ಕೊರೊನ ಇಂದ ಈ ಬಾರಿ ಐಪಿಎಲ್ ನಿಲ್ಲದೆ ಇರುವುದಕ್ಕೆ ಬಿಸಿಸಿಐ ರೂಪಿಸಿರುವ ನಿಯಮ ಯಾವುದು ಗೊತ್ತೇ?? ನಿಯಮ ಏನು ಹೇಳುತ್ತದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸಾಂಗವಾಗಿ ನಡೆದುಕೊಂಡು ಬರುತ್ತಿದ್ದ ಈ ಬಾರಿಯ ಐಪಿಎಲ್ 2022 ಹಲವಾರು ಕಾರಣಗಳಿಗಾಗಿ ಈಗ ನಿಂತು ಹೋಗುವಂತಹ ಪರಿಸ್ಥಿತಿ ಎದುರಾಗಿದೆ ಎಂದರು ತಪ್ಪಾಗಲಾರದು. ಇಷ್ಟೆಲ್ಲ ಮುನ್ನೆಚ್ಚೆರಿಕಾ ಕ್ರಮಗಳ ನಡುವೆಯೂ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಪಾಸಿಟಿವ್ ಬಂದಿರುವುದು ಈಗಾಗಲೇ ಆ’ತಂಕಕ್ಕೆ ಎಡೆಮಾಡಿಕೊಟ್ಟಿದೆ. ಹೌದು ಗೆಳೆಯರೇ ಎಲ್ಲ ಅಂದುಕೊಂಡಂತೆ ಆಗಿದ್ದರೆ ನಾಳೆ ರಿಷಬ್ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯವನ್ನು ಆಡಬೇಕಾಗಿತ್ತು.
ಆದರೆ ಈಗಾಗಲೇ ಡೆಲ್ಲಿ ತಂಡದ ಮೂರು ಆಟಗಾರರು ಪಾಸಿಟಿವ್ ಆಗಿರುವ ಕಾರಣದಿಂದಾಗಿ ಈ ಪಂದ್ಯ ನಡೆಯುವುದು ಅನುಮಾನ ವಾಗಿದೆ ಎಂದು ಹೇಳಲಾಗುತ್ತಿದೆ. ಇದರ ಕಾರಣದಿಂದಾಗಿ ಐಪಿಎಲ್ ರದ್ದಾಗಬಹುದು ಎನ್ನುವ ಮಾತುಗಳು ಕೂಡ ಒಳ ವಲಯದಲ್ಲಿ ಕೇಳಿ ಬರುತ್ತಿದೆ. ಬಿಸಿಸಿಐ ಈ ಬಾರಿಯ ಐಪಿಎಲ್ ಗಾಗಿ ಬಯೋ ಬಬಲ್ ಸೇರಿದಂತೆ ಹಲವಾರು ಕಟ್ಟುನಿಟ್ಟಿನ ಕ್ರಮಗಳು ಕೈಗೊಂಡಿತ್ತು. ಆದರೆ ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಕೂಡ ದಲ್ಲಿ ಕ್ಯಾಪಿಟಲ್ಸ್ ತಂಡದ ಮೂರು ಆಟಗಾರರು ಪಾಸಿಟಿವ್ ಬಂದಿರುವುದು ಹಾಗೂ ದೇಶದಾದ್ಯಂತ ಪಾಸಿಟಿವ್ ಜನರ ಸಂಖ್ಯೆ ಮತ್ತು ಮರಣದ ಸಂಖ್ಯೆ ಹೆಚ್ಚಾಗಿರುವುದು ಎಲ್ಲರ ಚಿಂತೆಗೆ ಕಾರಣವಾಗಿದೆ.
ಆದರೂ ಕೂಡ ಈ ಬಾರಿ ಬಿಸಿಸಿಐ ನಿರ್ಮಿಸಿರುವ ಹೊಸ ನಿಯಮದ ಪ್ರಕಾರ ನೋಡಿದರೆ ಯಾವುದೇ ಪಂದ್ಯಗಳು ಎಂದಾಗುವುದು ಅನುಮಾನವೇ ಸರಿ ಎಂದು ಹೇಳಲಾಗಿದೆ. ಯಾಕೆಂದರೆ ಒಂದು ತಂಡದಲ್ಲಿ ಪಾಸಿಟಿವ್ ಗೆ ಒಳಗಾದರೂ ಕೂಡ 12ಜನರು ಅಂದರೆ ಅದರಲ್ಲಿ ಏಳು ಭಾರತೀಯರು ಇರಲೇಬೇಕು. ಇಷ್ಟು ಜನ ಲಭ್ಯವಿದ್ದರೆ ಸಾಕು ಪಂದ್ಯವನ್ನು ಆಡಿಸಬಹುದಾಗಿದೆ. ಒಂದು ವೇಳೆ ಇದಕ್ಕಿಂತ ಕಡಿಮೆ ಇದ್ದರೆ ಪಂದ್ಯವನ್ನು ಮತ್ತೊಮ್ಮೆ ರೀ ಶೆಡ್ಯೂಲ್ ಮಾಡಿ ಆಡಿಸಲಾಗುತ್ತದೆ. ಹೀಗಾಗಿ ಈ ಬಾರಿಯ ಐಪಿಎಲ್ ನ ಪಂದ್ಯಾಟಗಳು ರದ್ದಾಗುವುದಂತೂ ಅನುಮಾನ ಎಂದು ಹೇಳಲಾಗುತ್ತಿದೆ. ಬಿಸಿಸಿಐ ನಿರ್ಮಿಸಿರುವ ಈ ಹೊಸ ನಿಯಮದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.