ್ನು ಮುಗಿಸುವ ಕುರಿತಂತೆ ಬೇಡುತ್ತಾಳೆ.
ಆಗ ಅಶೋಕ್ ತನ್ನ ಊರಿನ ಮತ್ತೊಬ್ಬ ಗೆಳೆಯ ನನ್ನ ಈ ಕಾರ್ಯಕ್ಕೆ ಕರೆತರುತ್ತಾನೆ ಹಾಗೂ ಶ್ವೇತಾ ರೆಡ್ಡಿಯ ಬಳಿ ಅವನ ಎಲ್ಲಾ ಡೀಟೇಲ್ಸ್ ಅನ್ನು ಪಡೆದುಕೊಳ್ಳುತ್ತಾನೆ. ಈಗ ಶ್ವೇತ ರೆಡ್ಡಿಯ ಬಳಿ ಹೇಳಿ ಅವನನ್ನು ಪ್ರಶಾಂತಿ ಹಿಲ್ಸ್ ಗೆ ಒಬ್ಬಂಟಿಯಾಗಿ ಬರುವಂತೆ ಮಾಡುತ್ತಾರೆ. ಈ ಸಂಚನ್ನು ಅರಿಯದ ಆತ ಒಬ್ಬನೇ ಬೈಕಿನಲ್ಲಿ ಬಂದಿದ್ದ. ಅಶೋಕ್ ಹಾಗೂ ಆತನ ಸ್ನೇಹಿತ ಇಬ್ಬರೂ ಮುಸುಕು ಧಾರಿಗಳಾಗಿ ಕೂಡಲೇ ಆಗಮಿಸುತ್ತಾರೆ. ಆತನನ್ನು ತಾವು ತಂದಿದ್ದ ಸುತ್ತಿಗೆಯಿಂದ ಬಲವಾಗಿ ತಲೆಗೆ ಬಡಿದಿದ್ದರು. ಅವರ ಉಪಾಯ ಅವನ ತಲೆಗೆ ಸುತ್ತಿಗೆಯಿಂದ ಬಡಿದು ಆತನ ಕೈಯಲ್ಲಿದ್ದ ಮೊಬೈಲನ್ನು ಕಸಿದುಕೊಳ್ಳುವುದು ಆಗಿತ್ತು.
ಆದರೆ ಆತ ತಲೆಗೆ ಪೆಟ್ಟು ತಿಂದವನೆ ಕೂಡಲೇ ಮೊಬೈಲನ್ನು ಎಸೆದು ಓಡಲು ಆರಂಭಿಸಿದ ಹಾಗೂ ಜನ ಇರುವಂತಹ ಪ್ರದೇಶಕ್ಕೆ ಆತ ಓಡೋಡಿ ಬರುತ್ತಾನೆ. ಜನರನ್ನು ನೋಡಿದ ಅಶೋಕ್ ಕುಮಾರ್ ಹಾಗೂ ಆತನ ಗೆಳೆಯ ಇಬ್ಬರೂ ಕೂಡ ಓಡಿಹೋಗುತ್ತಾರೆ. ನಂತರ ಅಲ್ಲಿದ್ದ ಜನರು ಎಷ್ಮಾ ನನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸುತ್ತಾರೆ ಹಾಗೂ ಪೊಲೀಸ್ ಕಂಪ್ಲೇಂಟ್ ಕೊಡಲು ಇರುತ್ತಾರೆ. ಎರಡು ದಿನಗಳ ನಂತರ ಆತ ಮರಣವನ್ನು ಹೊಂದುತ್ತಾನೆ ಪೊಲೀಸರಿಗೆ ಆತನ ಮೊಬೈಲ್ ಸಿಕ್ಕಿ ಅದರಲ್ಲಿರುವ ವಿಚಾರಗಳನ್ನು ತಿಳಿದು ಶ್ವೇತಾ ರೆಡ್ಡಿ ಸೇರಿದಂತೆ ಅಶೋಕ್ ಮತ್ತು ಆತನ ಗೆಳೆಯನನ್ನು ಕೂಡ ಬಂಧಿಸುತ್ತಾರೆ. ಶ್ವೇತಾ ರೆಡ್ಡಿಯ ಕೆಟ್ಟ ಚಟಕ್ಕೆ ಇಬ್ಬರು ಹುಡುಗರು ಹಾಗೂ ವಿಕ್ರಂ ರೆಡ್ಡಿಯ ಮರ್ಯಾದೆ ಕೂಡ ಮಣ್ಣುಪಾಲಾಗುತ್ತದೆ. ಹೆಣ್ಣು ಒಳ್ಳೆಯದಕ್ಕೆ ಎಷ್ಟು ಕಾರಣಳಾಗುತ್ತಾಳೋ ಅವಳು ಕೆಟ್ಟದ್ದನ್ನು ಮಾಡಿದರೆ ಕೂಡ ಅದರಿಂದ ದುಪ್ಪಟ್ಟು ಕೆಟ್ಟಹೆಸರು ಇಡೀ ಕುಟುಂಬಕ್ಕೆ ಬರುತ್ತದೆ ಎಂದು ಇದರ ಮೂಲಕ ತಿಳಿಯಬಹುದಾಗಿದೆ.