ತನ್ನ ರಾಶಿಯನ್ನು ಬದಲಾವಣೆ ಮಾಡಿದ ಗುರು ದೇವಾ, ಗುರು ಬಲ ಆರಂಭ. ಈ 6 ರಾಶಿಯವರಿಗೆ ರಾಜಯೋಗ. ಯಾರ್ಯಾರಿಗೆ ಗೊತ್ತೇ??

41

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವಿನ ಸ್ಥಾನ ಚೆನ್ನಾಗಿದ್ದರೆ ಖಂಡಿತವಾಗಿ ಎಲ್ಲರ ಜೀವನ ಚೆನ್ನಾಗಿರುತ್ತದೆ ಎಂಬುದಾಗಿ ಹೇಳುತ್ತಾರೆ. ಗುರು ಗ್ರಹದ ಗುಣಗಳು ಕೂಡ ಉದಾರತೆಯ ಸಾಂಕೇತಿಕ ಚಿಹ್ನೆಯಾಗಿದೆ ಎಂದರೆ ತಪ್ಪಾಗಲಾರದು. ಅದೇ ಗುರು ಗ್ರಹ ಈಗ ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದ ಆರು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಅವುಗಳು ಯಾವುವು ಹಾಗೂ ಬೀರುವಂತಹ ಪರಿಣಾಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ; ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಿಥುನ ರಾಶಿಯವರ ಹತ್ತನೇ ಮನೆಯಲ್ಲಿ ಗುರು ನೆಲೆಸಿರುತ್ತಾನೆ. ಹೀಗಾಗಿ ಆಸ್ತಿ ಐಶ್ವರ್ಯ ಸಂಪತ್ತು ಎನ್ನುವುದು ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಒಂದೊಳ್ಳೆ ಉತ್ತಮ ಜೀವನವನ್ನು ನಡೆಸಲಿದ್ದಾರೆ. ಹೊಸ ಮನೆ ಹಾಗೂ ವಾಹನವನ್ನು ಖರೀದಿ ಸುವಂತಹ ಅವಕಾಶ ದೊರೆಯಲಿದೆ. ಒಟ್ಟಾರೆಯಾಗಿ ಅದೃಷ್ಟದ ಬಾಗಿಲು ಇವರಿಗೆ ತೆರೆದಿರುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಸಮಸ್ಯೆಗಳು ತಲೆದೋರುವುದಿಲ್ಲ.

ಕಟಕ ರಾಶಿ; ಕಟಕರಾಶಿಯವರು 9ನೇ ಸ್ಥಾನದಲ್ಲಿ ಗುರು ಗ್ರಹ ನೆಲೆಸಿರುವುದರಿಂದ ಆಗಿ ಇವರಿಗೆ ಅದೃಷ್ಟ ಒಲಿದು ಬರಲಿದೆ. ಗುರು ಗ್ರಹ ಮೀನರಾಶಿಯಲ್ಲಿ ಇರುವುದರಿಂದಾಗಿ ಕಟಕ ರಾಶಿಯವರಿಗೆ ಅದೃಷ್ಟ ಯಾವುದೇ ಅನುಮಾನವಿಲ್ಲದೆ ಪ್ರತಿಯೊಂದು ಕ್ಷಣದಲ್ಲಿ ಕೂಡ ಸಾಥ್ ನೀಡಲಿದೆ.

ಕನ್ಯಾ ರಾಶಿ; ಗುರು ಗ್ರಹ ಮೀನ ರಾಶಿಯಲ್ಲಿ ಸಂಚರಿಸುವುದು ಕನ್ಯಾರಾಶಿಯವರಿಗೆ ಉತ್ತಮವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಕನ್ಯಾರಾಶಿಯವರಿಗೆ ಮದುವೆ ಆಗುವಂತಹ ಅವಕಾಶಗಳು ಕೂಡ ದೊರೆಯಲಿವೆ. ಕಷ್ಟದ ದಿನಗಳು ದೂರವಾಗಿ ಸುವರ್ಣ ದಿನಗಳು ಹತ್ತಿರವಾಗಲಿವೆ. ಮದುವೆ ಆಗದೆ ಇರುವವರಿಗೆ ಮದುವೆಯಾಗಲಿದೆ ಮದುವೆಯಾದವರಿಗೆ ದಾಂಪತ್ಯ ಜೀವನ ಸುಖಕರವಾಗಿ ಇರಲಿದೆ.

ವೃಶ್ಚಿಕ ರಾಶಿ; ಗುರು ಗ್ರಹ 5ನೇ ಸ್ಥಾನದಲ್ಲಿ ಇರುವುದರಿಂದಾಗಿ ವೃಶ್ಚಿಕರಾಶಿಯವರಿಗೆ ಭಾಗ್ಯದ ದಿನಗಳು ಬರಲಿವೆ. ಮಕ್ಕಳಾಗದೇ ಇರುವವರಿಗೆ ಅತ್ಯಂತ ಶೀಘ್ರದಲ್ಲಿಯೇ ಶುಭಸುದ್ದಿ ಕೇಳಿಬರಲಿದೆ. ಹಣಕಾಸಿನ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದಾಗಿದೆ ಕೊಂಚ ಜಾಗ್ರತೆಯಾಗಿರಿ.

ವೃಷಭ ರಾಶಿ; ವೃಷಭ ರಾಶಿಯವರ ಲಾಭದ ಮನೆಯಾಗಿರುವ 11ನೇ ಸ್ಥಾನದಲ್ಲಿ ಗುರು ಗ್ರಹ ಕಾಣಿಸಿಕೊಳ್ಳುವುದರಿಂದಾಗಿ ವೃಷಭ ರಾಶಿಯವರಿಗೆ ಭವಿಷ್ಯದಲ್ಲಿ ಲಾಭ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ವೃಷಭ ರಾಶಿಯವರ ನಿರೀಕ್ಷೆಗೆ ತಕ್ಕಂತೆ ಎಲ್ಲಾ ಕೆಲಸಗಳು ನಡೆಯಲಿವೆ. ಕೆಲಸಲ್ಲಿ ಉತ್ತಮ ಪ್ರಮೋಷನ್ ಪಡೆಯಲಿದ್ದೀರಿ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಹೊಂದಲಿದ್ದಾರೆ. ಒಟ್ಟಾರೆಯಾಗಿ ನೀವು ಮುಂದೆ ಕಾಣುವಂತಹ ದಿನಗಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ಹಾಗೂ ನಿಮಗೆ ಯಾವುದು ಸಮಸ್ಯೆಗಳನ್ನು ನೀಡದೆ ಉತ್ತಮವಾಗಿ ಸಾಗಿ ಬರಲಿದೆ.

ಕುಂಭ ರಾಶಿ; ಗುರು ಸಂಚಾರದಲ್ಲಿ ಕುಂಭರಾಶಿಯವರು ಇದ್ದೇ ಇರುತ್ತಾರೆ. ಆರ್ಥಿಕತೆಯನ್ನುವುದು ಇವರಲ್ಲಿ ಸದೃಢವಾಗಿರಲಿದೆ. ಕುಟುಂಬದ ಜೊತೆಗೆ ಎಲ್ಲವೂ ಕೂಡ ಚೆನ್ನಾಗಿರಲು ನಿಮ್ಮ ಎಲ್ಲ ಕೆಲಸಗಳಿಗೂ ಕುಟುಂಬದವರಿಂದ ಸಾಥಾ ಸಿಗಲಿದೆ. ಮುಂದಿನ ದಿನ ಗಳಲ್ಲಿ ಯಾವುದೇ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡರು ಕೂಡ ನೀವು ಅದನ್ನು ಎದುರಿಸುವಂತಹ ತಾಕತ್ತು ನಿಮ್ಮಲ್ಲಿರಲಿದೆ. ಗುರುವಿನ ರಾಶಿ ಪಲ್ಲಟದಿಂದಾಗಿ ರಾಜಯೋಗವನ್ನು ಪಡೆಯಲಿರುವ ರಾಶಿಗಳು ಈ ಮೇಲಿನಂತಿವೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳೊಂದಿಗೆ ಕಾಮೆಂಟ್ ಮಾಡಿ.

ಒಂದುವೇಳೆ ಇವುಗಳಲ್ಲಿ ನಿಮ್ಮ ರಾಶಿ ಇಲ್ಲದಿದ್ದರೂ ಕೂಡ ತಪ್ಪದೆ ದೈನಂದಿನ ಕಾರ್ಯಕ್ರಮದಲ್ಲಿ ದೇವರ ಪೂಜೆಯನ್ನು ಮಾಡಿ ದೇವರ ಪ್ರಾರ್ಥನೆಯನ್ನು ಮಾಡಿ ಒಳ್ಳೆಯದನ್ನೇ ಮಾಡಿ ಹಾಗೂ ಒಳ್ಳೆಯದನ್ನೇ ಬೇಡಿಕೊಳ್ಳಿ. ನಿಮ್ಮ ಒಳ್ಳೆಯತನಕ್ಕೆ ಕಂಡಿತವಾಗಿ ದೇವರು ಸರಿಯಾದ ಆಶೀರ್ವಾದವನ್ನು ನೀಡುತ್ತಾನೆ.

Get real time updates directly on you device, subscribe now.