ಪಾಪ ಮದುವೆಯಾದ ದಿನವೇ ಫಸ್ಟ್ ನೈಟ್ ನಲ್ಲಿ ಹೆಂಡತಿಗಾಗಿ ಗಂಡ ಕಾಯುತ್ತಿದ್ದಾಗ ಹೆಂಡತಿ ಏನು ಮಾಡಿದ್ದಾಳೆ ಗೊತ್ತೇ?? ಮೊದಲ ದಿನವೇ ಗಂಡ ಶಾಕ್.

66

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆ ಅಂದ್ರೆ ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಗಂಡು ಮಕ್ಕಳಿಗೂ ಕೂಡ ಅವರದೇ ಆದ ಕನಸುಗಳಿರುತ್ತವೆ. ತಾನು ಇಷ್ಟಪಟ್ಟು ಮದುವೆಯಾದ ಹುಡುಗಿ ಹೀಗೆ ಇರಬೇಕು ಎಂಬ ಕಲ್ಪನೆಯ ವರೆಗೂ ಇರುತ್ತದೆ. ಮದುವೆಯ ಬಗ್ಗೆ ಮೊದಲ ರಾತ್ರಿಯ ಬಗ್ಗೆ, ಹನಿಮೂನ್ ಬಗ್ಗೆ, ಎಲ್ಲದರ ಬಗ್ಗೆಯೂ ಹುಡುಗರು ಅವರದೇ ಆದ ಕನಸನ್ನು ಕಾಣುತ್ತಾರೆ. ಆದರೆ ಒಬ್ಬ ಗಂಡನ ಕನಸನ್ನೇ ಭಗ್ನ ಮಾಡಿ ಆತನಿಗೆ ಮೊದಲ ರಾತ್ರಿ ದಿನವೆ ಹೆಂಡತಿಯೊಬ್ಬಳು ಶಾಕ್ ನೀಡಿದ ಘಟನೆಯೊಂದು ನಡೆದಿದೆ.

ಈ ಘಟನೆ ನಡೆದಿದ್ದು ರಾಜಸ್ಥಾನದ ಜೈಪುರದಲ್ಲಿ. ಆತನಿಗೆ ಮನೆಯವರೇ ಒಪ್ಪಿ ನಿಶ್ಚಯಿಸಿದ ಮದುವೆ ಅದಾಗಿತ್ತು. ಶಾಸ್ತ್ರೋಕ್ತವಾಗಿ ಮದುವೆಯನ್ನು ನೆರವೇರಿಸಿ, ಮೊದಲ ರಾತ್ರಿಗೂ ಮುಹೂರ್ತ ಇಡಲಾಗಿತ್ತು. ಆದರೆ ಮೊದಲ ರಾತ್ರಿಗೆ ಹಾಲಿನ ಲೋಟ ಹಿಡಿದು ಬರಬೇಕಿದ್ದ ಹೆಂಡತಿ ಮಾಡಿದ್ದೇನು ಗೊತ್ತಾ ?!

ಹೌದು ಈಗಷ್ಟೇ ಮದುವೆಯಾಗಿದೆ ಇನ್ನೇನು ನನ್ನ ಹೆಂಡತಿ ಕೋಣೆಗೆ ಬರುತ್ತಾಳೆ, ನಮ್ಮ ಮುಂದಿನ ಜೀವನದ ಬಗ್ಗೆ ಮಾತಾಡ್ಬೇಕು ಅಂತೆಲ್ಲಾ ಕನಸು ಹೊತ್ತು ಚಡಪಡಿಕೆಯಿಂದ ಕಾಯುತ್ತಿದ್ದವನಿಗೆ ಸಿಕಿದ್ದೆ ಬೇರೆ. ಕೋಣೆಗೆ ಬಂದ ಹೆಂಡತಿ ಗಂಡನ ಬಳಿ ಮಾತನಾಡದೆ ದೂರವೇ ಕುಳಿತಿದ್ದಳು. ಆತನಿಗೆ ಮೊದಲು ಏನು ಅರ್ಥವಾಗಲಿಲ್ಲ. ಅವಳನ್ನು ಮಾತನಾಡಿಸಲು ಪ್ರಯತ್ನಿಸಿದ. ಆದರೆ ಆಕೆ ಆತನನ್ನು ಮಾತನಾಡಿಸದೆ ಆತನಿಂದ ದೂರವೇ ಉಳಿದಳು. ಮತ್ತೆಯು ಆತ ಮಾತನಾಡಿಸಲು ಪ್ರಯತ್ನಿಸಿದಾಗ ನನಗೆ ನೀನು ಕಿಂಚಿತ್ತು ಇಷ್ಟವಿಲ್ಲ ಎಂದು ಹೇಳಿ ಬಿಟ್ಟಳು. ಇದನ್ನು ಕೇಳಿ ಆತ ದಂಗಾಗಿದ್ದ.

ಆದರೂ ಆಕೆಯನ್ನು ರಮಿಸಲು ಪ್ರಯತ್ನ ಪಟ್ಟರೆ, ಆಕೆ ಇನ್ನೊಂದು ಶೋಕಿಂಗ್ ವಿಷಯವನ್ನು ಹೇಳುತ್ತಾಳೆ. ನಾನು ಬೇರೆಯವರನ್ನು ಪ್ರೀತಿಸುತ್ತಿದ್ದೇನೆ ಎಂದು ಗಂಡನಿಗೆ ಮೊದಲ ರಾತ್ರಿಯ ದಿನ ಹೇಳುತ್ತಾಳೆ. ಇದರಿಂದ ಅವನಿಗೆ ಆಘಾತವಾಗುತ್ತದೆ. ಮುಂದಿನ ಎರಡು ದಿನಗಳು ಕೂಡ ಹೆಂಡತಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದರೆ ಆಕೆ ಇನ್ನಷ್ಟು ದೂರವೇ ಉಳಿಯುತ್ತಾಳೆ. ಬಳಿಕ ಆಕೆಯ ಪ್ರಿಯಕರನಿಂದ ಇವನಿಗೆ ಬೆದರಿಕೆಯ ಕರೆ ಬರುತ್ತದೆ. ನೀನು ಆಕೆಯನ್ನು ಮುಟ್ಟಬಾರದು ಹುಷಾರ್ ಎಂದು ತಾಕೀತು ಮಾಡುತ್ತಾನೆ. ಈ ಎಲ್ಲಾ ವಿಷಯಗಳು ಆತನ ಮನೆಯವರಿಗೆ ಗೊತ್ತಾಗುತ್ತದೆ. ಕೂಡಲೇ ಹುಡುಗಿಯ ಮನೆಯವರ ವಿರುದ್ಧ ಕೇಸ್ ಫೈಲ್ ಮಾಡಿಸುತ್ತಾರೆ. ಪೊಲಸರು ಸದ್ಯ ಹುಡುಗಿಯನ್ನು ಆಕೆಯ ಪ್ರಿಯಕರನನ್ನು ಹಾಗೂ ಆಕೆಯ ಪಾಲಕರನ್ನು ಸ್ಟೇಶನ್ ಗೆ ಕರೆಸಿ ವಿಚಾರಿಸಿದ್ದಾರೆ.

Get real time updates directly on you device, subscribe now.