ಮತ್ತೆ ಬರುತ್ತಿದೆ ರಾಜರಾಣಿ: ಎರಡನೇ ಸೀಸನ್ ಆರಂಭವಾಗುತ್ತಿರುವುದು ಯಾವಾಗ ಗೊತ್ತೆ?? ಈ ಕುರಿತು ಹೊರಬಿದ್ದ ಮಾಹಿತಿಯೇನು ಗೊತ್ತೇ?

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಕಲರ್ಸ್ ಕನ್ನಡ ವಾಹಿನಿ ಆಗಾಗ ಹಲವಾರು ಪ್ರಯೋಗಾತ್ಮಕ ರಿಯಾಲಿಟಿ ಶೋ ಕಾರ್ಯಕ್ರಮಗಳ ಪ್ರಸಾರ ಆರಂಭಿಸುತ್ತದೆ ಇರುತ್ತದೆ. ಇದರಿಂದಾಗಿ ತನ್ನ ಪ್ರೇಕ್ಷಕರಿಗೆ ಹೊಸ ಹೊಸ ಮನೋರಂಜನೆಯನ್ನು ನೀಡುತ್ತಲೇ ಇರುತ್ತದೆ. ಉದಾಹರಣೆಗೆ ಬಿಗ್ ಬಾಸ್ ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಪ್ರಸಾರ ಮಾಡುವ ಮೂಲಕ ಕಲರ್ಸ್ ಕನ್ನಡ ವಾಹಿನಿ ಕಿರುತೆರೆ ಕ್ಷೇತ್ರದಲ್ಲಿ ರಿಯಾಲಿಟಿ ಶೋ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ಇನ್ನು ಕಿರುತೆರೆಯ ಸೆಲೆಬ್ರಿಟಿಗಳ ದಾಂಪತ್ಯ ಜೀವನದ ಕುರಿತ ರಿಯಾಲಿಟಿ ಶೋ ಕಾರ್ಯಕ್ರಮವೆಂದು ರಾಜ ರಾಣಿ ಕಾರ್ಯಕ್ರಮ ಆಗಿತ್ತು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದಂತಹ ಈ ಕಾರ್ಯಕ್ರಮ ಅದ್ವಿತೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಪಡೆದುಕೊಂಡಿತ್ತು. ಪ್ರೇಕ್ಷಕರು ಕೂಡ ರಾಜ-ರಾಣಿ ಕಾರ್ಯಕ್ರಮವನ್ನು ಇಷ್ಟಪಟ್ಟು ವೀಕ್ಷಿಸಿದ್ದರು. ಇಂತಹ ಪ್ರಯೋಗಾತ್ಮಕ ರಿಯಾಲಿಟಿ ಶೋ ಕಾರ್ಯಕ್ರಮ ಗಳಿಂದಲೇ ಕಲರ್ಸ್ ಕನ್ನಡ ವಾಹಿನಿ ಕಿರುತೆರೆಯ ಪ್ರೇಕ್ಷಕರಲ್ಲಿ ಪ್ರಸಿದ್ಧವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸೃಜನ್ ಲೋಕೇಶ್ ಹಾಗೂ ನಟಿ ತಾರಾ ಅನುರಾಧ ರವರು ಕಾಣಿಸಿಕೊಂಡಿದ್ದು ಅನುಪಮ ಗೌಡ ರವರು ನಿರೂಪಕರಾಗಿ ಕಾಣಿಸಿಕೊಂಡಿದ್ದರು.

12ಕ್ಕೂ ಅಧಿಕ ಸೆಲೆಬ್ರಿಟಿ ದಂಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅವರಿಗೆ ಹಲವಾರು ಟಾಸ್ಕ್ ಗಳನ್ನು ನೀಡಲಾಗಿತ್ತು. ಕೊನೆಗೆ ಈ ಕಾರ್ಯಕ್ರಮವನ್ನು ಗೆದ್ದುಕೊಂಡಿದ್ದು ನೇಹಾ ಗೌಡ ಹಾಗೂ ಅವರ ಪತಿ ಚಂದನ್. ದಂಪತಿಗಳ ಸಂಬಂಧದ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯಕ್ರಮ ವಾಗಿರುವ ರಾಜ-ರಾಣಿ ಕಾರ್ಯಕ್ರಮದ ಮುಂದಿನ ಸೀಸನ್ ಯಾವಾಗ ಪ್ರಾರಂಭವಾಗುತ್ತದೆ ಎಂಬುದಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಅದಕ್ಕೆ ಉತ್ತರಿಸಿರುವ ಕಲರ್ಸ್ ಕನ್ನಡ ವಾಹಿನಿ ರಾಜರಾಣಿ ಸೀಸನ್ 2 ಅತಿಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬುದಾಗಿ ಅಧಿಕೃತವಾಗಿ ಹೇಳಿಕೊಂಡಿದೆ. ಈ ಕಾರ್ಯಕ್ರಮದ ಅಭಿಮಾನಿಗಳು ಈಗಾಗಲೇ ಕಾರ್ಯಕ್ರಮ ಯಾವಾಗ ಪ್ರಾರಂಭವಾಗುತ್ತದೆ ಎಂಬುದಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ಸೀಸನ್ ನಲ್ಲಿ ಯಾರೆಲ್ಲ ಬರಲಿದ್ದಾರೆ ಎಂಬ ಕುತೂಹಲವೂ ಕೂಡ ಅವರಲ್ಲಿದೆ.

Get real time updates directly on you device, subscribe now.