ಧೋನಿ ರವರ ಬಲಗೈ ಬಂಟನಂತೆ ಇದ್ದ ಜಡೇಜಾರವನ್ನೇ ತಂಡದಿಂದ ಧೋನಿ ಹೊರಹಾಕಿದ್ದು ಯಾಕೆ ಗೊತ್ತೇ?? ಕಾರಣ ಕೇಳಿದ್ದಕ್ಕೆ ಧೋನಿ ಹೇಳಿದ್ದೇನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿನ್ನೆ ನಡೆದಂತಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದ್ದೂರಿಯಾಗಿ ಗೆಲುವು ಸಾಧಿಸುವ ಮೂಲಕ ಎಂಟನೇ ಸ್ಥಾನಕ್ಕೆ ಪಾಯಿಂಟ್ಸ್ ಟೇಬಲ್ ನಲ್ಲಿ ಏರಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿದೆ. ಆದರೂ ಕೂಡ ಪ್ಲೇಆಫ್ ಗೆ ತೇರ್ಗಡೆ ಆಗುವ ಸಾಧ್ಯತೆ ತುಂಬಾನೆ ಕ್ಷೀಣಿಸಿದೆ ಎಂದು ಹೇಳಬಹುದಾಗಿದೆ. ಅದೇನೇ ಇರಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ದೊಡ್ಡ ಅಂತರದ ವಿಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದಾಗಿದೆ.

ಇನ್ನು ನಿಮಗೆ ಗೊತ್ತಿರಬಹುದು ನಿನ್ನೆಯ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ತಂಡದ ಪ್ರಮುಖ ಆಟಗಾರ ಆಗಿರುವ ರವೀಂದ್ರ ಸಿಂಗ್ ಜಡೇಜಾ ರವರನ್ನು ತಂಡದಿಂದ ಹೊರಗಿಟ್ಟಿದ್ದರು. ಹೌದು ಗೆಳೆಯರೇ ಅವರ ಬದಲಿಗೆ ಶಿವಂ ದುಬೆ ರವರನ್ನು ತಂಡದಲ್ಲಿ ಆಡಿಸಿದರು. ಮೊದಲಿನಿಂದಲೂ ಕೂಡ ಮಹೇಂದ್ರ ಸಿಂಗ್ ಧೋನಿ ರವರ ವಿಶೇಷ ಆಟಗಾರರ ಲಿಸ್ಟಿನಲ್ಲಿ ರವೀಂದ್ರ ಸಿಂಗ್ ಜಡೇಜಾ ರವರು ಮುಂಚೂಣಿಯಲ್ಲಿದ್ದರು. ಆದರೆ ಈ ಬಾರಿ ಅವರನ್ನೇ ಹೊರಗಿಟ್ಟಿರುವುದು ನಿಜಕ್ಕೂ ಕೂಡ ಆಶ್ಚರ್ಯಕರ ವಿಷಯವಾಗಿದೆ ಎಂದರೆ ತಪ್ಪಾಗಲಾರದು.

ಮಹೇಂದ್ರ ಸಿಂಗ್ ಧೋನಿ ರವರು ಇಂತಹ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದರೆ ನಿಜಕ್ಕೂ ಕೂಡ ಅದರ ಹಿಂದೆ ಒಂದು ಪ್ರಮುಖವಾದ ಕಾರಣ ಕೂಡ ಅಡಗಿರುತ್ತದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಹೌದು ಗಳೇ ಈ ಬಾರಿಯ ಐಪಿಎಲ್ ನಲ್ಲಿ ರವೀಂದ್ರ ಸಿಂಗ್ ಜಡೇಜಾ ರವರು ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ. ಕಳಪೆ ಆಟದಿಂದಾಗಿ ತಂಡಕ್ಕೆ ಹೊರೆ ಆಗುತ್ತಿದ್ದರು. ಇದು ಕಹಿ ಆದರೂ ಕೂಡ ನಿಜವಾದ ವಿಚಾರ ಎಂದರೆ ತಪ್ಪಾಗಲಾರದು. ಕೇವಲ 116 ರನ್ನುಗಳನ್ನು ಮತ್ತು 5 ವಿಕೆಟ್ ಗಳನ್ನು ಮಾತ್ರ ಈ ಬಾರಿ ಐಪಿಎಲ್ ನಲ್ಲಿ ರವೀಂದ್ರ ಸಿಂಗ್ ಜಡೇಜಾ ಅವರು ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಕಸರತ್ತು ನಡೆಸುತ್ತಿದೆ ಇದೇ ಹಿನ್ನೆಲೆಯಲ್ಲಿ ಕಳಪೆ ಫಾರ್ಮ್ ನಲ್ಲಿರುವ ರವೀಂದ್ರ ಸಿಂಗ್ ಜಡೇಜಾ ರವರನ್ನು ಧ್ವನಿ ರವರು ತಂಡದಿಂದ ಹೊರಕ್ಕೆ ಇಟ್ಟಿದ್ದಾರೆ ಎಂಬುದಾಗಿ ಕೇಳಿಬಂದಿದೆ.

Get real time updates directly on you device, subscribe now.