ವೃಶ್ಚಿಕ ರಾಶಿಯವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?? ವೃಶಿಕ ರಾಶಿಯಲ್ಲಿ ಪುರುಷರ ಸ್ವಭಾವ ಹೇಗಿರುತ್ತದೆ ಗೊತ್ತೇ??

74

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಜಗತಿನಲ್ಲಿ ಎಷ್ಟು ಜನರಿದ್ದಾರೂ ಅಷ್ಟು ಜನರ ಗುಣ ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಅದರಲ್ಲೂ 12 ರಾಶಿಗಳ ಗುಣಗಳೂ ವ್ಯತ್ಯಾಸವನು ಹೊಂದಿರುತ್ತವೆ. ಆದರೆ ಒಂದೇ ರಾಶಿಯನ್ನು ಹೊಂದಿರುವ ಹಲವರಲ್ಲಿ ಸಾಮ್ಯತೆಯನ್ನು ನೋಡಬಹುದು. ಹಾಗಾಗಿ ನಾವಿಂದು ವೃಶ್ಚಿಕ ರಾಶಿಯ ಪುರುಷರ ಸ್ವಭಾವದ ಬಗ್ಗೆ ಹೇಳುತ್ತೇವೆ.

ಪ್ರಾಮಾಣಿಕ ವ್ಯಕ್ತಿತ್ವ: ಪ್ರಾಮಾಣಿಕವಾಗಿಯೇ ಮಾತುಗಳನ್ನಾಡುತ್ತಾರೆ. ಆದರೆ ಇದು ಎಷ್ಟೋ ಸಂದರ್ಭದಲ್ಲಿ ಬೇರೆಯವರಿಗೆ ನೋವುಂಟು ಮಾಡಬಹುದು. ಆದರೆ ಅವರು ಕೇರ್ ಮಾಡುವುದಿಲ್ಲ. ಸತ್ಯವನ್ನೇ ಮಾತನಾಡುತ್ತಾರೆ. ಮಾತುಗಳನ್ನು ಅಳೆದು ತೂಗಿ ಆಡುವುದರ ಜೊತೆಗೆ ತಮಗನಿಸಿದ್ದನ್ನು ಹೇಳುವಲ್ಲಿ ಹಿಂಜರಿಯುವುದಿಲ್ಲ. ವೃಶ್ಚಿಕ ರಾಶಿಯ ಪುರುಷರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಕೆಲಸದಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಪ್ರೀತಿಯನ್ನಿಟ್ಟುಕೊಂಡಿರುತ್ತಾರೆ. ಸೋಲಿನಿಂದ ಕುಗ್ಗುವುದಿಲ್ಲ. ಯಶಸ್ಸು ಸಿಗುವವರೆಗೂ ಪ್ರಯತ್ನಿಸುತ್ತಲೇ ಇರುತ್ತಾರೆ.

ಅಧಿಕಾರವಾದಿಗಳು ಇವರು. ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಅವರು ಇನ್ನೊಬ್ಬರಿಗೆ ಆದೇಶ ನೀಡಿ ಅದಿಕಾರ ಚಲಾಯಿಸಬಲ್ಲರು. ತಾವಂದುಕೊಂಡಂತೆಯೇ ಕೆಲಸ ಮಾಡಿಸಿಕೊಳ್ಳುವ ಅವರು ನೋಡುವವರಿಗೆ ಸ್ವಾರ್ಥಿಗಳಾಗಿಯೂ ಕಾಣುತ್ತಾರೆ. ನಾಯಕತ್ವ ಸಿಗದಿದ್ದಲ್ಲಿ ವೃಶ್ಚಿಕ ರಾಶಿಯ ಪುರುಷರು ಬೇಸರಪಟ್ಟುಕೊಳ್ಳುತ್ತಾರೆ.

ಇನ್ನು ವೃಶ್ಚಿಕ ರಾಶಿಯ ಪುರುಷರು ತುಂಬಾ ಕಹಿ ಮತ್ತು ಅಸಮಾಧಾನವನ್ನು ಹೊಂದಿರುತ್ತಾರೆ. ಯಾವುದೇ ವಿಷಯಕ್ಕೆ ಸೇಡು ತೀರಿಸಿಕೊಳ್ಳುವ ಗುಣ ಅವರದ್ದು ತಮ್ಮದೇ ತಪ್ಪಿದ್ದಾಗಲೂ ಒಪ್ಪಿಕೊಳ್ಳದೇ ವಾದಿಸುತ್ತಾರೆ. ಪ್ರೀತಿ ಪ್ರೇಮ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವುತ್ತಾರೆ. ಹಾಗಾಗಿ ಇದರಿಂದ ಪ್ರೇಮಿಯ ಮನಸ್ಸಿಗೆ ನೋವುಂಟಾಗುತ್ತದೆ.

ವೃಶ್ಚಿಕ ರಾಶಿಯ ಪುರುಷರದ್ದು ತುಂಬಾ ನಿಗೂಢ ವ್ಯಕ್ತಿತ್ವ. ಇವರು ಮುಚ್ಚಿದ ಪುಸ್ತಕವಿದ್ದಂತೆ. ಅವರನ್ನು ಯಾರಿಗೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಯಾವಾಗಲೂ ಮೋಸ ಹೋಗುವ ಬಗ್ಗೆ ಹೆದರುತ್ತಾರೆ ಹಾಗೂ ಅಪಾಯಗಳನ್ನು ಮೊದಲೇ ಊಹಿಸುತ್ತಾರೆ. ತಮ್ಮ ಭಾವನೆಗಳನ್ನು ಹೊರಗೆಲ್ಲೂ ತೋರಿಸಿಕೊಳ್ಳದೇ ತಮ್ಮೊಳಗೇ ಇಟ್ಟುಕೊಂಡಿರುತ್ತಾರೆ. ಇವಿಷ್ಟು ವೃಶ್ಚಿಕ ರಾಶೀಯವರ ಗುಣ ಸ್ವಭಾವ. ನೀವೂ ವೃಶ್ಚಿಕ ರಾಶಿಯವರಾಗಿದ್ದರೆ ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.