ನಿಜವಾಗಲೂ ಮರೆಯಲಾಗದ ಪ್ರೀತಿ ಮಾಡುವ 5 ರಾಶಿ ಜನರು ಯಾರು ಗೊತ್ತೇ?? ಇವರು ಪ್ರೀತಿ ಮುರಿದ್ದು ಬಿದ್ದ ಮೇಲು ಮರೆಯುವುದಿಲ್ಲ. ಯಾರ್ಯಾರು ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪ್ರೀತಿಯೆನ್ನುವುದು ಪ್ರಮುಖವಾದ ಅಂಶವಾಗಿರುತ್ತದೆ. ಪ್ರೀತಿ ಇಲ್ಲದ ಜೀವನ ಸಿಹಿ ಇಲ್ಲದಂತಹ ಸಕ್ಕರೆಯಂತಾಗುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಬ್ರೇಕಪ್ ಆದಮೇಲೆ ಕೂಡ ತಮ್ಮ ಸಂಗಾತಿಯ ನೆನಪಿನಲ್ಲೇ ಇರುವಂತಹ ರಾಶಿಯವರ ಕುರಿತಂತೆ. ಇಬ್ಬರು ಬೇರೆ ಆದಮೇಲೆ ಒಬ್ಬರನ್ನೊಬ್ಬರು ಮರೆಯುವುದು ಮಾಮೂಲಿ ಆದರೆ ಈ ರಾಶಿಯವರು ಬೇರೆಯಾದ ಮೇಲೂ ಕೂಡ ತಮ್ಮ ಸಂಗಾತಿಯ ಗುಂಗಿನಲ್ಲಿರುತ್ತಾರೆ.
ವೃಶ್ಚಿಕ ರಾಶಿ; ಜ್ಯೋತಿಷ್ಯಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯವರು ಪ್ರೀತಿಯಲ್ಲಿ ಸಾಕಷ್ಟು ಪ್ರಾಮಾಣಿಕರಾಗಿದ್ದು ತಮ್ಮ ಪ್ರೀತಿಯ ಕುರಿತಂತೆ ಸಾಕಷ್ಟು ಉತ್ಸುಕರಾಗಿರುತ್ತಾರೆ. ಹೀಗಾಗಿ ತಾವು ಪ್ರೀತಿಸುವ ಸಂಗಾತಿ ತಮ್ಮ ಜೀವನಪೂರ್ತಿ ನಮ್ಮೊಂದಿಗೆ ಇರಬೇಕು ಎಂಬುದಾಗಿ ಅಪೇಕ್ಷಿಸುತ್ತಾರೆ. ಹೀಗಾಗಿ ತಮ್ಮ ಸಂಗಾತಿಯ ಕುರಿತಂತೆ ಸಾಕಷ್ಟು ಪೊಸೆಸಿವ್ ಆಗಿರುವ ಇವರನ್ನು ಇವರ ಸಂಗಾತಿ ಬಿಟ್ಟು ಹೋದರೆ ವರ್ಷಗಳ ಕಾಲ ತಮ್ಮ ಕೋಣೆಯಲ್ಲಿ ಒಬ್ಬಂಟಿಯಾಗಿ ಕೂತು ಅಳುತ್ತಲೇ ಇರುತ್ತಾರೆ. ಹಲವಾರು ವರ್ಷಗಳ ಕಾಲ ತಮ್ಮ ಸಂಗಾತಿಯ ನೆನಪಿನಲ್ಲಿರುತ್ತಾರೆ. ಅವರು ನೆನಪಿಂದ ಹೊರಬರಲು ಇವರಿಗೆ ಸಾಧ್ಯವಾಗುವುದು ಕಷ್ಟವಿದೆ.
ಸಿಂಹ ರಾಶಿ; ಬಾಹ್ಯವಾಗಿ ನೋಡಲು ಸಿಂಹರಾಶಿಯವರು ಸಾಕಷ್ಟು ಟಫ್ ಎನ್ನುವುದಾಗಿ ಭಾವಿಸಬಹುದಾಗಿದೆ. ಆದರೆ ಒಮ್ಮೆ ಇವರು ಪ್ರೀತಿಯಿಂದ ಹೊರಬರುವುದು ಅಥವಾ ಮೋಸ ಹೊಂದುವುದು ಆದರೆ ಖಂಡಿತವಾಗಿ ದೀರ್ಘ ಸಮಯದವರೆಗೆ ಇವರು ದುಃಖದಿಂದ ತೊಳಲಾಡುತ್ತಾರೆ. ಹೀಗಾಗಿ ಜೀವನಪರ್ಯಂತ ತಮ್ಮ ಪ್ರೀತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎನ್ನುವ ಚಿಂತೆಯಲ್ಲಿ ಜೀವನ ಕಳೆಯುತ್ತಾರೆ. ಜೀವನದಲ್ಲಿ ಯಶಸ್ಸು ಸಾಧಿಸಿದರು ಕೂಡ ಯಶಸ್ಸಿನಲ್ಲಿ ನನ್ನ ಸಂಗಾತಿ ನನ್ನ ಜೊತೆಗೆ ಇರಬೇಕಾಗಿತ್ತು ಎನ್ನುವ ಚಿಂತೆಯನ್ನು ಹೊಂದಿರುತ್ತಾರೆ.
ವೃಷಭ ರಾಶಿ; ವೃಷಭ ರಾಶಿಯವರು ಜನ್ಮತಃ ಹಠವಾದಿ ಗಳಾಗಿರುತ್ತಾರೆ ಆದರೆ ಇವರು ಒಮ್ಮೆ ಬೇರೆಯವರಿಗೆ ತಮ್ಮ ಮನಸ್ಸನ್ನು ಕೊಟ್ಟಮೇಲೆ ಅವರ ಕುರಿತಂತೆ ಜೀವನಪರ್ಯಂತ ಕಮಿಟ್ ಆಗಿರುತ್ತಾರೆ. ಆದರೆ ಒಂದು ವೇಳೆ ಇವರು ತಮ್ಮ ಜೀವಕ್ಕೆ ಜೀವವಾಗಿದ್ದ ಪ್ರೀತಿಯನ್ನು ಕಳೆದುಕೊಂಡರೆ ಎಲ್ಲರಿಗಿಂತ ಹೆಚ್ಚಾಗಿ ದುಃಖಿಸುತ್ತಾರೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಸಂಗಾತಿ ತೊರೆದರೆ ದುಶ್ಚಟಗಳನ್ನು ಕೂಡ ಪ್ರಾರಂಭಿಸಬಹುದಾಗಿದೆ. ಹೀಗಾಗಿ ಇವರು ಬೇರೆಯವರಿಗೆ ಮನಸ್ಸನ್ನು ಕೊಡುವ ಮೊದಲು ನೂರಾರು ಬಾರಿ ಯೋಚಿಸುವುದು ಉತ್ತಮವಾಗಿದೆ. ಯಾಕೆಂದರೆ ಸಂಗಾತಿಯನ್ನು ಕಳೆದುಕೊಂಡು ಇವರಿಗೆ ಜೀವನ ಮಾಡಲು ಮರಣ ಕ್ಕಿಂತ ಕಷ್ಟಕರವಾದ ಪರಿಸ್ಥಿತಿಯಂದು ಹೇಳಬಹುದಾಗಿದೆ.
ಮೇಷ ರಾಶಿ; ಮೇಷ ರಾಶಿಯವರು ಬ್ರೇಕಪ್ ಆದಮೇಲೆ ತಮ್ಮ ಸಂಗಾತಿಯ ನೆನಪಿನಲ್ಲಿ ಜೀವನಪರ್ಯಂತ ಕಾಲವನ್ನು ಕಳೆಯುತ್ತಾರೆ. ತಮ್ಮ ಸಂಗಾತಿಯೊಂದಿಗೆ ಹೇಳಿದಂತಹ ಒಳ್ಳೆಯ ಕ್ಷಣಗಳನ್ನು ಆಗಾಗ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಕ್ರಮೇಣವಾಗಿ ಇಂತಹ ನೆನಪುಗಳು ಅವರನ್ನು ಮಾನಸಿಕವಾಗಿ ಕುಗ್ಗಿಸುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಾಹ್ಯವಾಗಿ ಅವರು ಸ್ಟ್ರಾಂಗ್ ಆಗಿ ಕಾಣಬಹುದು ಆದರೆ ಸಂಗಾತಿಯ ವಿರಹ ವೇದನೆಯನ್ನು ವುದು ಅವರನ್ನು ಸಾಕಷ್ಟು ಕಾಡುತ್ತದೆ.
ಮಿಥುನ ರಾಶಿ; ಸಾಕಷ್ಟು ವರ್ಷಗಳ ಕಾಲ ಪ್ರೀತಿಯ ನಂತರ ಸಂಗಾತಿ ಅವರನ್ನು ತೊರೆದು ಹೋದರೆ ಅವರು ಮರೆಯಲು ಸಾಕಷ್ಟು ವಿಚಾರಗಳಿಗೆ ತೊಡಗುತ್ತಾರೆ. ಸ್ನೇಹಿತರೊಂದಿಗೆ ಬರೆಯುವುದು ಪಾರ್ಟಿ ಮಾಡುವುದು ಹೀಗೆ ಹಲವಾರು ಮೋಜು ಮಸ್ತಿಗಳಲ್ಲಿ ತೊಡಗಿದ್ದರು ಕೂಡ ಅವರು ತಮ್ಮ ಸಂಗಾತಿಯ ಗುಂಗಿನಿಂದ ಹೊರ ಬರುವುದು ಸಾಧ್ಯವಿಲ್ಲ. ಇದಕ್ಕಾಗಿ ಮಧ್ಯದ ದಾಸ ಕೂಡ ಆಗುತ್ತಾರೆ ಎಂಬುದಾಗಿ ಹೇಳಬಹುದಾಗಿದೆ. ಈ ಲೇಖನದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.