ದುಪ್ಪಟ್ಟು ವಯಸ್ಸಿನ ಗಂಡಸನ್ನು ಮದುವೆಯಾಗಿ ನಂತರ ಮತ್ತೊಂದು ಮದುವೆಯಾಗಲು ಈಕೆ ಹುಟ್ಟಿದ ಮಗುವನ್ನು ಏನು ಮಾಡಿದ್ದಾಳೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಹೆಣ್ಣಿನ ಜೀವನ ಸಂಪೂರ್ಣವಾಗುವುದು ಹಾಗೆ ತಾಯಿಯಾದ ಮೇಲೆ ಎಂಬುದಾಗಿ ಎಲ್ಲರೂ ಹೇಳುತ್ತಾರೆ. ತಾಯಿ ಇಡೀ ವಿಶ್ವದಲ್ಲಿಯೇ ಅತ್ಯಂತ ಪವಿತ್ರವಾದ ಜೀವ ಎಂಬುದಾಗಿ ಕೂಡ ಪುರಾಣ ಕಾಲದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಇಂದು ನಾವು ಹೇಳಹೊರಟಿರುವ ವಿಚಾರದಲ್ಲಿ ಈ ತಾಯಿ ಮಾಡಿರುವ ಕೆಲಸ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಕೋಪ ಪಡುವಂತೆ ಮಾಡುತ್ತದೆ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಇಲ್ಲೊಬ್ಬ ಮಹಾತಾಯಿ ಮಗು ಹುಟ್ಟಿದ 15 ದಿನಕ್ಕೆ ಮಗುವನ್ನು ಕಸದ ತೊಟ್ಟಿಗೆ ಬಿಟ್ಟು ಹೋಗಿದ್ದಾಳೆ. ಹೀಗೆ ಮಾಡಿರುವ 22 ವರ್ಷದ ಮಹಿಳೆಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಅದೆಷ್ಟೋ ಜನರು ತಾಯಿಯಂದಿರು ಮಗು ಹುಟ್ಟಲಿಲ್ಲ ಎಂಬ ಕಾರಣಕ್ಕಾಗಿ ಸಾವಿರ ದೇವರಿಗೆ ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಅದಕ್ಕಾಗಿ ಎಷ್ಟು ಪರಿತಪಿಸುತ್ತಾರೆ. ಆದರೆ ಇಲ್ಲೊಬ್ಬಳು ಮಗು ಹುಟ್ಟಿದ 15 ದಿನಕ್ಕೆ ಹಸುಳೆಯನ್ನು ಕಸದತೊಟ್ಟಿಯಲ್ಲಿ ಬಿಟ್ಟು ಓಡಿ ಹೋಗಿದ್ದಾಳೆ. ಈಕೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖಾಡವ್ಲಿಯವಳಾಗಿದ್ದಾಳೆ. ಮುಂಬೈನ ಮರೀನ್ ಡ್ರೈವ್ ನಲ್ಲಿ ಇರುವಂತಹ ಕಸದತೊಟ್ಟಿಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ.
ಅದಾದ ಕೇವಲ ಅರ್ಧ ಮುಕ್ಕಾಲು ಗಂಟೆಯ ನಂತರ ಅಲ್ಲಿ ಕಸ ಗುಡಿಸುತ್ತಿದ್ದ ಅವರಿಗೆ ಮಗುವಿನ ಅಳುವಿನ ಸದ್ದು ಕೇಳಿ ಬಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ನಂತರ ಸಿಸಿಟಿವಿ ಫೂಟೇಜ್ ಆಧರಿಸಿ ಆ ಮಹಿಳೆಯನ್ನು ಬಂಧಿಸಿದ್ದಾರೆ. ಬಂದಿದೆ ಅಂತರ ಈ ಕುರಿತಂತೆ ಮಹಿಳೆ ಹೇಳಿಕೊಂಡಿದ್ದಾಳೆ. ಬಿಹಾರ್ ನಲ್ಲಿ ತನ್ನ ಊರಿನಲ್ಲಿ ತನಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿಯನ್ನು ಆಕೆ ಮದುವೆಯಾಗಿದ್ದಳು ಇದೇ ಕಾರಣದಿಂದಾಗಿ ಆಕೆ ಆತನನ್ನು ಬಿಟ್ಟು ಖಾಡವ್ಲಿ ಅಲ್ಲಿರುವ ತನ್ನ ಅಣ್ಣನ ಮನೆಗೆ ಓಡಿ ಬಂದಿದ್ದಳು. ಆದರೆ ಈ ಸಂದರ್ಭದಲ್ಲಾಗಲೇ ಆಕೆ ಗರ್ಭಿಣಿಯಾಗಿದ್ದಳು. ಆಸೆಗೆ ತನ್ನದೇ ವಯಸ್ಸಿನ ಪುರುಷನನ್ನು ಮದುವೆಯಾಗುವ ಮೂಲಕ ಹೊಸ ಜೀವನವನ್ನು ಆರಂಭಿಸುವ ಇಚ್ಛೆ ಇತ್ತು. ಇದಕ್ಕಾಗಿ ಮಗುವನ್ನು ಕಸದಬುಟ್ಟಿಯಲ್ಲಿ ಬಿಟ್ಟು ಹೋಗಿದ್ದಾಳೆ ಎಂಬುದಾಗಿ ಆಕೆಯನ್ನು ವಿಚಾರಣೆ ನಡೆಸಿದ ನಂತರ ತಿಳಿದುಬಂದಿದೆ. ಸದ್ಯಕ್ಕೆ ಮಗುವನ್ನು ಡೋಂಗ್ರಿ ಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.