ಹಿಂದೂ ಯುವಕ ಮುಸ್ಲಿಂ ಹುಡುಗಿ ಪ್ರೀತಿಯ ಕಥೆ: ಮದುವೆಯಾದ ನಂತರ ನಡೆಯಿತು ಹೈಡ್ರಾಮ, ಕೊನೆಗೆ ಏನಾಯಿತು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಜಕ್ಕೂ ಕೂಡ ಇತ್ತೀಚಿಗೆ ನಡೆದಿರುವಂತಹ ಈ ಘಟನೆ ಯೊಂದು ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಪ್ರೀತಿಯನ್ನು ಯಾವುದೇ ಧರ್ಮ ಹಾಗೂ ಜಾತಿ ವಯಸ್ಸನ್ನು ನೋಡಿ ಆಗುವುದಿಲ್ಲ ಎಂಬುದನ್ನು ಹೇಳುತ್ತಾರೆ. ಇಲ್ಲಿ ಕೂಡ ಇಬ್ಬರ ಧರ್ಮ ಬೇರೆಯಾಗಿದ್ದರು ಕೂಡ ಪ್ರೀತಿಸಿದ್ದರು.

ಗೆಳೆಯರೇ ಕಳೆದ ಒಂದು ವರ್ಷದಿಂದ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿರುವ ಕನಕರೆಡ್ಡಿ ಹಾಗೂ ದಿಲ್ಶಾದ್ ಬೇಗಂ ಐದು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಇನ್ನು ಇಬ್ಬರೂ ಕೂಡ ಕನಕಗಿರಿ ಪೊಲೀಸ್ ಠಾಣೆಗೆ ಹೋಗಿ ತಮಗೆ ರಕ್ಷಣೆ ಕೊಡುವಂತೆ ಪೊಲೀಸರಲ್ಲಿ ಅಂಗಲಾಚಿದ್ದಾರೆ. ಈ ಸಂದರ್ಭದಲ್ಲಿ ಈ ಸುದ್ದಿ ತಿಳಿದಂತಹ ಎರಡು ಕಡೆಯವರು ಕೂಡ ಕನಕಗಿರಿ ಪೊಲೀಸ್ ಠಾಣೆಗೆ ತೆರಳಿ ದೊಡ್ಡ ನಾಟಕವನ್ನೇ ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ಹುಡುಗಿಯ ಮನಸ್ಸನ್ನು ಒಲಿಸಿ ಮನೆಗೆ ಕರೆದುಕೊಂಡು ಹೋಗಲು ಹುಡುಗಿಯ ಮನೆಯವರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ ಆದರೆ ಯಾವ ಪ್ರಯತ್ನಕ್ಕೂ ಕೂಡ ಹುಡುಗಿ ಸೊಪ್ಪು ಹಾಕಿಲ್ಲ. ಸಾಕಷ್ಟು ಪ್ರಯತ್ನಗಳ ನಡುವೆಯೂ ಕೂಡ ಹುಡುಗಿ ತನ್ನ ಮನೆಯವರೊಂದಿಗೆ ಹೋಗಲು ಒಪ್ಪಿಕೊಂಡಿರಲಿಲ್ಲ. ಇನ್ನೊಂದು ಕಡೆ ಠಾಣೆಯ ಹೊರಗಡೆ ಹುಡುಗನ ಕಡೆಯವರು ಕೂಡ ಜಮಾ ಆಗಿದ್ದರು. ಈ ಸಂದರ್ಭದಲ್ಲಿ ಹುಡುಗಿಯನ್ನು ಹಾಗೂ ಆಕೆಯ ಮನೆಯವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಪೊಲೀಸರು ಏರ್ಪಾಡು ಮಾಡುತ್ತಾರೆ ಹಾಗೂ ಅಲ್ಲಿ ಹೋದ ನಂತರ ಅಲ್ಲಿ ಕೂಡ ಹುಡುಗಿಯ ಮನವನ್ನು ಒಲಿಸಲು ಆಕೆಯ ಮನೆಯವರು ಸಾಕಷ್ಟು ಪ್ರಯತ್ನವನ್ನು ಪಡುತ್ತಾರೆ.

ಇದೇ ಸಂದರ್ಭದಲ್ಲಿ ಹುಡುಗನ ಕಡೆಯವರು ಕೂಡ ಸಾಂತ್ವನ ಕೇಂದ್ರದ ಹೊರಗಡೆ ಅಡಿಗೆ ಮಾಡಿಕೊಂಡು ಅಲ್ಲೇ ಇರುವ ಮೂಲಕ ಇದಕ್ಕೆ ಪರೋಕ್ಷವಾಗಿ ಪ್ರತಿಭಟನೆ ಮಾಡುತ್ತಾರೆ. ಇದಾದ ನಂತರ ಹುಡುಗಿಯ ಪೋಷಕರಿಗೆ ಕೊನೆಯ ಬಾರಿ ಅವಕಾಶ ಎನ್ನುವಂತೆ ತಾವರಗೆರೆ ಪೋಲಿಸ್ ಸ್ಟೇಷನ್ ಗೆ ನವ ಜೋಡಿಗಳನ್ನು ಹಾಗೂ ಹುಡುಗಿಯ ಮನೆಯವರನ್ನು ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಹುಡುಗನ ಕಡೆಯವರು ಕೂಡ ಪೊಲೀಸ್ ವ್ಯಾನನ್ನು ಅಡ್ಡಹಾಕಿ ನಮ್ಮನ್ನು ಕೂಡ ಅಲ್ಲಿಗೆ ಕರೆದುಕೊಂಡು ಹೋಗಿ ಎಂಬುದಾಗಿ ಭಿನ್ನವಿಸಿ ಕೊಳ್ಳುತ್ತಾರೆ. ನಂತರ ಅಲ್ಲಿ ಕೊನೆಯಬಾರಿ ಕೂಡ ಹುಡುಗಿ ಅವರ ಮನೆಯವರ ಮಾತನ್ನು ಕೇಳದೆ ತಾನು ಪ್ರೀತಿಸಿದವನ ಜೊತೆಯ ಇರುತ್ತೇನೆ ಎಂಬುದಾಗಿ ಹೇಳುತ್ತಾಳೆ. ಕೊನೆಗೂ ಕೂಡ ಇವರಿಬ್ಬರ ಮದುವೆಗೆ ಯಾರ ಆಕ್ಷೇಪವೂ ಇಲ್ಲದೆ ಪ್ರಕರಣ ಸುಖಾಂತ್ಯ ಕಂಡಿದೆ.

Get real time updates directly on you device, subscribe now.