ಇದ್ದಕ್ಕಿದ್ದ ಹಾಗೆ ಭಾರತಕ್ಕೆ ಭೇಟಿ ನೀಡಿ ಸದ್ಗುರು ರವರನ್ನು ಭೇಟಿ ಮಾಡಿದ ಹಾಲಿವುಡ್ ನಟ ವಿಲ್ ಸ್ಮಿತ್. ಯಾಕೆ ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ವಿಲ್ ಸ್ಮಿತ್ ರವರ ಕುರಿತಂತೆ ನಿಮಗೆಲ್ಲರಿಗೂ ತಿಳಿದಿರುವುದೇ. ಇತ್ತೀಚೆಗಷ್ಟೇ ಅವರು ತಮ್ಮ ಕಿಂಗ್ ರಿಚರ್ಡ್ ಸಿನಿಮಾಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದರು. ಈ ಸಂದರ್ಭದಲ್ಲಿ ವಿಲ್ ಸ್ಮಿತ್ ರವರು ಕ್ರಿಸ್ ರಾಕ್ ರವರಿಗೆ ಕಪಾಳಮೋಕ್ಷ ಮಾಡಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದ ಹಿನ್ನೆಲೆಯಲ್ಲಿ ವಿಲ್ ಸ್ಮಿತ್ ರವರಿಗೆ ಹತ್ತು ವರ್ಷಗಳ ಕಾಲ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಬರುವುದನ್ನು ನಿಷೇಧ ಹೇರಲಾಗಿದೆ ಎಂಬುದಾಗಿ ಇತ್ತೀಚಿಗೆ ಸುದ್ದಿಯಾಗಿತ್ತು.

ಇನ್ನು ನಿಮಗೆ ತಿಳಿದಿರಬಹುದು ವಿಲ್ ಸ್ಮಿತರವರು ಸಾಕಷ್ಟು ಅಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಾರತಕ್ಕೆ ಕೂಡ ಈಗಾಗಲೇ ಹಲವಾರು ಬಾರಿ ಬಂದು ಹೋಗಿದ್ದಾರೆ. ಇನ್ನು ಈ ಬಾರಿ ಕೂಡ ಮೊನ್ನೆಯಷ್ಟೇ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಲ್ ಸ್ಮಿತ್ ರವರು ಭಾರತಕ್ಕೆ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ವಿಲ್ ಸ್ಮಿತ್ ರವರು ಈ ಹಿಂದೆ ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಹಾಗೂ ಸ್ಟೂಡೆಂಟ್ ಆಫ್ ದ ಇಯರ್ 2 ಚಿತ್ರೀಕರಣ ಕೂಡ ಆಗಮಿಸಿದ್ದರು ಎಂಬುದು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ಆದರೆ ಈ ಬಾರಿ ವಿಲ್ ಸ್ಮಿತ್ ಯಾಕೆ ಬಂದಿದ್ದಾರೆ ಎಂಬುದಾಗಿ ಹಲವಾರು ಜನರಿಗೆ ಗೊಂದಲವಿದೆ. ಇದಕ್ಕೂ ಕೂಡ ಈಗಾಗಲೇ ಹಲವಾರು ಮೂಲಗಳಿಂದ ಉತ್ತರ ಕಂಡು ಬಂದಿದೆ.

ಹೌದು ಗೆಳೆಯರೇ ವಿಲ್ ಸ್ಮಿತ್ ರವರು ಅವರು ಭಾರತಕ್ಕೆ ಬಂದಿರುವುದು ಸದ್ಗುರು ರವರನ್ನು ನೋಡಲು ಎಂಬುದಾಗಿ ತಿಳಿದುಬಂದಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದಂತಹ ಅನುಚಿತ ಘಟನೆಯಿಂದಾಗಿ ವಿಲ್ ಸ್ಮಿತ್ ಬಡವರ ಮನಸ್ಸು ಸಾಕಷ್ಟು ಬೇಸರದಿಂದ ತುಂಬಿದೆ ಎಂಬುದಾಗಿ ತಿಳಿದುಬಂದಿದ್ದು ಇವೆಲ್ಲ ದುಃಖವನ್ನು ಕಳೆಯಲು ಈಗಾಗಲೇ ಭಾರತದಲ್ಲಿ ಆಧ್ಯಾತ್ಮಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯಕ್ಕೆ ವಿಲ್ ಸ್ಮಿತ್ ರವರು ಎಲ್ಲಿದ್ದಾರೆ ಎಲ್ಲಿ ತಂಗಿದ್ದಾರೆ ಯಾವಾಗ ಸದ್ಗುರು ರವರನ್ನು ಭೇಟಿ ಮಾಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.