ಎಬಿಡಿ ಹಾಗೂ ಕ್ರಿಸ್ ಗೇಲ್ ರವರನ್ನು ಮರೆಯದ ಆರ್ಸಿಬಿ ತಂಡ, ಇದೀಗ ಇಬ್ಬರಿಗೂ ಅದೊಂದು ವಿಶೇಷ ಗೌರವ ಸಲ್ಲಿಸಿದ್ದು ಹೇಗೆ ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂದಾಗಲೆಲ್ಲ ನಮಗೆ ನೆನಪಿಗೆ ಬರುವಂತಹ ಪ್ರಮುಖ ಕ್ರಿಕೆಟ್ ಆಟಗಾರರು ಎಂದರೆ ವಿರಾಟ್ ಕೊಹ್ಲಿ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್. ಇವರು ಮೂರು ಜನರನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತ್ರಿಮೂರ್ತಿಗಳು ಎಂಬುದಾಗಿ ಕರೆಯಲಾಗುತ್ತಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯಂತ ಯಶಸ್ವಿ ಹಾಗೂ ತಂಡದ ಪ್ರಮುಖ ಆಟಗಾರರಾಗಿದ್ದ ಗುರುತಿಸಿಕೊಂಡವರಲ್ಲಿ ಕ್ರಿಸ್ ಗೇಲ್ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ರವರು ಪ್ರಮುಖರಾಗಿದ್ದಾರೆ.

ವಿರಾಟ್ ಕೊಹ್ಲಿ ರವರು ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಲ್ಲಿ ಇನ್ನು ಕೂಡ ಪ್ರಮುಖ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ರವರು ಈಗಾಗಲೇ ಐಪಿಎಲ್ ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಸದ್ಯಕ್ಕೆ ಮೊದಲ ಬಾರಿಗೆ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಬೆಸ್ಟ್ ಆಟಗಾರರಿಗೆ ಹಾಲ್ ಆಫ್ ಫೇಮ್ ಗೌರವವನ್ನು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದೇ ರೀತಿಯ ಕಾರ್ಯಗಳಿಂದಲೇ ಆರ್ಸಿಬಿ ತಂಡ ಅಭಿಮಾನಿಗಳಿಗೆ ಇಷ್ಟ ಆಗುವುದು. ಆರ್ಸಿಬಿ ತಂಡದ ಪರವಾಗಿ ಡಿವಿಲಿಯರ್ಸ್ ರವರು 157 ಪಂದ್ಯಗಳಿಂದ 4522 ರನ್ ಗಳನ್ನು ಗಳಿಸುವ ಮೂಲಕ ತಂಡದ ಅತ್ಯಂತ ಹೆಚ್ಚು ರನ್ ಗಳಿಸಿರುವ ಎರಡನೆ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಯೂನಿವರ್ಸಲ್ ಬಾಸ್ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್ ರವರು 3420 ರನ್ನುಗಳನ್ನು ಗಳಿಸಿದ್ದಾರೆ. ಇಬ್ಬರೂ ಕೂಡ ತಾವಿದ್ದ ಅಷ್ಟೂ ಸಮಯ ಆರ್ಸಿಬಿ ತಂಡದ ಆಧಾರವಾಗಿ ಕಾಣಿಸಿಕೊಂಡಿದ್ದರು. ಇನ್ನು ಇಬ್ಬರಿಗೂ ಕೂಡ ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲ್ ಆಫ್ ಫೇಮ್ ಗೌರವವನ್ನು ನೀಡಿದೆ. ಇನ್ನು ಈ ವಿಡಿಯೋದಲ್ಲಿ ಇಬ್ಬರು ಕೂಡ ಭಾವುಕರಾಗಿ ಮಾತನಾಡಿ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಆರ್ಸಿಬಿ ತಂಡದೊಂದಿಗೆ ಹಲವಾರು ಉತ್ತಮ ಕ್ಷಣಗಳನ್ನು ಕಳೆದಿದ್ದೇವೆ ಇದು ಕೂಡ ಖಂಡಿತವಾಗಿ ಜೀವನಪರ್ಯಂತ ನಮಗೆ ನೆನಪಿರುತ್ತದೆ. ಈ ಗೌರವಕ್ಕೆ ತಂಡಕ್ಕೆ ನಾವು ಋಣಿಯಾಗಿದ್ದೇವೆ ಎಂಬುದಾಗಿ ಕೂಡ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಇಂದಿಗೂ ಕೂಡ ಮನೆಯಲ್ಲಿದ್ದಾಗಲೂ ತಂಡದ ಪಂದ್ಯಗಳನ್ನು ನೋಡುತ್ತಿದ್ದೇವೆ ಎಂಬುದಾಗಿ ಕೂಡ ಹಂಚಿಕೊಂಡಿದ್ದಾರೆ.

Get real time updates directly on you device, subscribe now.