ಈ ಬಾರಿ ಬರೋಬ್ಬರಿ 30 ವರ್ಷಗಳ ನಂತರ ಕುಂಭ ಪ್ರವೇಶಿಸಿರುವ ಶನಿದೇವ ಯಾರ್ಯಾರಿಗೆ ಹಣದ ಸುರಿಮಳೆಯನ್ನು ಸುರಿಸಲಿದ್ದಾನೆ ಗೊತ್ತೇ??

20

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರ ಎನ್ನುವುದು ಅದರಲ್ಲೂ ಪ್ರಮುಖವಾಗಿ ಭಾರತೀಯ ಸಂಸ್ಕೃತಿಯಲ್ಲಿ ಅಂದರೆ ಸನಾತನ ಹಿಂದೂ ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದಿರುವವರಿಗೆ ನಿಜವಾದ ಪ್ರಾಮುಖ್ಯತೆಯ ವಿಷಯವಾಗಿದೆ. ಇಷ್ಟು ಮಾತ್ರವಲ್ಲದೆ ಜ್ಯೋತಿಷ್ಯದಲ್ಲಿ ನಡೆಯುವಂತಹ ಬದಲಾವಣೆಗಳು ಆಯಾಯ ರಾಶಿಚಕ್ರದಲ್ಲಿ ಇರುವಂತಹ ಮಾನವನ ಜೀವನದಲ್ಲಿ ಕೂಡ ಅದು ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ಸಾಬೀತಾಗಿರುವಂತಹ ಅಂಶ.

ಇನ್ನು ಕೆಲವೇ ದಿನಗಳ ಹಿಂದಷ್ಟೇ ಶನಿದೇವ ತನ್ನ ರಾಶಿಯಾಗಿರುವ ಮಕರರಾಶಿಯನ್ನು ತೊರೆದು 30 ವರ್ಷಗಳ ನಂತರ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಇದು ರಾಶಿ ಚಕ್ರದಲ್ಲಿರುವ ಪ್ರತಿಯೊಂದು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಆದರೆ ಮೂರು ರಾಶಿಚಕ್ರದವರಿಗೆ ಮಾತ್ರ ಅದೃಷ್ಟದ ಲಾಭವನ್ನು ಹೊತ್ತು ತರಲಿದೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹಾಗಿದ್ದರೆ ಆ ಅದೃಷ್ಟವನ್ನು ಹೊಂದಿರುವ 3 ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಈ ಸಂದರ್ಭದಲ್ಲಿ ಮೇಷ ರಾಶಿಯವರು ಹಣ ಹಾಗೂ ಗೌರವ ಸಂಪಾದನೆಯಲ್ಲಿ ಸಾಕಷ್ಟು ಯಶಸ್ಸು ಸಾಧಿಸುತ್ತಾರೆ. ಹೊಸ ಕೆಲಸ ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಇದೊಂದು ಪ್ರಶಸ್ತವಾದ ಸಮಯ ಎಂದರೆ ತಪ್ಪಾಗಲಾರದು. ಸಂತಾನಕ್ಕಾಗಿ ಎದುರು ನೋಡುತ್ತಿರುವವರಿಗೆ ಸಂತಾನ ಪ್ರಾಪ್ತಿಯಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವ ಅವರಿಗೆ ಉತ್ತಮ ಲಾಭದ ನಿರೀಕ್ಷೆ ಇದೆ. ಆದರೆ ಮೇಷ ರಾಶಿಯವರು ಈ ಸಂದರ್ಭದಲ್ಲಿ ಆರೋಗ್ಯದ ಕುರಿತಂತೆ ವಿಶೇಷವಾದ ಕಾಳಜಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ವೃಷಭ ರಾಶಿ; ಶನಿಯ ರಾಶಿ ಸಂಕ್ರಮಣದಿಂದ ವೃಷಭ ರಾಶಿಯವರಿಗೆ ರಾಜಯೋಗ ಒಲಿದು ಬರಲಿದೆ. ಉದ್ಯೋಗದಲ್ಲಿರುವವರಿಗೆ ದೊಡ್ಡ ಮಟ್ಟದ ಯಶಸ್ಸು ಒಲಿದು ಬರಲಿದೆ ಹಾಗೂ ನಿಮ್ಮ ದೈನಂದಿನ ಆದಾಯದಲ್ಲಿ ಕೂಡ ದ್ವಿಗುಣ ಪ್ರಗತಿ ಒದಗಿಬರಲಿದೆ. ಈ ಕಾರಣದಿಂದಾಗಿ ಸಮಾಜದಲ್ಲಿ ನಿಮಗಿರುವಂತಹ ಗೌರವ ಹಾಗೂ ಸ್ಥಾನಮಾನಗಳು ಕೂಡ ಹೆಚ್ಚಾಗುತ್ತವೆ. ಹೀಗೆಂದ ಮಾತ್ರಕ್ಕೆ ಹೆಚ್ಚಾಗುತ್ತಿರುವ ಖರ್ಚನ್ನು ನಿಯಂತ್ರಿಸಲು ಪ್ರಯತ್ನಿಸುವುದು ಪ್ರಮುಖ ಆದ್ಯತೆಯನ್ನಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಹೆಚ್ಚಿನ ಖರ್ಚು ಖಂಡಿತವಾಗಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಮತ್ತೊಮ್ಮೆ ಕೆಳಗೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಉಳಿತಾಯದ ಕಡೆಗೆ ಪ್ರಮುಖ ಗಮನವಿರಲಿ.

ಮಿಥುನ ರಾಶಿ; ಹಲವಾರು ಸಮಯಗಳಿಂದ ಮಿಥುನ ರಾಶಿಯವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಶನಿದೇವನ ಸಂಕ್ರಮಣದಿಂದ ಖಂಡಿತವಾಗಿ ಅವರು ಗುಣಮುಖರಾಗಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಮಿಥುನ ರಾಶಿಯವರಿಗೆ ಬದಲಾವಣೆಗಳು ಕಂಡುಬಂದರೂ ಕೂಡ ನಿಮಗೆ ಇಷ್ಟವಾದ ಅಂತಹ ಕೆಲಸ ಸಿಗುತ್ತದೆ ಹಾಗೂ ಅದು ಖಂಡಿತವಾಗಿ ನಿಮ್ಮ ಜೀವನಕ್ಕೆ ಉತ್ತಮ ದಾರಿಯನ್ನು ತಂದುಕೊಡುತ್ತದೆ. ಆದರೆ ಈ ಸಂದರ್ಭದಲ್ಲಿ ತಂದೆಯೊಂದಿಗೆ ಯಾವುದೇ ವಾದ-ವಿ’ವಾದಗಳಲ್ಲಿ ಸಿಲುಕಬೇಡಿ.

ಇವಿಷ್ಟು ರಾಶಿಯವರಿಗೆ ಈ ಸಂದರ್ಭದಲ್ಲಿ ರಾಜಯೋಗ ಒದಗಿಬರಲಿದೆ. ಇನ್ನು ಕೇವಲ ರಾಶಿಯವರಿಗೆ ಮಾತ್ರವಲ್ಲದೆ ಸಾಮಾನ್ಯವಾಗಿ ಜನರಿಗೂ ಕೂಡ ಶನಿದೇವ ಕುಂಭ ರಾಶಿ ಯನ್ನು ಪ್ರವೇಶಿಸಿರುವ ಈ ಸಂದರ್ಭದಲ್ಲಿ ಪರಿಣಾಮ ಬೀರಲಿದೆ. ಅದೇನೆಂದರೆ ಇಲ್ಲಿಯವರೆಗೂ ಮೋಸ ವಂಚನೆ ಮಾಡಿಕೊಂಡು ಬಂದಿರುವಂತಹ ಜನರಿಗೆ ಕೋರ್ಟು-ಕಚೇರಿ ಎಂದು ತಿರುಗುವ ಶಿಕ್ಷೆ ಒದಗಿಬರಲಿದೆ. ಈ ಸಂದರ್ಭದಲ್ಲಿ ಅವರ ಬಳಿ ಇರುವಂತಹ ಬಹುತೇಕ ಎಲ್ಲಾ ಹಣ ಖರ್ಚಾಗಲಿದೆ. ಅತಿಶೀಘ್ರದಲ್ಲೇ ಹಣದ ಸಮಸ್ಯೆ ಉಂಟಾಗುವಂತಹ ನಿರೀಕ್ಷೆ ಇದೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ಪರಿಣಾಮಗಳು ಎದ್ದು ಕಂಡುಬರಲಿದೆ. ಈ ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ

Get real time updates directly on you device, subscribe now.