ಅತಿ ಸುಲಭವಾಗಿ ಕಡಿಮೆ ಬಂಡವಾಳದಲ್ಲಿ ಮಾಲಿನ್ಯ ತಪಾಸಣಾ ಕೇಂದ್ರ ಸ್ಥಾಪಿಸಿ, ಕೈತುಂಬಾ ಸಂಪಾದನೆ ಮಾಡಿ ಹೇಗೆ ಗೊತ್ತೇ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ನಾವು ಗಾಡಿ ಓಡಿಸುತ್ತೇವೆ ಎಂದಾದರೆ, ಅದರಲ್ಲಿ ಮಾಲಿನ್ಯ ತಪಾಸಣಾ ಪ್ರಮಾಣಪತ್ರ ಹೊಂದಿರಲೇ ಬೇಕು. ಅದು ಇಲ್ಲವಾದಲ್ಲಿ, ಪೋಲಿಸರು ನಿಮ್ಮ ಗಾಡಿಯನ್ನು ವಶಕ್ಕೆ ತೆಗೆದುಕೊಳ್ಳಬಹುದು ಅಥವಾ ಹೆಚ್ಚಿನ ದಂಡ ವಿಧಿಸಬಹುದು. ಅದಕ್ಕಿಂತ ಹೆಚ್ಚಾಗಿ ನಮ್ಮ ವಾಹನ ಮಾಲಿನ್ಯ ರಹಿತವಾಗಿದೆ ಎಂಬುದನ್ನು ದೃಢಿಕರಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯ ಕೂಡ. ಇದಕ್ಕಾಗಿ ಪ್ರತಿಯೊಬ್ಬರೂ ಈ ತಪಾಸಣೆ ಮಾಡಿಸುವುದರಿಂದ ನೀವು ಮಾಲಿನ್ಯ ತಪಾಸಣಾ ಕೇಂದ್ರವೊಂದನ್ನು ನಿರ್ಮಿಸಿಕೊಂಡು ನೀವೇ ತಪಾಸಣೆ ಮಾಡುವ ಮೂಲಕ ಹಣವನ್ನೂ ಕೂಡ ಗಳಿಸಬಹುದು.

ಹೌದು, ಅತೀ ಕಡಿಮೆ ಹೂಡಿಕೆಯಲ್ಲಿ ಮಾಲಿನ್ಯ ತಪಾಸಣಾ ಕೇಂದ್ರವನ್ನು ನೀವೇ ಆರಂಭ ಮಾಡಬಹುದು. ಈಗ ಪ್ರತಿ ಗಾಡಿಯ ಮಾಲಿನ್ಯ ತಪಾಸಣೆ ಮಾಡಿಸುವುದು ಕಡ್ಡಾಯವಾದ್ದರಿಂದ ನೀವು ಇದನ್ನು ಆರಂಭಿಸಿದರೆ ಯಾವುದೇ ನಷ್ಟವಿಲ್ಲದೇ ಆದಾಯಗಳಿಸಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಕನಿಷ್ಠ 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ ಸಾಕು. ನಿಮ್ಮದೇ ಆದ ಸ್ವಂತ ಮಾಲಿನ್ಯ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಬಹುದು. ಇದು ಆರಂಭದಿಂದಲೇ ನಿಮಗೆ ಆದಾಯವನ್ನು ತಂದುಕೊಡುವ ವ್ಯವಹಾರವಾಗಿದೆ. ಪ್ರತಿದಿನ 1,000 ದಿಂದ 1,500 ರೂಪಾಯಿಗಳನ್ನು ಅಂದರೆ ಅಂದಾಜು ಒಂದು ತಿಂಗಳಿಗೆ ಸುಮಾರು 30 ಸಾವಿರದಿಂದ 40 ಸಾವಿರ ರೂಪಾಯಿಗಳವರೆಗೆ ಆದಾಯ ಗಳಿಸಬಹುದು.

ತಪಾಸಣಾ ಕೇಂದ್ರವನ್ನು ಸ್ಥಾಪಿಸಲು ಮಾಡಬೇಕಾದ ವಿಷಯಗಳೆಂದರೆ ಆಟೋಮೊಬೈಲ್ ವರ್ಕ್ ಶಾಪ್, ಪೆಟ್ರೋಲ್ ಪಂಪ್ ಬಳಿ ಎಲ್ಲಿ ಬೇಕಾದರೂ ನೀವು ಮಾಲಿನ್ಯ ಪರೀಕ್ಷಾ ಕೇಂದ್ರವನ್ನು ತೆರೆಯಬಹುದು. ಅಧಿಕೃತ ವಾಹನ ಮಾಲಿನ್ಯ ತಪಾಸಣಾ ಕೇಂದ್ರವನ್ನು ತೆರೆಯಲು, ಮೊದಲನೆಯದಾಗಿ ನೀವು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ (ಆರ್‌ಟಿಒ) ಪರವಾನಗಿ ಪಡೆಯಬೇಕು. ಆನ್‌ಲೈನ್ ಅಪ್ಲಿಕೇಶನ್ ಸೌಲಭ್ಯಗಳೂ ಕೂಡ ಅಭ್ಯವಿವೆ. ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ.

ಅಧಿಕೃತ ಮಾಲಿನ್ಯ ತಪಾಸಣಾ ಕೇಂದ್ರವನ್ನು ತೆರೆಯಲು ಹಳದಿ ಬಣ್ಣದ ಕ್ಯಾಬಿನ್‌ಗಳಲ್ಲಿ ಮಾತ್ರ ವಾಹನ ಮಾಲಿನ್ಯ ಪರೀಕ್ಷಾ ಕೇಂದ್ರಗಳನ್ನು ಶುರು ಮಾಡಬಹುದು. ಕ್ಯಾಬಿನ್ ಗಾತ್ರವು 2 ಮೀಟರ್ ಅಗಲ, 2.5 ಮೀಟರ್ ಉದ್ದ ಮತ್ತು 2 ಮೀಟರ್ ಎತ್ತರವಿರಬೇಕು. ಮಾಲಿನ್ಯ ಪರೀಕ್ಷಾ ಕೇಂದ್ರದಲ್ಲಿ ಪರವಾನಗಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆದಿರಬೇಕು. ಇನ್ನು ಈ ವ್ಯವಹಾರವನ್ನು ದೇಶದ ಯಾವುದೇ ಸಂಸ್ಥೆ ಮತ್ತು ನಾಗರಿಕರು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು, ಆಟೋ ಮೆಕ್ಯಾನಿಕ್ಸ್, ಆಟೋಮೊಬೈಲ್ ಎಂಜಿನಿಯರಿಂಗ್, ಡೀಸೆಲ್ ಮೆಕ್ಯಾನಿಕ್ಸ್, ಮೋಟಾರ್ ಮೆಕ್ಯಾನಿಕ್ಸ್, ಸ್ಕೂಟರ್ ಮೆಕ್ಯಾನಿಕ್ಸ್ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಪ್ರಮಾಣೀಕೃತ ಪ್ರಮಾಣ ಪತ್ರವನ್ನು ಹೊಂದಿರುವುದು ಕಡ್ಡಾಯ. ಮಾಲಿನ್ಯ ತಪಾಸಣಾ ಕೇಂದ್ರ ಸ್ಥಾಪಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು https://vahan.parivahan.gov.in/puc ಗೆ ಭೇಟಿ ನೀಡಿ.

Get real time updates directly on you device, subscribe now.