ಚೆನ್ನೈ ಸೂಪರ್ ಕಿಂಗ್ಸ್ ಕುರಿತು ಸುರೇಶ್ ರೈನಾ ಮಾಡಿದ ಅದೊಂದು ಕಾಮೆಂಟ್ ಬಾರಿ ಸದ್ದು ಮಾಡುತ್ತಿದೆ, ಅಷ್ಟಕ್ಕೂ ಮಿಸ್ಟರ್ ಐಪಿಎಲ್ ಹೇಳಿದ್ದೇನು ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ರವರು ಚೆನ್ನೈ ಸೇರಿದಂತೆ ಯಾವುದೇ ತಂಡದಲ್ಲಿ ಮೆಗಾ ಹರಾಜಿನಲ್ಲಿ ಆಯ್ಕೆಯಾಗಿರಲಿಲ್ಲ. ಹೀಗಾಗಿ ಈ ಬಾರಿ ಟೂರ್ನಮೆಂಟಿನ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೌದು ಗೆಳೆಯರೇ ಸುರೇಶ್ ರೈನಾ ರವರು 205 ಪಂದ್ಯಗಳಿಂದ 55528 ರನ್ನುಗಳನ್ನು ಗಳಿಸುವ ಮೂಲಕ ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿದ್ದರು. ಆದರೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಮೆಗಾ ಹರಾಜಿನಲ್ಲಿ ಸುರೇಶ್ ರೈನಾ ರವರನ್ನು ಖರೀದಿಸುವ ಪ್ರಯತ್ನವನ್ನು ಕೂಡ ಮಾಡಲಿಲ್ಲ.
ಇದು ನಿಜಕ್ಕೂ ಕೂಡ ಪ್ರತಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಸೇರಿದಂತೆ ಸುರೇಶ್ ರೈನಾ ಅವರವರ ಅಭಿಮಾನಿಗಳಿಗೂ ಕೂಡ ಬೇಸರವನ್ನು ಉಂಟುಮಾಡಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೂ ಗೆದ್ದಿರುವ 4 ಐಪಿಎಲ್ ಫೈನಲ್ ನಲ್ಲಿ ಅಥವಾ ಆ ತಂಡದಲ್ಲಿ ಸುರೇಶ್ ರೈನಾ ರವರು ಕೂಡ ತಂಡದ ಸದಸ್ಯರಾಗಿದ್ದರು. ಈ ಬಾರಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ವಿಫಲವಾಗಿದೆ. ಎರಡು ಬಾರಿ ಕೂಡ ಸುರೇಶ್ ರೈನಾ ಅವರು ತಂಡದಲ್ಲಿ ಇರಲಿಲ್ಲ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೂಡ ಈ ಕುರಿತಂತೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪೋಸ್ಟ್ಗೆ ಸುರೇಶ್ ರೈನಾ ರವರು ನೀಡಿರುವ ರಿಪ್ಲೈ ಈಗ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತದೆ. ಹೌದು ಗೆಳೆಯರೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ಸ್ಟಾಗ್ರಾಮ್ ನಲ್ಲಿ ಮೈದಾನದಲ್ಲಿ ಧೋನಿ ಎಂಟ್ರಿ ನೀಡಿದಾಗ ಎಲ್ಲರೂ ಧ್ವನಿ ಧ್ವನಿ ಎಂದು ಕೂಗುತ್ತಾರೆ ಇದಕ್ಕಿಂತ ಉತ್ತಮವಾದ ಅನುಭವ ಇನ್ನೇನು ಇಲ್ಲ ಎಂಬುದಾಗಿ ಪೋಸ್ಟ್ ಮಾಡಿತ್ತು. ಇದಕ್ಕೆ ಸುರೇಶ್ ರೈನ ರವರು ಧೋನಿಯಿಲ್ಲದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಊಹಿಸಿ ಎಂಬುದಾಗಿ ರಿಪ್ಲೇ ಹಾಕಿದ್ದರು. ಅಂದರೆ ಧೋನಿ ಇಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ ಎಂಬುದಾಗಿ ಸುರೇಶ್ ರೈನಾ ರವರು ಹೇಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರ ಇದ್ದರೂ ಕೂಡ ಸುರೇಶ್ ರೈನ ರವರು ತಂಡಕ್ಕೆ ಬೆಂಬಲ ನೀಡುವಲ್ಲಿ ಯಾವುದೇ ಕಡಿಮೆ ಮಾಡಿಲ್ಲ.