ಅಸಲಿಗೆ ನಿಜವಾಗಲೂ ಪ್ರತಿಭೆ ಇದ್ದರೂ ವಿನೋದ್ ರಾಜ್ ರವರನ್ನು ಯಾವುದೇ ಕಾರ್ಯಕ್ರಮಕ್ಕೆ ಜಡ್ಜ್ ಮಾಡಲು ಯಾರು ತಯಾರಿಲ್ಲ. ಇದರ ಹಿಂದಿರುವ ಅಸಲಿ ಕಾರಣವೇನು ಗೊತ್ತೇ?

36

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಲೀಲಾವತಿಯವರು ಹಾಗೂ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಕಲಾವಿದರಾಗಿ ಕಾಣಿಸಿಕೊಂಡಿದ್ದರು ಆ ಸಂದರ್ಭದಲ್ಲಿ ಕೂಡ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರು. ಇನ್ನು ಇಂದು ಚಿತ್ರರಂಗದಿಂದ ದೂರ ಆಗಿ ನೆಲಮಂಗಲದಲ್ಲಿ ಕೃಷಿ ಗಾರಿಕೆಯನ್ನು ಮಾಡಿಕೊಂಡಿದ್ದರು ಕೂಡ ಹಲವಾರು ಕಷ್ಟಗಳನ್ನು ಪ್ರತಿದಿನ ಅನುಭವಿಸುತ್ತಿದ್ದಾರೆ.

ಇನ್ನು ನಿಮಗೆಲ್ಲ ಗೊತ್ತಿರಬಹುದು ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್ ನಲ್ಲಿ ಮಾಸ್ಟರ್ ಆಗಿರುವ ವಿನೋದ್ ರಾಜ್ ರವರನ್ನು ಕಿರುತೆರೆಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತೀರ್ಪುಗಾರರನ್ನಾಗಿ ನೇಮಿಸಿ ಎನ್ನುವುದಾಗಿ ಹಲವಾರು ಅಭಿಯಾನಗಳು ನಡೆದಿದ್ದವು. ಆದರೆ ಇಂದಿಗೂ ಕೂಡ ಕಿರುತೆರೆಯ ವಾಹಿನಿಗಳು ಈ ಕಾರ್ಯಕ್ರಮಕ್ಕಾಗಿ ವಿನೋದ್ ರಾಜ್ ರವರನ್ನು ಸಂಪರ್ಕಿಸಿಲ್ಲ.

ನಟ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಾಯಕ ನಟಿ ಹಾಗೂ ಪೋಷಕ ನಟಿಯರಲ್ಲಿ ಒಬ್ಬರಾಗಿರುವ ಲೀಲಾವತಿ ಅಮ್ಮನವರ ಮಗನಾಗಿ ಜನಿಸುತ್ತಾನೆ. ಚಿಕ್ಕಂದಿನಿಂದಲೇ ಸಾಕಷ್ಟು ಕಷ್ಟ ಪಟ್ಟು ಲೀಲಾವತಿಯವರು ತಮ್ಮ ಮಗನನ್ನು ಸಾಕುತ್ತಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಾಯಕನಿಗೆ ಇರಬೇಕಾದಂತಹ ಎಲ್ಲ ಅರ್ಹತೆಗಳು ಹಾಗೂ ಅಭ್ಯಾಸಗಳನ್ನು ಡ್ಯಾನ್ಸಿಂಗ್ ಹಾಗೂ ಇನ್ನಿತರ ಸ್ಕಿಲ್ಸ್ ಗಳನ್ನು ವಿನೋದ್ ರಾಜ್ ಕಲಿತು ಸಿದ್ಧವಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಮಗನನ್ನು ತಯಾರುಮಾಡಲು ಲೀಲಾವತಿ ಅಮ್ಮನವರು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

1987 ರಲ್ಲಿ ವಿನೋದ್ ರಾಜ್ ರವರಿಗೆ ನಾಯಕನಾಗಿ ನಟಿಸುವಂತಹ ಅವಕಾಶವನ್ನು ದ್ವಾರಕೀಶರವರು ನೀಡುತ್ತಾರೆ. ಹೌದು ಗೆಳೆಯರೆ ವಿನೋದ್ ರಾಜ್ ರವರು ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿವಾಸ್ ಸಿನಿಮಾದ ಮೂಲಕ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಇದು ಅಂದಿನ ಕಾಲದಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಗಳಿಸುತ್ತದೆ ಆದರೆ ಇದರಿಂದಾಗಿ ಹೇಳಿಕೊಳ್ಳುವ ಅವಕಾಶವೇನೋ ವಿನೋದ್ ರಾಜ್ ರವರಿಗೆ ಹುಡುಕಿಕೊಂಡು ಬರುವುದಿಲ್ಲ. ವರ್ಷಕ್ಕೆ ಒಂದು ಸಿನಿಮಾ ವಿನೋದ್ ರಾಜ್ ರವರಿಗೆ ಬಂದರೆ ಹೆಚ್ಚಾಗಿತ್ತು.

ಇದಾದನಂತರ 90 ರಲ್ಲಿ ಕಾಲೇಜ್ ಹೀರೋ ಎನ್ನುವ ಸಿನಿಮಾದಲ್ಲಿ ಮತ್ತೊಮ್ಮೆ ನಾಯಕನಾಗಿ ಕಂಬ್ಯಾಕ್ ಮಾಡುತ್ತಾರೆ. ಹೀಗೆ ಹತ್ತು ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೂ ಕೂಡ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗುವುದಿಲ್ಲ. 2009 ರವರೆಗೆ ಕೂಡ ನಾಯಕನಟನಾಗಿ ಏನಾದರೂ ಮಾಡಬೇಕು ಎನ್ನುವ ನಿಟ್ಟಿನಲ್ಲಿ ವಿನೋದ್ ರಾಜ್ ರವರು ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಗನನ್ನು ಸಿನಿಮಾರಂಗದಲ್ಲಿ ಉಳಿಸಿಕೊಳ್ಳಬೇಕು ಎನ್ನುವ ಪ್ರಯತ್ನದಲ್ಲಿ ಲೀಲಾವತಿ ಅಮ್ಮನವರೇ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುತ್ತಾರೆ.

ಇಂತಹ ಅದ್ಭುತ ನಟನಾ ಶೈಲಿ ಹಾಗೂ ನೃತ್ಯ ಶೈಲಿ ಇದ್ದರೂ ಕೂಡ ವಿನೋದ್ ರಾಜ್ ರವರಿಗೆ ಕನ್ನಡ ಚಿತ್ರರಂಗದಿಂದ ನಿರೀಕ್ಷಿತ ಪ್ರತಿಕ್ರಿಯೆ ಹಾಗೂ ಮೆಚ್ಚುಗೆ ಸಿಗಲಿಲ್ಲ. ಈ ಕಾರಣದಿಂದಾಗಿಯೇ ನೆಲಮಂಗಲದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿ ಮಾಡಲು ಪ್ರಾರಂಭಿಸುತ್ತಾರೆ. 2009 ರಿಂದ ಇಲ್ಲಿಯವರೆಗೆ ಕೂಡ ಹಲವಾರು ಬಾರಿ ಅವರನ್ನು ಕಾರ್ ಮೇಲೆ ಅ’ಟ್ಯಾಕ್ ಹಾಗೂ ತೋಟಕ್ಕೆ ಬೆಂ’ಕಿ ಹಚ್ಚುವ ಕೆಲಸವನ್ನು ಕೂಡ ಕಿಡಿಗೇಡಿಗಳು ಮಾಡಿದ್ದಾರೆ. ಒಮ್ಮೆ ವಿನೋದ್ ರಾಜ್ ರವರಿಗೆ ಈ ಕಾರಣದಿಂದಾಗಿಯೇ ಹೃದಯಾ’ಘಾತ ಕೂಡ ಆಗಿತ್ತು.

ಇನ್ನು ಇತ್ತೀಚಿನ ಹಲವಾರು ವರ್ಷಗಳಿಂದ ವಿನೋದ್ ರಾಜ್ ರವರನ್ನು ಕನ್ನಡಿಗರು ನೆನಪಿಸಿಕೊಳ್ಳುತ್ತಿದ್ದು ಅವರು ಕನ್ನಡದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಬೇಕು ಎನ್ನುವುದಾಗಿ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವನ್ನು ಕೈಗೊಂಡಿದ್ದಾರೆ. ಆದರೆ ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ವಿನೋದ್ ರಾಜ್ ಬೇಕಾದ ಸಂದರ್ಭದಲ್ಲಿ ಯಾರೂ ಕೂಡ ನನ್ನ ಬಳಿ ಬರಲಿಲ್ಲ ಈಗ ಅದರ ಅಗತ್ಯ ನನಗಿಲ್ಲ ಎಂಬುದಾಗಿ ಹೇಳಿದ್ದರು. ಇನ್ನು ವಾಹಿನಿಗಳು ಕೂಡ ವಿನೋದ್ ರಾಜ್ ರವರ ಜೀವನದಲ್ಲಿ ನಡೆಯುತ್ತಿರುವಂತಹ ಹಲವಾರು ಸಮಸ್ಯೆಗಳು ಮತ್ತು ಅವರ ಮೇಲೆ ನಡೆದಿರುವಂತಹ ಅ’ಟ್ಯಾಕ್ ಕಾರಣದಿಂದಾಗಿ ಕಾರ್ಯಕ್ರಮದ ಮೇಲೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಅವರನ್ನು ಅಪ್ರೋಚ್ ಮಾಡಿಲ್ಲ ಎಂಬುದಾಗಿ ಕೇಳಿಬರುತ್ತಿದೆ.

Get real time updates directly on you device, subscribe now.