ಇದ್ದಕ್ಕಿದ್ದ ಹಾಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ದಪ್ಪ ಆಗುತ್ತಿರುವುದಕ್ಕೆ ಕಾರಣವೇನು ಗೊತ್ತೇ?? ಕುದ್ದು ರಕ್ಷಿತ್ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅದರಲ್ಲೂ ವಿಶೇಷವಾಗಿ ಯುವ ಆಡಿಯನ್ಸ್ ಅನ್ನು ಹಿಡಿದಿಟ್ಟುಕೊಳ್ಳುವ ಹಾಗೆ ಸಿನಿಮಾ ಮಾಡುವ ಕೌಶಲ್ಯವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕರಗತಮಾಡಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಉಳಿದವರು ಕಂಡಂತೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬಂದಂತಹ ರಕ್ಷಿತ್ ಶೆಟ್ಟಿ ಅವರು ನಂತರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆಯುತ್ತಾರೆ. ನಂತರ ಅವರ ಸಿನಿಮಾ ಕರಿಯರ್ ಗೆ ದೊಡ್ಡ ಬ್ರೇಕ್ ಥ್ರೂ ನೀಡಿರುವಂತಹ ಸಿನಿಮಾ ಎಂದರೆ ಅದು ಕಿರಿಕ್ ಪಾರ್ಟಿ ಸಿನಿಮಾ ಎಂದರೆ ತಪ್ಪಾಗಲಾರದು.
ಅವರು ಆಯ್ಕೆಮಾಡುವ ಸಿನಿಮಾ ರೀತಿ ಹಾಗೂ ಅವರ ನಿರ್ದೇಶನ ಶೈಲಿ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಇಷ್ಟವಾಗುತ್ತದೆ ಹೀಗಾಗಿ ಇಂದು ಅವರು ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ನಾಯಕ ನಟ ಹಾಗೂ ನಿರ್ದೇಶಕರಲ್ಲಿ ಮುಂಚೂಣಿ ಸ್ಥಾನದಲ್ಲಿ ಒಬ್ಬರಾಗಿ ಕಾಣಸಿಗುತ್ತಾರೆ. ಇನ್ನು ಸದ್ಯಕ್ಕೆ ಅವರ ನಟನೆಯ 777 ಚಾರ್ಲಿ ಸಿನಿಮಾ ಇದೇ ಜೂನ್ 10ರಂದು ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಅವರು ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚಿಗೆ ಅವರನ್ನು ನೀವು ನೋಡಿರಬಹುದು ದೈಹಿಕವಾಗಿ ಅವರು ಸಾಕಷ್ಟು ದಪ್ಪವಾಗಿದ್ದರೆ. ಇದಕ್ಕೆ ಕಾರಣ ಏನೆಂಬುದನ್ನು ಅವರೇ ಖುದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹೌದು ಗೆಳೆಯರೇ ರಕ್ಷಿತ್ ಶೆಟ್ಟಿ ರವರು ತಮ್ಮ ಮುಂದಿನ ಸಿನಿಮಾ ವಾಗಿರುವ ಸಪ್ತ ಸಾಗರದಾಚೆಯೆಲ್ಲೋ ಸಿನಿಮಾದ ಪ್ರಥಮಾರ್ಧದ ಚಿತ್ರೀಕರಣವನ್ನು ಮುಗಿಸಿದ್ದಾರೆ. ದ್ವಿತೀಯ ಅದ್ಭುತ ಚಿತ್ರೀಕರಣಕ್ಕಾಗಿ ನಿರ್ದೇಶಕರು ಅವರಿಗೆ 15 ಕೆಜಿ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಹೇಳಿದ್ದಾರೆ. ಈಗಾಗಲೇ 10 ಕೆಜಿ ಜಾಸ್ತಿ ಮಾಡಿಕೊಂಡಿದ್ದಾರೆ ಇನ್ನೂ ಕೂಡ 5ಕೆಜಿ ಜಾಸ್ತಿ ಮಾಡಿಕೊಳ್ಳಬೇಕು ಎನ್ನುವುದಾಗಿ ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಇದ್ದಂತಹ ಗೊಂದಲವನ್ನು ಪರಿಹರಿಸಿದ್ದಾರೆ.