ವಿಶ್ವದ ಶ್ರೀಮಂತ ಲೀಗ್ ಗೆ ಇದೆಂತಹ ಮುಜುಗರ, ಐಪಿಎಲ್ ನಲ್ಲಿ ಕ್ರಿಕೆಟ್ ಜಗತ್ತೇ ಮುಜುಗರಕ್ಕೆ ಒಳಗಾಗಿದ್ದು ಯಾಕೆ ಗೊತ್ತೇ?? ಹೀಗ್ಯಾಕೆ ಆಯಿತು ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದಂತಹ ಐಪಿಎಲ್ ಪಂದ್ಯ ನಿಜಕ್ಕೂ ಕೂಡ ಜಾಗತಿಕ ಕ್ರಿಕೆಟಿನಲ್ಲಿ ಮುಜುಗರವನ್ನು ಉಂಟು ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ನಿನ್ನೆ ನಡೆದಂತಹ ಪಂದ್ಯ ಐಪಿಎಲ್ ಗೆ ಕಳಂಕ ತರುವಂತಹ ಕೆಲಸ ಮಾಡಿದೆ ಎನ್ನಬಹುದಾಗಿದೆ. ಹೌದು ಗೆಳೆಯರೇ ನಿನ್ನೆ ನಡೆದಿರುವಂತಹ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಣ ಪಂದ್ಯ ಎನ್ನುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಬಹುಮುಖ್ಯ ಪಂದ್ಯವಾಗಿತ್ತು. ಆದರೆ ಇಲ್ಲಿ ನಡೆದಿರುವಂತಹ ಕೆಲವು ಘಟನೆಗಳಿಂದಾಗಿ ಪರೋಕ್ಷವಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೋಲುವಂತಾಯಿತು.
ಇದು ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನ್ನುವ ಖ್ಯಾತಿಗೆ ಒಳಗಾಗಿದೆ ಐಪಿಎಲ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಟೀಕಿಸು ವಂತಾಯಿತು. ಐಪಿಎಲ್ ಅನ್ನು ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನ್ನಲಾಗುತ್ತದೆ ಆದರೆ ನಿನ್ನೆ ನಡೆದಂತಹ ಪಂದ್ಯದಲ್ಲಿ ನಡೆದ ಘಟನೆ ನಿಜಕ್ಕೂ ಕೂಡ ಇದರ ವಿರುದ್ಧ ಪ್ರಶ್ನೆ ಮೂಡುವಂತೆ ಮಾಡುತ್ತದೆ. ಹೌದು ಗೆಳೆಯರೇ ಮೊದಲು ಬ್ಯಾಟಿಂಗ್ ಗೆ ಇಳಿದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಬೌಲರ್ಗಳ ಬೌಲಿಂಗ್ ದಾ’ಳಿಗೆ ತತ್ತರಿಸಿ ಹೋಯಿತು. ಆದರೆ ಇಲ್ಲಿ ಇನ್ನೊಂದು ವಿಚಾರವನ್ನು ನಾವು ನೆನಪಿಸಿಕೊಳ್ಳಬೇಕು ಅದೇನೆಂದರೆ ಚೆನ್ನೈ ಸೂಪರ್ ಕಿಂಗ್ ಬ್ಯಾಟಿಂಗ್ ಮಾಡಿದ ಮೊದಲ 10 ಎಸೆತಗಳಲ್ಲಿ ಸ್ಟೇಡಿಯಂನಲ್ಲಿ ಕರೆಂಟ್ ಇರದಿದ್ದ ಕಾರಣದಿಂದಾಗಿ ಡಿ ಆರ್ ಎಸ್ ತೀರ್ಪನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಈ ಕಾರಣದಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೆವೊನ್ ಕಾನ್ವೆ ಔಟ್ ಇಲ್ಲದಿದ್ದರೂ ಕೂಡ ಔಟ್ ಆಗಬೇಕಾಯಿತು ಯಾಕೆಂದರೆ ಅವರಿಗೆ ಡಿ ಆರ್ ಎಸ್ ತೆಗೆದುಕೊಳ್ಳಲು ಅವಕಾಶ ಇರಲಿಲ್ಲ ಯಾಕೆಂದರೆ ಸ್ಟೇಡಿಯಂನಲ್ಲಿ ಕರೆಂಟ್ ಇರದಿದ್ದ ಕಾರಣ. ಒಂದು ಶ್ರೀಮಂತ ಕ್ರಿಕೆಟ್ ಲೀಗ್ ನಲ್ಲಿ ಕರೆಂಟ್ ಸಮಸ್ಯೆ ಕಾರಣದಿಂದಾಗಿ ಡಿ ಆರೆಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಯಾರು ತಾನೆ ಒಪ್ಪಿಕೊಳ್ಳಲು ಸಾಧ್ಯ ಹೇಳಿ. ಹೀಗಾಗಿ ಪ್ರಮುಖ ಬ್ಯಾಟ್ಸ್ಮನ್ ಗಳನ್ನು ಈ ಮೂಲಕ ಕಳೆದುಕೊಂಡ ನಂತರ ಧೋನಿ ರವರ ಕೊಂಚಮಟ್ಟಿಗಿನ ಸಮಾಧಾನಕರ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 97 ರನ್ ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡ ಸುಲಭವಾಗಿ ಮಾಡುವ ಮೂಲಕ ಗೆದ್ದಿದೆ. ಆದರೆ ನಿನ್ನೆ ನಡೆದಿರುವಂತಹ ಘಟನೆ ವ್ಯಾಪಕವಾಗಿ ಟೀಕೆಗೆ ಒಳಗಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.