ಕೊನೆಗೂ ಬಯಲಾಯಿತು ಅಸಲಿ ಶಾಕಿಂಗ್ ಸತ್ಯ, ಕನ್ನಡದ ಕೋಟ್ಯಾಧಿಪತಿಯಲ್ಲಿ ಅಪ್ಪು ಪಡೆದ ಕೋಟಿ ಕೋಟಿ ಸಂಭಾವನೆ ಏನು ಮಾಡಿದ್ದಾರೆ ಗೊತ್ತೇ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಪ್ಪು ಬಗ್ಗೆ ಅನುದಿನವೂ ಹೇಳಬಹುದು, ಅವರ ಬಗ್ಗೆ ಸಾಕಷ್ಟು ಮಾತನಾಡಬಹುದು. ಎಷ್ಟೇ ಮಾತನಾಡಿದರೂ ಬಾಯೂ ಬತ್ತುವುದಿಲ್ಲ, ಬೇಸರವೂ ಆಗುವುದಿಲ್ಲ. ಅಂಥ ವ್ಯಕ್ತಿತ್ವ ಅವರದ್ದು. ಸಾಮಾನ್ಯವಾಗಿ ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರನ್ನಾದರೂ ಕೇಳಿ ಅಪ್ಪು ಬಗ್ಗೆ ಮಾತನಾಡದೇ ಇರುವುದೇ ಇಲ್ಲ. ಇದೀಗ ಕನ್ನಡದ ಹೆಸರಾಂತ ನಿರ್ದೇಶಕ ದೊರೆ-ಭಗವಾನ್ ಕೂಡ ಅಪ್ಪು ಬಗ್ಗೆ ವಿಶೇಷವಾದ ಸಂಗತಿಯೊಂದನ್ನು ಹೊರಹಾಕಿದ್ದಾರೆ.

ಹೌದು, ಕನ್ನಡ ಇಂಡಸ್ಟ್ರಿಯಲ್ಲಿ ಪುನೀತ್ ಮಾಡಿದ ಸಾಧನೆ ಅಷ್ಟೀಷ್ಟಲ್ಲ. ಅಷ್ಟೇ ಅಲ್ಲ ಕನ್ನದ ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿಯಂಥ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಎಲ್ಲರ ಮನೆ ಮನ ತಲುಪಿದ್ದರು. ಅಪ್ಪು ಅವರ ಹೋಸ್ಟಿಂಗ್ ಕಾರಣಕ್ಕೆ ಕನ್ನಡದ ಕೋಟ್ಯಾಧಿಪತಿ ಅಷ್ಟು ಫೇಮಸ್ ಆಗಿತ್ತು ಅಂದರೆ ತಪ್ಪಿಲ್ಲ. ಮುದುಕರಿಂದ ಮಕ್ಕಳವರೆಗೂ ಎಲ್ಲರಿಗೂ ಇಷ್ಟವಾಗಿದ್ದ ರಿಯಾಲಿಟಿ ಶೋ ಅದಾಗಿತ್ತು.

ಅಂದಹಾಗೆ ಪುನೀತ್ ಕನ್ನದದ ಕೋಟ್ಯಾಧಿಪತಿ ನಡೆಸಿಕೊಟ್ಟಿದ್ದಾರೆ ಎಂದರೆ ಅವರಿಗೆ ಉತ್ತಮ ಸಂಭಾವನೆ ಸಿಕ್ಕಿರಬಹುದು ಎಂಬುದನ್ನು ನೀವು ಊಹಿಸಿರುತ್ತೀರಿ. ಆದರೂ ಈ ಅನುಮಾನವನ್ನು ಪರಿಹರಿಸಿದ್ದಾರೆ ನಿರ್ದೇಶಕ ದೊರೆ ಭಗವಾನ್. ಡಾ. ರಾಜಕುಮಾರ್ ಕುಟುಂಬಕ್ಕೆ ವಯಕ್ತಿಕವಾಗಿ ಹತ್ತಿರವಾಗಿರುವ ದೊರೆ ಭಗವಾನ್ ಪುನೀತ್ ರಾಜಕುಮಾರ್ ಕನಡದ ಕೋಟ್ಯಾಧಿಪತಿಗೆ 8 ಕೋಟಿ ಹಣವನ್ನು ಸಂಭಾವನೆಯಾಗಿ ಪಡೆದಿದ್ದರು ಎಂದು ಹೇಳಿದ್ದಾರೆ. ಆದರೆ ಈ ಹಣವನ್ನು ಪುನೀತ್ ಏನು ಮಾಡಿದ್ದರು ಗೊತ್ತೆ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು ಎನ್ನುವುದು ಅವರು ಇಹಲೋಕ ತ್ಯಜಿಸಿದ ಮೇಲೆಯೇ ಬೆಳಕಿಗೆ ಬಂದಿದ್ದು. ಹೀಗೆ ತಾವು ಗಳಿಸಿದ್ದ 8 ಕೋಟಿ ಹಣವನ್ನು ಒಂದು ಬಡ ಶಾಲಾ ಮಕ್ಕಳ ಉದ್ಧಾರಕ್ಕಾಗಿ ಮೀಸಲಿಟ್ಟಿದ್ದರು! ಹೌದು, ಮೈಸೂರಿನ ಶಕ್ತಿಧಾಮ, ಹೆಣ್ಣುಮಕ್ಕಳಿಗೆ ಆಸರೆಯಾಗಿರುವ ಆಶ್ರಮ. ಇದರಲ್ಲಿರುವ ಮಕ್ಕಳಿಗಾಗಿ ಪುನೀತ್ ಹಣವನ್ನು ಮೀಸಲಿಟ್ಟಿದ್ದರು.

ಈ ಮಕ್ಕಳ ಉದ್ದಾರಕ್ಕಾಗಿ ಇಲ್ಲಿಯೇ ಒಂದು ಶಾಲೆಯನ್ನು ತೆರೆಯಲು ನಿರ್ಧರಿಸಿದರು. ಆದರೆ ಇಲ್ಲಿಯ ಮಕ್ಕಳಿಗೆ ಫೀ ಆಗಲಿ ಡೋನೆಶನ್ ಆಗಲಿ ತೆಗೆದುಕೊಳ್ಳಬಾರದು. ಇಲ್ಲಿ ಕೇವಲ ಹೆಣ್ಣುಮಕ್ಕಳು ಮಾತ್ರ ಓದಬೇಕು. ಹಾಗೆಯೇ ಮಕ್ಕಳಿಗೆ ತಾನೇ ಸಮವಸ್ತ್ರ ಕೊಡುತ್ತೇನೆ. ಹಾಗಿದ್ದರೆ ಮಾತ್ರ ಶಾಲೆ ಕಟ್ತಲು ಆರಂಭಿಸಿ ಎಂದಿದ್ದರು.

ಇಂದು ಪುನೀತ್ ಅವರ ಈ ಕನಸನ್ನು ಇಡೇರಿಸಲು ಅವರ ಕುಟುಂಬ ಮುಂದಾಗಿದೆ. ಈಗಾಗಲೇ ಸರ್ಕಾರದ ಅನುಮತಿಯೂ ಸಿಕ್ಕಿದ್ದು, ಈ ಶಾಲೆಗೆ ಪುನೀತ್ ಅವರ ಹೆಸರನ್ನೇ ಇಡಲಾಗುವುದು ಎಂದು ನಿರ್ದೇಶಕ ದೊರೆ ಭಗವಾನ್ ತಿಳಿಸಿದ್ದಾರೆ. ಏನೇ ಹೇಳಿ, ಅಪ್ಪುಗೆ ಅಪ್ಪುನೇ ಸರಿಸಾಟಿ ಅಲ್ವಾ?

Get real time updates directly on you device, subscribe now.