ಮದುವೆಗೂ ಮುನ್ನವೇ ತಾಯಿಯಾಗಿದ್ದ ಅಮಿ ಜಾಕ್ಸನ್ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಮಗುವಿನ ಜವಾಬ್ದಾರಿ ಯಾರಿಗೆ ಗೊತ್ತೇ?? ಹೊಸ ನಟನ ಜೊತೆ ಪ್ರೀತಿ ಆರಂಭ.

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳ ವೈವಾಹಿಕ ಜೀವನ ಎಂದರೆ ಕಂಡಿತವಾಗಿ ಸದಾಕಾಲ ಸುದ್ದಿಯಲ್ಲಿರುತ್ತದೆ. ಹೀಗಾಗಿ ಸಾಮಾನ್ಯ ಜನರು ಕೂಡ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಕುರಿತಂತೆ ವಿಶೇಷವಾದ ಆಸಕ್ತಿಯನ್ನು ಹೊಂದಿರುತ್ತಾರೆ. ಇಂದು ನಾವು ಮಾತನಾಡಲು ಹೊರಟಿರುವುದು ನಟಿ ಅಮಿ ಜಾಕ್ಸನ್ ಅವರ ಕುರಿತಂತೆ. ನಟಿ ಅಮಿ ಜಾಕ್ಸನ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತದವರಲ್ಲ. ಹೌದು ಅಮಿ ಜಾಕ್ಸನ್ ರವರು ಮೂಲತಹ ಬ್ರಿಟಿಷ್. ಭಾರತೀಯ ಚಿತ್ರರಂಗದಲ್ಲಿ ಖ್ಯಾತನಾಮ ರೊಂದಿಗೆ ನಟಿಸಿರುವ ಅನುಭವ ಕೂಡಾ ಅವರಿಗಿದೆ. ಕನ್ನಡದಲ್ಲಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಜೊತೆಗೆ.

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ತಳಪತಿ ವಿಜಯ್ ಹಾಗೂ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ರವರೊಂದಿಗೆ ಕೂಡ ನಟಿಸಿದ್ದಾರೆ. ಒಟ್ಟಾರೆಯಾಗಿ ಭಾರತ ಚಿತ್ರರಂಗದಲ್ಲಿ ಬಹುಭಾಷೆ ತಾರೆಯಾಗಿ ಮಿಂಚಿದ್ದಾರೆ. ಇನ್ನು ಕೆಲವು ವರ್ಷಗಳ ಹಿಂದೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಮಿ ಜಾಕ್ಸನ್ ಅವರು ಮದುವೆಗೂ ಮುನ್ನವೇ ಮಗುವಿಗೆ ತಾಯಿಯಾಗಿ ಸುದ್ದಿಯಾಗಿದ್ದರು. ಹೌದು ಬ್ರಿಟಿಷ್ ಮೂಲದ ಖ್ಯಾತ ಉದ್ಯಮಿಯಾಗಿರುವ ಜಾರ್ಜ್ ಪನಯೋಟು ರವರನ್ನು ತಾಯಿಯಾದ ಮೇಲೆ ಮದುವೆಯಾಗಿದ್ದರು. ಆದರೆ ಈಗ ಇವರಿಬ್ಬರು ಬೇರೆಯಾಗಿದ್ದಾರೆ.

ಹಾಗೂ ಈಗಾಗಲೇ ಅಮಿ ಜಾಕ್ಸನ್ ರವರು ಬ್ರಿಟಿಷ್ ಮೂಲದ ನಟನಾಗಿರುವ ಎಡ್ ವೆಸ್ಟ್ ವಿಕ್ ರವರನ್ನು ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹಾಗಾದರೆ ನೀವು ಗಂಡನಿಂದ ದೂರವಾಗಿರುವ ಆಮಿ ಜಾಕ್ಸನ್ ರವರ ಮಗು ಯಾರ ಬಳಿ ಇರಬಹುದು ಎನ್ನುವುದಾಗಿ ನೀವು ಯೋಚಿಸುತ್ತಿರಬಹುದು. ಹೌದು ಗೆಳೆಯರೇ ಆಮಿ ಜಾಕ್ಸನ್ ರವರ ಮಗು ಅವರ ಬಳಿಯೇ ಇದೆ. ಗಂಡನಿಂದ ದೂರವಾದ ಮೇಲೆ ಕೂಡ ಮಗುವಿನ ಲಾಲನೆ ಪಾಲನೆ ಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಬ್ರಿಟಿಷ್ ನಟನೊಂದಿಗೆ ಡೇಟಿಂಗ್ ಮಾಡುತ್ತಿರುವ ಆಮಿ ಜಾಕ್ಸನ್ ರವರು ಮುಂದಿನ ದಿನಗಳಲ್ಲಿ ಅವರನ್ನೇ ಮದುವೆ ಆದರೂ ಕೂಡ ಆಗಬಹುದು ಎನ್ನುವುದಾಗಿ ಮಾತುಗಳು ಕೇಳಿಬರುತ್ತಿವೆ. ದಿ ವಿಲನ್ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೂ ಕೂಡ ಅವರು ಪರಿಚಿತರಾಗಿದ್ದು ಮತ್ತೊಮ್ಮೆ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

Get real time updates directly on you device, subscribe now.