ಮದುವೆ ಫಿಕ್ಸ್ ಆದ ತಕ್ಷಣ ಹೆಣ್ಣು ಮಕ್ಕಳ ತಲೆಯಲ್ಲಿ ಬರುವ ಆ 7 ಆಲೋಚನೆಗಳು ಯಾವ್ಯಾವು ಗೊತ್ತೇ? ಮಹಿಳೆಯರ ತಲೆಯಲ್ಲಿ ಇಷ್ಟೆಲ್ಲ ಆಲೋಚನೆಗಳು.
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಹುಡುಗಿಯ ಜೀವನದಲ್ಲಿ ಕೂಡ ಮದುವೆ ಎನ್ನುವುದು ಸಾಕಷ್ಟು ಬದಲಾವಣೆಗಳನ್ನು ತರುವಂತಹ ಪ್ರಮುಖ ಘಟ್ಟ ವಾಗಿರುತ್ತದೆ. ಹೀಗಾಗಿ ಮದುವೆಗೂ ಮುನ್ನ ಸಾಕಷ್ಟು ನರ್ವಸ್ನೆಸ್ ಎನ್ನುವುದು ಹುಡುಗಿಯ ಮನದಲ್ಲಿ ಕಾಡುತ್ತದೆ. ಅರೆಂಜ್ ಮ್ಯಾರೇಜ್ ಆಗಲಿ ಅಥವಾ ಲವ್ ಮ್ಯಾರೇಜ್ ಆಗಲಿ ಹುಡುಗಿಗೆ ತನ್ನ ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗುವಾಗ ಖಂಡಿತವಾಗಿ ಈ ಮದುವೆಯಾಗಲೇಬೇಕಿತ್ತಾ ಎನ್ನುವ ಯೋಚನೆ ಬರುವುದು ಸುಳ್ಳಲ್ಲ.
ಇಂದಿನ ಲೇಖನಿಯಲ್ಲಿ ನಾವು ಒಬ್ಬ ಹುಡುಗಿ ಮದುವೆ ಗಟ್ಟಿಯಾದ ನಂತರ ಏನೆಲ್ಲ ಯೋಚಿಸುತ್ತಾಳೆ ಎನ್ನುವುದರ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ. ಇದನ್ನು ತಿಳಿದ ನಂತರ ನೀವು ಕೂಡ ಆ ಹುಡುಗಿಗೆ ಸಹಾಯವನ್ನು ಮಾಡಬಹುದಾಗಿದೆ ಎಂಬುದಾಗಿ ನಾವು ಭಾವಿಸುತ್ತೇವೆ. ಯಾವಾಗ ಒಬ್ಬ ಹುಡುಗಿಗೆ ಅರೆಂಜ್ ಮ್ಯಾರೇಜ್ ನಿಶ್ಚಯವಾಗುತ್ತದೆಯೋ ಆಗ ಆಕೆಗೆ ಗಂಡಿನ ಕುರಿತಂತೆ ಸಾಕಷ್ಟು ಯೋಚನೆಗಳು ಬರಲು ಆರಂಭವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಗಂಡಿನ ಸ್ವಭಾವ ಹೇಗಿರುತ್ತದೆ ನಮ್ಮಿಬ್ಬರ ನಡುವೆ ಎಲ್ಲವೂ ಸರಿ ಆಗಿರುತ್ತದೆಯೋ ಇಲ್ಲವೋ ಎನ್ನುವ ಕುರಿತಂತೆ ಹುಡುಗಿ ಯೋಚಿಸಲು ಆರಂಭಿಸುತ್ತಾಳೆ. ನಾವು ಖುಷಿಯಿಂದ ಜೀವನ ನಡೆಸಲು ಸಾಧ್ಯವೇ ಇಲ್ಲವೋ ಎನ್ನುವುದರ ಕುರಿತಂತೆ ಕೂಡ ಚಿಂತಿತಳಾಗಿರುತ್ತಾಳೆ.
ಇನ್ನು ಮದುವೆಯಾದ ಮೇಲೆ ತನ್ನ ಸಂಪೂರ್ಣ ಜೀವನವನ್ನು ತನ್ನ ಗಂಡನ ಮನೆಯಲ್ಲಿ ಕಳೆಯಬೇಕಾಗುತ್ತದೆ. ಹೀಗಾಗಿ ಗಂಡನ ಮನೆಯವರು ನನ್ನನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎನ್ನುವುದರ ಕುರಿತಂತೆ ಕೂಡ ಹುಡುಗಿಗೆ ಚಿಂತೆ ಇರುತ್ತದೆ. ಹೀಗಾಗಿ ಗಂಡನ ಮನೆಯವರ ಜೊತೆಗೆ ಹೇಗೆ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವುದು ಎನ್ನುವುದರ ಕುರಿತಂತೆ ಕೂಡ ಆಕೆ ಯೋಚಿಸುತ್ತಿರುತ್ತಾಳೆ. ಮದುವೆಯಾದ ಮೇಲೆ ಗಂಡನ ಮನೆಯವರಿಂದ ಸಾಕಷ್ಟು ಕಟ್ಟುಪಾಡುಗಳನ್ನು ಕೂಡ ಅನುಭವಿಸಬೇಕಾಗುತ್ತದೆ ಇದರಿಂದಾಗಿ ಆಕೆಯ ಸ್ವಾತಂ’ತ್ರ್ಯಕ್ಕೂ ಕೂಡ ಧಕ್ಕೆ ಬರಬಹುದಾದಂತಹ ಸಾಧ್ಯವಿರುತ್ತದೆ.
ಸೀರೆಯನ್ನೇ ಉಟ್ಟು ಕೊಳ್ಳ ಬೇಕು ಎನ್ನುವುದು ಹೊರಗೆ ತಿರುಗಾಡಲು ಹೋಗಬಾರದು ಎನ್ನುವುದು ಮನೆಯ ಕೆಲಸಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು ಎಂದು ಹೇಳುವುದು ಸ್ನೇಹಿತರೊಂದಿಗೆ ಮಾತನಾಡಬಾರದು ಎನ್ನುವುದು ಹೀಗೆ ಹಲವಾರು ನಿಯಮಗಳನ್ನು ಕೆಲವೊಮ್ಮೆ ಗಂಡನ ಮನೆಯವರು ಮದುವೆಯಾಗುವ ಹೆಣ್ಣುಮಗಳಿಗೆ ವಿಧಿಸುತ್ತಾರೆ. ಹೀಗೆ ಆದರೆ ತಾನು ಜೈ’ಲಿನಲ್ಲಿ ಇದ್ದೇನೆ ಎಂಬ ಭಾವನೆ ಮೂಡುತ್ತದೆ ಎನ್ನುವುದರ ಕುರಿತಂತೆ ಕೂಡ ಆಕೆ ಮದುವೆಯಾಗುವ ಮುನ್ನ ಯೋಚಿಸುತ್ತಾಳೆ. ಇನ್ನು ಮದುವೆಯಾಗಿ ಹೋದ ನಂತರ ಗಂಡನ ಮನೆಯಲ್ಲಿ ಒಳ್ಳೆಯ ರೀತಿ ಜೀವನ ಮಾಡುವ ಮೂಲಕ ತನ್ನ ತಂದೆ-ತಾಯಿಯ ಹೆಸರನ್ನು ಬೆಳಗಿಸುವ ಕುರಿತಂತೆ ಪ್ಲಾನಿಂಗ್ ಮಾಡಲು ಪ್ರಾರಂಭಿಸುತ್ತಾಳೆ. ಇದು ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಮದುವೆ ನಿಶ್ಚಯವಾದ ನಂತರ ಯೋಚಿಸುವಂತಹ ಯೋಚನೆಯಾಗಿದೆ.
ಮದುವೆ ಎಂದಾಕ್ಷಣ ಹೆಣ್ಣುಮಕ್ಕಳು ಇಷ್ಟಪಡದೆ ಇರಲು ಇನ್ನೊಂದು ಕಾರಣ ಕೂಡ ಇದೆ. ಅದೇನೆಂದರೆ ತಮ್ಮ ಜೀವನವನ್ನು ನಡೆಸಲು ಸ್ವಾವಲಂಬಿಯಾಗಿ ದುಡಿಯುವ ಇಚ್ಛೆಯನ್ನು ಕೂಡ ಹೆಣ್ಣುಮಕ್ಕಳು ಹೊಂದಿರುತ್ತಾರೆ ಹೀಗಾಗಿ ಮದುವೆಯಾದ ನಂತರ ತಮ್ಮ ಕೆಲಸದಲ್ಲಿ ಉನ್ನತಿಯನ್ನು ಹೊಂದಲು ನನ್ನ ಮದುವೆ ಅಡ್ಡಗಾಲು ಆಗಬಾರದು ಎನ್ನುವ ವಿಚಾರವನ್ನು ಕೂಡ ಯೋಚಿಸುತ್ತಿರುತ್ತಾರೆ. ಇನ್ನು ಮದುವೆಯಾದ ಮೇಲೆ ಮಕ್ಕಳು ಮಾಡಿಕೊಳ್ಳುವ ಕುರಿತಂತೆ ಕೂಡ ಹೆಣ್ಣುಮಕ್ಕಳು ಸಾಕಷ್ಟು ಚಿಂತಿತರಾಗುತ್ತಾರೆ.
ಯಾವುದೇ ಹೆಣ್ಣು ಮಕ್ಕಳು ಕೂಡ ಮದುವೆಯಾದ ಮೊದಲ ಎರಡು ವರ್ಷಗಳಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುವುದು ಕೂಡ ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಚಾರ. ಇನ್ನು ಕೊನೆಯದಾಗಿ ಮದುವೆ ದಿನ ಯಾವ ಬಟ್ಟೆಗಳನ್ನು ಹಾಕಿಕೊಳ್ಳುವುದು ಹಾಗೂ ಹನಿಮೂನ್ಗೆ ಯಾವ ಪ್ರದೇಶಕ್ಕೆ ಹೋಗುವುದು ಎನ್ನುವುದರ ಕುರಿತಂತೆ ಕೂಡ ಸಾಕಷ್ಟು ಪ್ಲಾನಿಂಗ್ ಗಳನ್ನು ಮದುವೆಯ ಮುನ್ನವೇ ಮಾಡಿಕೊಳ್ಳುತ್ತಾರೆ. ಈಗಲಾದರೂ ನಿಮಗೆ ಮದುವೆ ನಿಶ್ಚಯವಾದ ನಂತರ ಹೆಣ್ಣು ಮಕ್ಕಳು ಯಾವುದರ ಕುರಿತಂತೆ ಹೆಚ್ಚಾಗಿ ಯೋಚಿಸುತ್ತಾರೆ ಎನ್ನುವುದರ ಕುರಿತಂತೆ ತಿಳಿದಿರಬಹುದು. ಈಗಲಾದರೂ ಅವರ ಇಚ್ಛೆಗೆ ತಕ್ಕಂತೆ ಅವರಿಗೆ ಸಹಕಾರ ನೀಡುವುದು ಉಚಿತವಾಗಿರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.