ಕೊನೆಗೂ ಸಿಕ್ತು ತೆರೆ ಹಿಂದಿನ ಅಸಲಿ ಕಹಾನಿ, RRR ಚಿತ್ರದ ಕಲಾವಿದರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತೇ?? ಇಷ್ಟು ಕಡಿಮೆ ಸಿನಿಮಾ ಗಳಿಸಿದ್ದು ಸಾವಿರಾರು ಕೋಟಿ.

30

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಜಾಗತಿಕವಾಗಿ ಯಾವ ಮಟ್ಟದಲ್ಲಿ ಮ್ಯಾಜಿಕ್ ಮಾಡಿದೆ ಎಂಬುದು ನಿಮಗೆಲ್ಲಾ ಗೊತ್ತಿರುವಂತಹ ವಿಚಾರವಾಗಿದೆ. ರಾಜಮೌಳಿಯವರ ಸಿನಿಮಾ ಎಂದರೆ ಹಾಗೆ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಸದಾ ಮುಂದಿರುತ್ತದೆ. ಇದನ್ನು ಈ ಬಾರಿ ಮತ್ತೊಮ್ಮೆ ಆರ್ ಆರ್ ಆರ್ ಚಿತ್ರದ ಮೂಲಕ ರಾಜಮೌಳಿಯವರು ಸಾಬೀತುಪಡಿಸಿದ್ದಾರೆ. ಇನ್ನು ಆರ್ ಆರ್ ಆರ್ ಚಿತ್ರ ತೆಲುಗು ಮೂಲದ ಸ್ವಾತಂತ್ರ್ಯ ಹೋರಾಟಗಾರರ ಕಾಲ್ಪನಿಕ ಕಥೆಯನ್ನು ಪ್ರತಿಯೊಬ್ಬರು ಕೂಡ ಮೆಚ್ಚುವಂತೆ ಮಾಡಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಈ ವರ್ಷದ ಮೊದಲ ಸಾವಿರ ಕೋಟಿ ಕಲೆಕ್ಷನ್ ಮಾಡಿರುವಂತಹ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ರಾಜಮೌಳಿ ನಿರ್ದೇಶನದಲ್ಲಿ ಹಾಗೂ ನಾಯಕನಟರಾಗಿ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ರವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 400 ಕೋಟಿ ರೂಪಾಯಿಯ ಭರ್ಜರಿ ಬಜೆಟ್ ನಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಶ್ರೇಯ ಶರಣ್ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾವಿರಾರು ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಈ ಚಿತ್ರದಲ್ಲಿ ನಟಿಸಿರುವ ಸೆಲೆಬ್ರಿಟಿಗಳು ಪಡೆದಿರುವಂತಹ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾಮ್ ಚರಣ್; ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮಚರಣ್ ರವರು ಚಿತ್ರದಲ್ಲಿ ತಮ್ಮದೇ ಆದಂತಹ ಪ್ರಭಾವವನ್ನು ಬೀರಿದ್ದಾರೆ. ಅದರಲ್ಲೂ ದ್ವಿತೀಯಾರ್ಧದಲ್ಲಿ ಅವರ ಪರ್ಫಾರ್ಮೆನ್ಸ್ ಅದ್ಭುತವಾಗಿತ್ತು. ಇನ್ನು ಈ ಪಾತ್ರಕ್ಕಾಗಿ ರಾಮಚರಣ್ ರವರು ಬರೋಬ್ಬರಿ 45 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್; ಹೈದರಾಬಾದಿನ ನಿಜಾಮನ ವಿರುದ್ಧ ಸಿ’ಡಿದೆದ್ದು ನಿಂತ ಕೋಮು ರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರು ಕಾಣಿಸಿಕೊಂಡಿದ್ದು ಈ ಚಿತ್ರಕ್ಕಾಗಿ ಅವರು ಬರೋಬ್ಬರಿ ನಾಲ್ಕರಿಂದ ಐದು ವರ್ಷಗಳನ್ನು ನೀಡಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಇನ್ನು ಜೂನಿಯರ್ ಎನ್ಟಿಆರ್ ಅವರು ಕೂಡ 45 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.

ಅಜಯ್ ದೇವಗನ್; ಬಾಲಿವುಡ್ ನಟ ಅಜಯ್ ದೇವಗನ್ ರವರು ಕೂಡ ಆರ್ ಆರ್ ಆರ್ ಸಿನಿಮಾದಲ್ಲಿ ಪ್ರಮುಖವಾದ ಅತಿಥಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಇದಕ್ಕಾಗಿ ಅವರು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಆಲಿಯಾ ಭಟ್; ಬಾಲಿವುಡ್ ಚಿತ್ರರಂಗದ ಲೀಡಿಂಗ್ ನಟಿಯಾಗಿರುವ ಆಲಿಯಾ ಭಟ್ ರವರು ಕೂಡ ಸೀತಾ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅವರ ಸ್ಕ್ರೀನ್ ಟೈಮ್ ಹೆಚ್ಚು ಇಲ್ಲದಿದ್ದರೂ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೇ ಕಾರಣಕ್ಕಾಗಿ ಆಲಿಯಾ ಭಟ್ ರವರು ಈ ಸಿನಿಮಾಕ್ಕಾಗಿ ಬರೋಬ್ಬರಿ 10 ಕೋಟಿ ರೂಪಾಯಿಯ ಬೃಹತ್ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.

ಇನ್ನು ಕೊನೆಯದಾಗಿ ಹೇಳುವುದಾದರೆ ನಿರ್ದೇಶಕರಾಗಿರುವ ರಾಜಮೌಳಿ. ರಾಜಮೌಳಿಯವರು ಬೇರೆಯವರ ಹಾಗೆ ಸಂಭಾವನೆ ರೂಪದಲ್ಲಿ ಹಣವನ್ನು ಪಡೆದುಕೊಳ್ಳುವುದಿಲ್ಲ ಬದಲಾಗಿ ಸಿನಿಮಾದ ಲಾಭದಲ್ಲಿ ಬರುವಂತಹ ಹಣವನ್ನು ಪರ್ಸೆಂಟೇಜ್ ರೂಪದಲ್ಲಿ ಪಡೆದುಕೊಳ್ಳುತ್ತಾರೆ. ರಾಜಮೌಳಿಯವರು ಆರ್ ಆರ್ ಆರ್ ಚಿತ್ರದ ಲಾಭದಲ್ಲಿ 30% ಹಣವನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಒಟ್ಟಾರೆಯಾಗಿ ಸಿನಿಮಾದ ನಿರ್ಮಾಪಕರು ಮಾತ್ರವಲ್ಲದೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಕಲಾವಿದರು ಹಾಗೂ ನಿರ್ದೇಶಕರು ಕೂಡ ಉತ್ತಮ ರೀತಿಯಲ್ಲಿ ಹಣವನ್ನು ಗಳಿಸಿದ್ದಾರೆ ಎಂದು ಹೇಳಬಹುದಾಗಿದೆ.

ಒಟ್ಟಾರೆಯಾಗಿ ದಕ್ಷಿಣ ಭಾರತ ಚಿತ್ರರಂಗದಿಂದ ಬಾಲಿವುಡ್ ಸೇರಿದಂತೆ ವಿದೇಶಗಳಲ್ಲಿ ಕೂಡ ದೊಡ್ಡಮಟ್ಟದ ಕಲೆಕ್ಷನ್ ಮಾಡಿರುವ ಸಿನಿಮಾಗಳಲ್ಲಿ ಆರ್ ಆರ್ ಆರ್ ಕೂಡ ಒಂದಾಗಿದ್ದು ದಕ್ಷಿಣ ಭಾರತದ ಹೆಮ್ಮೆಯ ಸಿನಿಮಾಗಳಲ್ಲಿ ಕೂಡ ಇದು ಶಾಮೀಲಾಗಿದೆ. ಈ ಸಿನಿಮಾದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Get real time updates directly on you device, subscribe now.