ವಯಸ್ಸು 40 ದಾಟಿದ ನಂತರ ತಾಯಿಯರರಾದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಬಾಲಿವುಡ್ ಚಿತ್ರರಂಗ ಭಾರತೀಯ ಚಿತ್ರರಂಗದಲ್ಲಿ ಕೇವಲ ಸಿನೆಮಾಗಳಿಗಾಗಿ ಮಾತ್ರವಲ್ಲದೆ ಹಲವಾರು ಹೈಡ್ರಾಮಾ ಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು 40 ವಯಸ್ಸಿನ ನಂತರ ಗರ್ಭಿಣಿಯ ರಾಗಿರುವ ಬಾಲಿವುಡ್ ನಟಿಯರು ಯಾರು ಎನ್ನುವುದರ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾವೆಲ್ಲಾ ಖ್ಯಾತ ಬಾಲಿವುಡ್ ನಟಿಯರು ಕಾಣಸಿಗುತ್ತಾರೆ ಎಂಬುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಪ್ರೀತಿ ಜಿಂಟಾ; ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಪ್ರೀತಿಜಿಂಟಾ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಒಡತಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಇವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ 2016 ರಲ್ಲಿ ಅಮೆರಿಕ ಮೂಲದ ಜೀನ್ ಗುಡ್ನಫ್ ಅವರೊಂದಿಗೆ ವಿವಾಹ ಆಗುವುದರ ಮೂಲಕ 46ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ತಾಯಿ ಆಗುತ್ತಾರೆ. ಆದರೆ ಇಲ್ಲಿ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ವಿಚಾರ ಏನೆಂದರೆ ಇವರು ಇಬ್ಬರು ಮಕ್ಕಳನ್ನು ಪಡೆದುಕೊಂಡಿರುವುದು ಬಾಡಿಗೆ ತಾಯ್ತನದ ಮೂಲಕ.

ದಿಯಾ ಮಿರ್ಜಾ; ಹಿಂದಿ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿ ಆಗಿರುವ ದಿಯಾ ಮಿರ್ಜಾ ರವರು ಇದೇ ಫೆಬ್ರವರಿಯಂದು ವೈಭವ ರೇಖಿ ಎನ್ನುವ ಉದ್ಯಮಿಯೊಬ್ಬರನ್ನು ಎರಡನೇ ವಿವಾಹವಾಗುತ್ತಾರೆ. ಇದೇ ಮೇ 14ರಂದು ನಿರ್ದಿಷ್ಟ ಸಮಯಕ್ಕೂ ಮುನ್ನವೇ ಗಂಡುಮಗುವಿಗೆ ಜನ್ಮ ನೀಡುತ್ತಾರೆ. ಇನ್ನು ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಅವರಿಗೆ 39 ವರ್ಷ ವಯಸ್ಸಾಗಿತ್ತು. ಇನ್ನು ದಿಯಾ ಮಿರ್ಜಾ ಅವರ ಮಗನ ಹೆಸರು ಅವ್ಯಾನ್ ಅಜಾದ್ ರೇಖಿ.

ಗುಲ್ ಪನಗ್; ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಗುಲ್ ಪನಗ್ ಕೇವಲ ನಟಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇವರ ಹೆಸರು ವೆಬ್ ಸರಣಿ ಕ್ಷೇತ್ರದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತದೆ. ಗುಲ್ ಪನಗ್ ರವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ 2011 ರಲ್ಲಿ ಮದುವೆಯಾಗಿರುತ್ತಾರೆ. ಏಳು ವರ್ಷಗಳ ವೈವಾಹಿಕ ಜೀವನದ ನಂತರ ತನ್ನ ಮಗನಾಗಿರುವ ನಿಹಾಲ್ ರವರಿಗೆ ಜನ್ಮದಿನದ. ಮಗನಿಗೆ ಜನ್ಮ ನೀಡುವ ಸಂದರ್ಭದಲ್ಲಿ ಗುಲ್ ಪನಾಗ್ ಅವರ ವಯಸ್ಸು 39 ಆಗಿತ್ತು.

ಅನಿತ ಹಸ್ಸನಂದನಿ; ನಟಿ ಅನಿತಾ ಹಾಗೂ ರೋಹಿತ್ ರವರು ಗೋವಾದಲ್ಲಿ 2013 ರಂದು ಅದ್ದೂರಿಯಾಗಿ ವಿವಾಹವಾಗುತ್ತಾರೆ. ಕಳೆದ ವರ್ಷ ಫೆಬ್ರವರಿ ಯಂದು ಗಂಡು ಮಗುವಿನ ತಾಯಿ ಆಗುತ್ತಾರೆ. ಈ ಸಂದರ್ಭದಲ್ಲಿ ಇವರಿಗೂ ಕೂಡ 39 ವರ್ಷ ಪೂರ್ಣವಾಗಿತ್ತು.

ಐಶ್ವರ್ಯ ರೈ ಬಚ್ಚನ್; ಮಂಗಳೂರು ಮೂಲದ ಭುವನಸುಂದರಿ ಆಗಿರುವ ಐಶ್ವರ್ಯ ರೈ ಬಚ್ಚನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರಮುಖವಾಗಿ ನಟಿಸಿರುವುದು ಹಿಂದಿ ಭಾಷೆಯಲ್ಲಿ ಆದರೂ ಕೂಡ ದಕ್ಷಿಣ ಭಾರತ ಚಿತ್ರರಂಗದಾದ್ಯಂತ ಅವರ ಜನಪ್ರಿಯತೆಯನ್ನು ವುದು ಹೆಚ್ಚಾಗಿದೆ. 38 ವರ್ಷದವರಾಗಿರಬೇಕಾದರೆ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಮಗಳಾಗಿರುವ ಆರಾಧ್ಯ ರವರಿಗೆ ಜನ್ಮ ನೀಡುತ್ತಾರೆ. ತಮ್ಮ ಮಗಳಿಗೆ ಹಾಗೂ ಕುಟುಂಬಕ್ಕಾಗಿ ಸಮಯವನ್ನು ನೀಡಲು ಚಿತ್ರರಂಗದಿಂದ ಸಂಪೂರ್ಣ ವಿರಾಮವನ್ನು ತೆಗೆದುಕೊಳ್ಳುವುದನ್ನು ಕೂಡ ನಾವು ಇಲ್ಲಿ ಮೆಚ್ಚಬಹುದಾಗಿದೆ.

ಲೀಸಾ ರೇ; ಬಾಲಿವುಡ್ ಚಿತ್ರರಂಗದ ಮತ್ತೊಬ್ಬ ಚಿರಪರಿಚಿತ ಮುಖ ಆಗಿರುವ ಲೀಸಾ ರೇ ತಮ್ಮ 46ನೇ ವಯಸ್ಸಿನಲ್ಲಿ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಹೆಣ್ಣು ಮಕ್ಕಳನ್ನು ಪಡೆಯುತ್ತಾರೆ.

ನೆಹ ಧೂಪಿಯ; ಬಾಲಿವುಡ್ ಸಿನಿಮಾ ವೆಬ್ ಸರಣಿ ಹಾಗೂ ಹಲವಾರು ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಚಿರಪರಿಚಿತ ಮುಖ ಆಗಿರುವ ಸ್ನೇಹ ದುಪಿಯಾ ರವರು ನಟ ಅಂಗದ್ ಬೇಡಿ ರವರನ್ನು 2018 ರಲ್ಲಿ ಹಲವಾರು ವರ್ಷಗಳ ಡೇಟಿಂಗ್ ನಂತರ ಮದುವೆಯಾಗುತ್ತಾರೆ. ಕೆಲವೇ ಸಮಯಗಳ ನಂತರ ಅಂದರೆ ನೆಹ ಧೂಪಿಯ ರವರು 38 ವರ್ಷದವರಿರಬೇಕಾದರೆ ತಮ್ಮ ಮೊದಲ ಮಗು ಅಂದರೆ ಮಗಳನ್ನು ಸ್ವಾಗತಿಸುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಮುಕ್ತವಾಗಿ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.