ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಟಿಮ್ ಡೇವಿಡ್ ರನೌಟ್ ರನೌಟ್, ಸಾರಾ ಕೊಟ್ಟ ರಿಯಾಕ್ಷನ್ ವೈರಲ್.

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐದು ಬಾರಿ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಹೀನಾಮಾನವಾಗಿ ಪ್ರದರ್ಶನವನ್ನು ನೀಡಿದ್ದು ಒಟ್ಟಾರೆಯಾಗಿ ಇಲ್ಲಿಯತನಕ 10 ಸೋಲುಗಳನ್ನು ಈ ಐಪಿಎಲ್ ನಲ್ಲಿ ದಾಖಲಿಸಿದೆ. ಇನ್ನು ಅದರಲ್ಲಿ ತನ್ನ 13 ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲ್ಲುವ ಪಂದ್ಯವನ್ನು ಕೊನೆಯಲ್ಲಿ ಬಿಟ್ಟುಕೊಟ್ಟಿತ್ತು ಎಂಬುದಾಗಿ ಎಲ್ಲರೂ ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಸಾಕಷ್ಟು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ದುಃಖಿತರು ಕೂಡ ಆಗಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಚಿನ್ ತೆಂಡೂಲ್ಕರ್ ಅವರು ಒಂದುಕಾಲದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹಾಗೂ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಸಚಿನ್ ತೆಂಡೂಲ್ಕರ್ ರವರ ಮಗನಾಗಿರುವ ಅರ್ಜುನ್ ತೆಂಡೂಲ್ಕರ್ ಅವರನ್ನು ಕೂಡ 30 ಲಕ್ಷ ರೂಪಾಯಿಗಳಿಗೆ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ಇದಕ್ಕಾಗಿ ಅನಿಸುತ್ತೆ ಸಚಿನ್ ತೆಂಡೂಲ್ಕರ್ ಅವರ ಮಗಳಾಗಿರುವ ಸಾರ ತೆಂಡೂಲ್ಕರ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಹಲವಾರು ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳನ್ನು ಸ್ಟೇಡಿಯಂಗೆ ಬಂದು ನೋಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೂಡ ಕೊನೆಯ ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲನ್ನು ಅನುಭವಿಸಿತ್ತು.

ಒಂದು ಹಂತದಲ್ಲಿ ಸೋಲುವ ಹಂತದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಟಿಮ್ ಡೇವಿಡ್ ಅವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗೆಲುವಿನ ದಡಕೆ ಸೇರಿಸುವ ಹಂತದಲ್ಲಿದ್ದರು. ಹೌದು ಗೆಳೆಯ ಆದರೆ ಕೊನೆಯ ಓವರ್ ಗೂ ಮುನ್ನ ಸಿಂಗಲ್ ತೆಗೆದುಕೊಳ್ಳಲು ಹೋದರು ಯಾಕೆಂದರೆ ಮುಂದಿನ ಓವರ್ನಲ್ಲಿ ಅವರೇ ಕ್ರೀಸ್ ನಲ್ಲಿ ಇರಬೇಕೆಂಬುದು ಎಂದುಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ಅವರು ರನೌಟ್ ಆಗುತ್ತಾರೆ. ಅವರ ಔಟ್ ಎನ್ನುವುದು ಮುಂಬೈ ತಂಡಕ್ಕೆ ಸಹಿಸಲು ಸಾಧ್ಯವಾಗಲಿಲ್ಲ ಅದೇ ರೀತಿ ಅವರ ಅಭಿಮಾನಿಗಳು ಕೂಡ ಈ ರನೌಟ್ ನಿಂದಾಗಿ ಬೇಸರದಲ್ಲಿ ಬಿದ್ದರು. ಇವರಲ್ಲಿ ಸಾರಾ ತೆಂಡೂಲ್ಕರ್ ಕೂಡ ಒಬ್ಬರಾಗಿದ್ದರು. ಸಾರಾ ತೆಂಡೂಲ್ಕರ್ ರವರು ಬೇಸರದಲ್ಲಿ ಇರುವಂತಹ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

Get real time updates directly on you device, subscribe now.