ಪುರುಷರು ಮತ್ತು ಮಹಿಳೆಯರು ಇಬ್ಬರೂ ದೇಹದ ಈ ಸೂಕ್ಷ್ಮ ಭಾಗಗಳನ್ನು ಸ್ವಚ್ಛಗೊಳಿಸಲೇಬೇಕು, ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ದೈನಂದಿನ ಜೀವನದಲ್ಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿರುತ್ತಾರೆ. ಹೀಗಾಗಿ ಸ್ನಾನ ಮಾಡುವುದು ಅತ್ಯವಶ್ಯಕವಾಗಿ ರುತ್ತದೆ. ಪರಿಸರದ ಸ್ವಚ್ಛತೆಯ ಜೊತೆಗೆ ನಮ್ಮ ದೇಹದ ಸ್ವಚ್ಛತೆಯೂ ಕೂಡ ಪ್ರಮುಖ ವಿಚಾರವಾಗಿರುತ್ತದೆ. ಅದರಲ್ಲೂ ನಮ್ಮ ದೇಹದ ಕೆಲವೊಂದು ಸೂಕ್ಷ್ಮ ಭಾಗಗಳನ್ನು ಸ್ವಚ್ಛ ಮಾಡಿಕೊಳ್ಳದಿದ್ದರೆ ಇದರಿಂದ ಮುಂದೆ ಸಾಕಷ್ಟು ಅಪಾಯಗಳು ಕಟ್ಟಿಟ್ಟಬುತ್ತಿ ಎಂಬುದಾಗಿ ಈಗಾಗಲೇ ತಿಳಿದುಬಂದಿದೆ. ಹಾಗಿದ್ದರೆ ಆ ಸೂಕ್ಷ್ಮ ಭಾಗಗಳು ಯಾವುವು ಎಂದು ತಿಳಿಯೋಣ ಬನ್ನಿ.
ಹೊಕ್ಕುಳು; ಬಹುತೇಕರು ಸ್ನಾನ ಮಾಡುವಾಗ ಹೊಕ್ಕುಳನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಬ್ಯಾ’ಕ್ಟೀರಿಯಾ ವೇಗವಾಗಿ ಬೆಳೆಯಲು ಇದೊಂದು ಸೂಕ್ತವಾದ ಸ್ಥಳವಾಗಿದೆ. ಬೆವರಿನ ಹನಿಗಳು ಇಲ್ಲಿ ಶೇಖರಣೆಗಳು ಅದರಿಂದಾಗಿ ಬ್ಯಾ’ಕ್ಟೀರಿಯಾಗಳು ಬೆಳೆಯುತ್ತದೆ. ಹೀಗಾಗಿ ಪ್ರತಿ ಬಾರಿ ಸ್ನಾನ ಮಾಡುವಾಗ ಈ ಸ್ಥಳದಲ್ಲಿ ಎಣ್ಣೆಯಿಂದ ಸ್ವಚ್ಛಗೊಳಿಸಿದ ನಂತರ ಸೋಪಿನಿಂದ ತೊಳೆಯಬೇಕು. ಇವುಗಳ ಸ್ವಚ್ಛತೆ ಕೂಡ ಪ್ರಮುಖವಾಗಿರುತ್ತದೆ.
ಕಿವಿಯ ಹಿಂದೆ; ಸಾಮಾನ್ಯವಾಗಿ ಸ್ನಾನ ಮಾಡುವಾಗ ಕಿವಿಯ ಮುಂದಿನ ಭಾಗವನ್ನು ಎಲ್ಲರೂ ಕೂಡ ಸ್ವಚ್ಛಗೊಳಿಸುತ್ತಾರೆ ಆದರೆ ಹಿಂದಿನ ಭಾಗವನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಇಲ್ಲಿ ಕೀಟಾಣುಗಳು ಕೂಡ ಬೆಳೆಯಲು ಪ್ರಶಸ್ತವಾದ ಸ್ಥಳವಾಗಿದೆ. ಹೀಗಾಗಿ ಪ್ರತಿ ಬಾರಿ ಸ್ನಾನ ಮಾಡುವಾಗ ಮರೆಯದೆ ಸೋಪಿನಿಂದ ಕಿವಿಯ ಹಿಂದಿನ ಭಾಗವನ್ನು ಕೂಡ ಸ್ವಚ್ಛಗೊಳಿಸಿ ನಂತರ ಟವಲ್ ನಿಂದ ವರೆಸಿಕೊಳ್ಳಿ. ಇಲ್ಲಿ ಕೂಡ ಬ್ಯಾ’ಕ್ಟೀರಿಯ ಶೇಖರಣೆಯಾದ ರೆ ಮುಂದೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾಗಿದೆ.
ತೊಡೆಯ ಆಸುಪಾಸಿನ ಭಾಗಗಳು; ದಿನವಿಡೀ ಕೆಲಸ ಮಾಡುವುದು ಅಥವಾ ವ್ಯಾಯಾಮ ಮಾಡಿದಾಗ ನಿಮ್ಮ ದೇಹದ ಬೆವರು ಎನ್ನುವುದು ತೊಡೆಯ ಮೇಲ್ಭಾಗಗಳಲ್ಲಿ ಶೇಖರಣೆಯಾಗುತ್ತದೆ. ದೇವರು ಶೇಖರಣೆಯಾಗುವುದನ್ನು ಬ್ಯಾ’ಕ್ಟೀರಿಯಾಗಳು ಉಗಮ ವಾಗುವುದು ಎಂದರ್ಥ. ಹೀಗಾಗಿ ಸ್ನಾನ ಮಾಡುವ ಸಂದರ್ಭದಲ್ಲಿ ತಪ್ಪದೇ ಈ ಭಾಗಗಳಲ್ಲಿ ಸ್ವಚ್ಛಮಾಡುವುದು ಅತ್ಯವಶ್ಯಕವಾಗಿದೆ.
ನಾಲಿಗೆ; ಎಲ್ಲರೂ ಕೂಡ ದಿನಾಲು ಬ್ರಷ್ ಮಾಡುತ್ತೇವೆ. ಕೆಲವೊಮ್ಮೆ ದಿನಕ್ಕೆ ಎರಡು ಬಾರಿ ಕೂಡ ಬ್ರಷ್ ಮಾಡಿ ತಮ್ಮ ಹಲ್ಲಿನ ಆರೋಗ್ಯದ ಕುರಿತಂತೆ ಕಾಳಜಿ ವಹಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ನಾಲಿಗೆಯನ್ನು ಕೂಡ ಸ್ವಚ್ಛಗೊಳಿಸಬೇಕು ಆಗಿರುವುದು ಪ್ರಮುಖವಾಗಿರುತ್ತದೆ. ನಿಮ್ಮ ಬಾಯಿಂದ ದುರ್ನಾಥ ಬರುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ ನಾಲಿಗೆಯ ಸ್ವಚ್ಛತೆ ಇಲ್ಲದಿರುವುದು. ಹೀಗಾಗಿ ಪ್ರತಿಬಾರಿ ಹಲ್ಲು ತಿಕ್ಕುವಾಗ ನಾಲಿಗೆಯನ್ನು ಸ್ವಚ್ಛಗೊಳಿಸುವುದು ಅನ್ನು ಮಾತ್ರ ಮರೆಯಬೇಡಿ. ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಹರಡುವುದರಿಂದ ತಪ್ಪಿಸುತ್ತದೆ. ಹೀಗಾಗಿ ಪ್ರತಿಯೊಂದು ಬ್ರಷ್ ಮಾಡಿದಾಗಲೂ ಕೂಡ ಈ ಕಾರ್ಯವನ್ನು ನೆನಪಿನಲ್ಲಿಟ್ಟುಕೊಂಡು ಮಾಡಬೇಕಾಗುತ್ತದೆ.
ಉಗುರಿನ ಅಡಿಯಲ್ಲಿ; ಎಲ್ಲರೂ ಕೂಡ ಊಟ ಮಾಡಿದ ಮೇಲೆ ಅಥವಾ ಊಟ ಮಾಡುವುದಕ್ಕಿಂತ ಮುಂಚೆ ಕೈಯನ್ನು ತೊಳೆಯುತ್ತಾರೆ. ಆದರೆ ಯಾರೂ ಕೂಡ ಉಗುರಿನ ಕುರಿತಂತೆ ತಲೆಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಹೌದು ಉಗುರಿನಲ್ಲಿ ಕೊಳೆಗಳು ಸಂಗ್ರಹವಾಗರುತ್ತದೆ. ಈ ಕಾರಣಕ್ಕಾಗಿ ನೀವು ಊಟ ಮಾಡುವಾಗ ಉಗುರಿನಲ್ಲಿರುವ ಕೊಳೆ ನಿಮ್ಮ ದೇಹಕ್ಕೆ ಸೇರಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮೂಲವಾಗುತ್ತದೆ ಎಂಬುದೂ ಕೂಡ ಸಾಬೀತಾಗಿದೆ. ಹೀಗಾಗಿ ದೇಹದ ಈ ಸೂಕ್ಷ್ಮ ಪ್ರದೇಶಗಳನ್ನು ಸ್ವಚ್ಛ ಮಾಡಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಕೂಡ ಮರೆಯಬೇಡಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.