ಮುಂದಿನ ವಿಶ್ವಕಪ್ ನಲ್ಲಿ ಆಯ್ಕೆ ಯಾಗಲೇಬೇಕಾದ ಆಟಗಾರನನ್ನು ಹೆಸರಿಸಿದ ಹರ್ಭಜನ್. ಈತ ಆಯ್ಕೆಯಾದರೆ ಕಪ್ ನಮ್ಮದೇನಾ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನಲ್ಲಿ ಬಹುತೇಕ ಎಲ್ಲಾ ಆಟಗಾರರು ಕೂಡ ತಮ್ಮ ಕಂಪರ್ಟ್ ಝೋನ್ ನಿಂದ ಹೊರಬಂದು ಮೈಚಳಿಬಿಟ್ಟು ಆಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕೆಲವು ಅನುಭವಿ ಆಟಗಾರರು ಕಳೆದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಈ ಬಾರಿಯ t20 ವರ್ಲ್ಡ್ ಕಪ್ ಆಯ್ಕೆಗಾಗಿ ಪ್ರತಿಯೊಬ್ಬರು ಕೂಡ ಪರಿಶ್ರಮವನ್ನು ಪಡುತ್ತಿದ್ದಾರೆ. ಅದರಲ್ಲೂ ಈ ಬಾರಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿರುವಂತಹ ಯುವ ಆಟಗಾರರು ಅನುಭವಿ ಆಟಗಾರರಿಗೆ ಸಾಕಷ್ಟು ಪೈಪೋಟಿ ನೀಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಯಾವುದೇ ಅಂಜಿಕೆಯಿಲ್ಲದೆ ಯುವ ಆಟಗಾರರು ಅನುಭವಿ ಆಟಗಾರರಿಗಿಂತ ಹೆಚ್ಚಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ವರ್ಲ್ಡ್ ಕಪ್ ತಂಡದ ಆಯ್ಕೆ ಆಯ್ಕೆ ಗಾರರಿಗೆ ಖಂಡಿತವಾಗಿ ಸಾಕಷ್ಟು ಕಷ್ಟವನ್ನು ತಂದೊಡ್ಡಲಿದೆ ಎಂದರೆ ತಪ್ಪಾಗಲಾರದು. ಇನ್ನು ಈ ಬಾರಿಯ ವರ್ಲ್ಡ್ ಕಪ್ ಆಯ್ಕೆಯ ಕುರಿತಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ಹರ್ಭಜನ್ ಸಿಂಗ್ ಅವರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಒಬ್ಬ ಆಟಗಾರರನ್ನು ವರ್ಲ್ಡ್ ಕಪ್ ತಂಡಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರು ಆಯ್ಕೆ ಮಾಡಲೇಬೇಕು ಎಂಬುದಾಗಿ ಬ್ಯಾಟ್ ಬೀಸಿದ್ದಾರೆ. ಹಾಗಿದ್ದರೆ ಆಟಗಾರ ಯಾರು ಎಂಬುದನ್ನು ತಿಳಿದುಕೊಳ್ಳೋಣ. ಹೌದು ಗೆಳೆಯರೇ ಹರ್ಭಜನ್ ಸಿಂಗ್ ರವರು ಶಿಫಾರಸ್ಸು ಮಾಡುತ್ತಿರುವ ಆಟಗಾರ ಬೇರೆ ಯಾರು ಅಲ್ಲ ದಿನೇಶ್ ಕಾರ್ತಿಕ್. ಈ ಬಾರಿ ಐಪಿಎಲ್ ನಲ್ಲಿ ಫಿಶರ್ ಜವಾಬ್ದಾರಿಯನ್ನು ಅವರಷ್ಟು ಪರಿಪೂರ್ಣವಾಗಿ ಬೇರೆ ಯಾವ ಆಟಗಾರರನ್ನು ಕೂಡ ನಿಭಾಯಿಸಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಒಂದು ವೇಳೆ ಆಯ್ಕೆ ಸಮಿತಿಯಲ್ಲಿ ನಾನಿದ್ದರೆ ಖಂಡಿತವಾಗಿ ತಂಡಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲು ಧ್ವನಿಯನ್ನು ಏರಿಸುತ್ತಿದೆ ಎಂಬುದಾಗಿ ಕೂಡ ಹರ್ಭಜನ್ ಸಿಂಗ್ ರವರು ಹೇಳಿಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಹಂಚಿಕೊಳ್ಳಿ.

Get real time updates directly on you device, subscribe now.