ಕಾಲೇಜಿನಲ್ಲಿ ಅತ್ಯುತ್ತಮ ವಿದ್ಯಾರ್ಥಿ, ಆದರೆ ಪ್ರೀತಿ ಮಾಡು ಎಂದು ಕಾಟ ಕೊಡುತ್ತಿದ್ದ ಹುಡುಗನಿಗೆ ಹೆದರಿ ಹುಡುಗಿ ಏನು ಮಾಡಿಕೊಂಡಿದ್ದಾರೆ ಗೊತ್ತೇ?

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮುಂಚಿನ ದಿನಗಳಲ್ಲಿ ಮಕ್ಕಳು ಸಾಕಷ್ಟು ಪ್ರಬುದ್ಧ ರಾಗಿದ್ದರು ಹಾಗೂ ಚಿಕ್ಕವಯಸ್ಸಿನಿಂದಲೇ ಎಂತಹ ಸಮಸ್ಯೆಗಳಿದ್ದರೂ ಕೂಡ ಅದನ್ನು ಎದುರಿಸಿ ನಿಲ್ಲುವಂತಹ ಮನೋಬಲವನ್ನು ಹೊಂದಿದ್ದರು. ಆದರೆ ಇಂದಿನ ಯುಗದ ಮಕ್ಕಳ ಮನಸ್ಸು ಎನ್ನುವುದು ಸಾಕಷ್ಟು ಸೂಕ್ಷ್ಮವಾಗಿದ್ದು ಅವರು ಸಮಸ್ಯೆಯನ್ನು ಎದುರಿಸುವ ರೀತಿಯೇ ಬೇರೆಯಾಗಿದೆ. ಹೌದು ಗೆಳೆಯರೇ ತನ್ನ ಹಿಂದೆ ಬಿದ್ದ ಎನ್ನುವ ಕಾರಣಕ್ಕಾಗಿ ಶಿವಮೊಗ್ಗದ ಈ ಹುಡುಗಿ ಈಗ ಮಾಡಿರುವ ಕಾರ್ಯ ಈಗ ಎಲ್ಲರ ಮನಕಲಕುವಂತಿದೆ. ಅಷ್ಟಕ್ಕೂ ನಿಜವಾಗಿ ನಡೆದಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆಯ ಪ್ರಮುಖ ಕೇಂದ್ರಬಿಂದು ಎಂದರೆ 21 ವರ್ಷ ವಯಸ್ಸಿನ ವಿದ್ಯಾಶ್ರೀಯನ್ನುವ ಹುಡುಗಿ. ಈಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನವಳಾಗಿದ್ದಾಳೆ. ಅಲ್ಲಿಯೇ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಓದುತ್ತಿದ್ದಳು. ಈಕೆಯ ಹೆತ್ತವರು ತಮ್ಮ ಮಗಳು ಚೆನ್ನಾಗಿ ಓದಿ ಉತ್ತಮ ಜೀವನವನ್ನು ಸಾಗಿಸುವ ಕನಸನ್ನು ಕಂಡಿದ್ದರು ಹಾಗೂ ಮಗಳು ಕೂಡ ಚೆನ್ನಾಗಿ ಓದಿ ಉತ್ತಮ ಕೆಲಸವನ್ನು ಸಂಪಾದಿಸಿ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ಕನಸಲು ಕಂಡಿದ್ದಳು. ಆದರೆ ಎರಡು ಕನಸುಗಳು ಕೂಡ ಅರ್ಧದಲ್ಲಿಯೇ ಕೊನೆಗೊಂಡಿದ್ದು ನಿಜಕ್ಕೂ ಕೂಡ ವಿಷಾದನೀಯ.

ವಿದ್ಯಾಶ್ರೀ ತಾನಾಯ್ತು ತನ್ನ ವಿದ್ಯಾಭ್ಯಾಸ ಆಯ್ತು ಎಂದಿದ್ದ ಹುಡುಗಿ. ಆದರೆ ಈಕೆ ಕಾಲೇಜಿಗೆ ಹೋಗುತ್ತಿದ್ದಾಗ ಪಕ್ಕದ ಮನೆಯ ಶಶಾಂಕ್ ಎನ್ನುವ ಹುಡುಗ ತನ್ನನ್ನು ಪ್ರೀತಿಸು ಎನ್ನುವುದಾಗಿ ಪ್ರತಿದಿನ ಆಕೆಯ ಹಿಂದೆ ಬಿದ್ದು ದುಂಬಾಲು ಬೀಳುತ್ತಿದ್ದ. ಆಕೆ ತನ್ನ ಹಿಂದೆ ಬರಬೇಡ ಎನ್ನುವುದಾಗಿ ಶಶಾಂಕ್ ಗೆ ಎಷ್ಟೇ ಬುದ್ಧಿ ಹೇಳಿದರೂ ಕೂಡ ಆತ ಅದನ್ನೇ ಮುಂದುವರಿಸಿದ್ದ. ಆಗಾಕೆ ಏಪ್ರಿಲ್ 19ರಂದು ಕ್ರಿಮಿನಾಶಕವನ್ನು ಸೇವಿಸಿ ತನ್ನ ಜೀವನವನ್ನೇ ಮುಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಳು. ಆದರೆ ಆಕೆಯನ್ನು ಅದೇ ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಷ್ಟು ದಿನಗಳ ಜೀವನ್ಮರಣ ಹೋರಾಟ ನಂತರ ವಿದ್ಯಾಶ್ರೀ ಮೊನ್ನೆಯಷ್ಟೇ ಮರಣವನ್ನು ಹೊಂದಿದ್ದಾಳೆ.

ಒಬ್ಬ ಹುಡುಗ ಹಿಂದೆ ಬಿದ್ದಿದ್ದಾನೆ ಎಂದು ಅದನ್ನು ಎದುರಿಸದೆ ಮನೆಯವರನ್ನು ಕೂಡ ಯೋಚಿಸದೆ ವಿದ್ಯಾಶ್ರೀ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಕೂಡ ಎಲ್ಲರಿಗೂ ದುಃಖವನ್ನು ತರಿಸಿದೆ. ಇನ್ನು ಮಗಳನ್ನು ಕಳೆದುಕೊಂಡಿರುವ ದುಃಖದಲ್ಲಿ ತಂದೆ-ತಾಯಿ ಹಾಗೂ ಸಹೋದರಿಯನ್ನು ಕಳೆದುಕೊಂಡಿರುವ ದುಃಖದಲ್ಲಿ ಸಹೋದರ ಕೂಡ ದುಃಖದ ಸಾಗರದಲ್ಲಿ ಮುಳುಗಿದ್ದಾರೆ. ಇದಕ್ಕೆಲ್ಲ ಕಾರಣನಾದಂತಹ ಶಶಾಂಕ್ ನನ್ನು ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಆದರೆ ಇಲ್ಲಿ ವಿಚಾರ ಮಾಡುವಂತಹ ವಿಚಾರ ಇನ್ನೊಂದು ಇದೆ.

ವಿದ್ಯಾಶ್ರೀಯನ್ನು ಕಳೆದುಕೊಂಡಿರುವ ದುಃಖವನ್ನು ಬರಿಸಲು ಖಂಡಿತವಾಗಿ ಭಗವಂತನಿಂದಲೇ ಕೂಡ ಸಾಧ್ಯವಿಲ್ಲ ಆದರೆ ಜೀವನಪರ್ಯಂತ ಖಂಡಿತವಾಗಿ ವಿದ್ಯಾಶ್ರೀಯನ್ನು ಆ ಪೋಷಕರ ಆಗಲಿ ಅಥವಾ ಆಕೆಯ ಅಣ್ಣನಾಗಲಿ ಪಡೆಯಲು ಸಾಧ್ಯವಿಲ್ಲ. ಆದರೆ ಈ ಘಟನೆಯಿಂದ ಒಂದು ವಿಚಾರವನ್ನು ಎಲ್ಲರೂ ಕೂಡ ಕಳೆದುಕೊಳ್ಳಬೇಕಾಗಿದೆ ಅದೇನೆಂದರೆ ಇಂತಹ ಸಮಾಜದಲ್ಲಿ ಬರುವಂತಹ ಚಿಕ್ಕಪುಟ್ಟ ಸಮಸ್ಯೆಗಳಿಗೆ ಹಿಮ್ಮೆಟ್ಟದೆ ಇವುಗಳನ್ನು ಎದುರಿಸುವ ಧೈರ್ಯವನ್ನು ಮನೆಯವರು ಇವರಿಗೆ ಮೊದಲಿನಿಂದಲೇ ಕಲಿಸಿಕೊಡಬೇಕು ಎನ್ನುವುದು ಇಲ್ಲಿ ಕಂಡುಬರುತ್ತದೆ.

ಇನ್ನು ಇತ್ತೀಚಿನ ಶಿಕ್ಷಣ ವ್ಯವಸ್ಥೆ ಕೂಡ ಬದಲಾಗಬೇಕಾಗಿದೆ. ಮೊದಲು ನಮಗೆ ನಾವು ಮಾಡಿದಂತಹ ತಪ್ಪಿಗಾಗಿ ಶಿಕ್ಷಕರು ಬೈದರು ಹೊಡೆದರು ಏನೇ ಮಾಡಿದರೂ ಕೂಡ ನಾವು ದೃಢವಾಗಿ ಇರುತ್ತಿದ್ದೆವು ಹಾಗೂ ಆ ತಪ್ಪಿನಿಂದ ಪಾಠವನ್ನು ಕರೆಯುತ್ತಿದ್ದೆವು. ಆದರೆ ಇಂದಿನ ಮಕ್ಕಳು ಶಿಕ್ಷಕರು ಬೈದರೂ ಕೂಡ ಜೀವನವನ್ನು ಮುಗಿಸಿ ಕೊಳ್ಳುವಂತಹ ಸೂಕ್ಷ್ಮ ನಿರ್ಧಾರವನ್ನು ಮಾಡಿಬಿಡುತ್ತಾರೆ. ಹೀಗಾಗಿ ಇಂದಿನ ಶಿಕ್ಷಣ ವ್ಯವಸ್ಥೆ ಜೊತೆಗೆ ಸಮಾಜದ ಜೊತೆಗೆ ಇಂದಿನ ಮಕ್ಕಳು ನಡೆದುಕೊಳ್ಳುವ ಅಂತಹ ನೀತಿ ಕೂಡ ಬದಲಾಗಬೇಕಾಗಿದೆ. ಇನ್ನು ನಮ್ಮ ಮನೆಯ ಗಂಡು ಮಕ್ಕಳಿಗೆ ಮೊದಲು ನೆಟ್ಟಗೆ ಬುದ್ಧಿ ಕಲಿಸಬೇಕು. ವಿದ್ಯಾಶ್ರೀ ಗೆ ನಡೆದಂತಹ ಘಟನೆ ಬೇರೆ ಯಾವ ಹೆಣ್ಣು ಮಕ್ಕಳ ಜೀವನದಲ್ಲಿ ಕೂಡ ನಡೆಯದಂತೆ ನೋಡಿಕೊಳ್ಳಬೇಕು. ಈ ಮೂಲಕವೇ ಈ ಸಮಾಜದಲ್ಲಿ ಒಂದು ಆರೋಗ್ಯವಂತ ವಾತಾವರಣವನ್ನು ನಿರ್ಮಿಸಲು ಸಾಧ್ಯ.

Get real time updates directly on you device, subscribe now.