ಸಮುದ್ರಕ್ಕೆ ಮುಖ ಮಾಡಿರುವ ಬರೋಬ್ಬರಿ 100 ಕೋಟಿ ಬೆಲೆ ಬಾಳುವ ಹೃತಿಕ್ ಅವರ ಈ ಮನೆ ಹೇಗಿದೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ, ಬಾಲಿವುಡ್ ನ ಅತ್ಯಂತ ಹ್ಯಾಂಡ್ ಸಮ್ ಹಂಕ್ ಎನಿಸಿಕೊಂಡಿರುವವರು ನಟ ಹೃತಿಕ್ ರೋಶನ್. ಬಾಲಿವುಡ್ ನಲ್ಲಿ ತಮ್ಮ ನಟನೆಯ ಮೂಲಕ, ಲುಕ್ ಮೂಲಕ, ಡ್ಯಾನ್ಸ್ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದವರು.
ಜನವರಿ 10, 1974 ರಂದು ಮುಂಬೈನಲ್ಲಿ ಜನಿಸಿದ ಹೃತಿಕ್ ರೋಷನ್ ‘ಕಹೋ ನಾ ಪ್ಯಾರ್ ಹೈ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹೃತಿಕ್ ರೋಷನ್ ಅವರ ಮೊದಲ ಚಿತ್ರದಿಂದಲೇ ಸೂಪರ್ ಸ್ಟಾರ್ ಅದರು. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಚಿತ್ರಕ್ಕೆ ಸುಮಾರು 102 ಪ್ರಶಸ್ತಿಗಳು ಬಂದಿವೆ ಎಂದರೆ ನಿಮಗೆ ಆಶ್ವರ್ಯವಾಗಬಹುದು. ಈ ಸಿನಿಮಾದಲ್ಲಿ ಅದ್ಭುತ ಅಭಿನಯದ ಮೂಲಕ ನಟ ಹೃತಿಕ್ ರೋಷನ್ ಹಾಗೂ ನಟಿ ಅಮೀಶಾ ಪಟೇಲ್ ಇಬ್ಬರೂ ರಾತ್ರೋರಾತ್ರಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದು ಸುಳ್ಳಲ್ಲ.
ಹೃತಿಕ್ ರೋಷನ್ ಖ್ಯಾತ ನಿರ್ದೇಶಕ ರಾಕೇಶ್ ರೋಷನ್ ಅವರ ಪುತ್ರನಾದರೂ, ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಭಿನ್ನ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡು ಸ್ವಂತವಾಗಿ ಕೋಟಿ ಕೋಟಿ ಹಣ ಗಳಿಸಿದ್ದಾರೆ. ಹೃತಿಕ್ ರೋಷನ್ ಅವರು 1980 ರಲ್ಲಿ ಜೀತೇಂದ್ರ-ರೀನಾ ರಾಯ್ ಅವರ ಆಶಾ ಚಿತ್ರದ ಮೂಲಕ ಬಾಲ ಕಲಾವಿದನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕೆ ಹೃತಿಕ್ ಪಡೆದಿದ್ದು ಕೇವಲ 100 ರೂಪಾಯಿ. ನಂತರ ಹೃತಿಕ್ ತನ್ನ ತಂದೆಯೊಂದಿಗೆ ‘ಖುದ್ಗರ್ಜ್’, ‘ಕಿಂಗ್ ಅಂಕಲ್’, ‘ಕರಣ್ ಅರ್ಜುನ್’ ಮತ್ತು ‘ಕೊಯ್ಲಾ’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಹೃತಿಕ್ ರೋಷನ್ ತಮ್ಮ ನಟನೆಗಾಗಿ ಮಾತ್ರವಲ್ಲದೆ ತಮ್ಮ ನೃತ್ಯದಿಂದಲೂ ಬಹಳ ಫೇಮಸ್. ಹೃತಿಕ್ ಅವರ ಸ್ಟೈಲ್ ಅಂದ್ರೆ ಅವರ ಅಭಿಮಾನಿಗಳಿಳೂ ತುಂಬಾನೇ ಇಷ್ಟ. ಇನ್ನು ಹೃತಿಕ್ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ. ಮುಂಬೈನ ಜುಹುದಲ್ಲಿರುವ ಸೀ ಫೇಸಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ಹೃತಿಕ್ ರೋಷನ್ ವಾಸಿಸುತ್ತಿದ್ದಾರೆ. ಇಂದು ನಾವು ನಿಮಗೆ ಹೃತಿಕ್ ರೋಷನ್ ಅವರ ಐಷಾರಾಮಿ ಮನೆಯ ಕೆಲವು ಸುಂದರವಾದ ಚಿತ್ರಗಳನ್ನು ತೋರಿಸಲಿದ್ದೇವೆ.
30000 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಹೃತಿಕ್ ರೋಷನ್ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಇನ್ನು ಅವರ ಮಕ್ಕಳು ಕೂಡ ಆಗಾಗ ಈ ಅಪಾರ್ಟ್ಮೆಂಟ್ ಗೆ ಬಂದು ತಂದೆಯ ಜೊತೆ ಸಮಯ ಕಳೆಯುತ್ತಾರೆ. ಇನ್ನು ಖ್ಯಾತ ಇಂಟೀರಿಯರ್ ಡಿಸೈನರ್ ಆಶಿಶ್ ಶಾ ಹೃತಿಕ್ ಅವರ ಈ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಕತ್ರಿನಾ ಕೈಫ್ ಅವರ ಮನೆಯ ಸೌಂದರ್ಯ ಇಮ್ಮಡಿಕೊಳಿಸಿದ್ದೂ ಇದೇ ಡಿಸೈನರ್!
ಹೃತಿಕ್ ಈ ಮನೆಯ ಕೋಟಿ ಬೆಲೆಯ ಪಿಟೋಪಕರಣಗಳನ್ನು ದುಬೈನಿಂದ ತರಿಸಿದ್ದಾರೆ ಎನ್ನಲಾಗುತ್ತದೆ. ಈ ಮನೆಯನ್ನು ಎರಡು ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಗೊಳಿಸಲಾಗಿದೆ. 2013ರಲ್ಲಿ ಹೃತಿಕ್ ಖರೀದಿಸಿದ ಈ ಮನೆ ಈಗ ನೂರು ಕೋಟಿ ಬೆಲೆಬಾಳುತ್ತದೆ. ತಮ್ಮ ಮಕ್ಕಳ ಫೋಟೋಗಳನ್ನು ಕೆಲವು ಬರಹಗಳೊಂದಿಗೆ ಗೋಡೆಗೆ ಹಾಕಿದ್ದು ಬಹಳ ಆಕರ್ಷಣೀಯ ಎನಿಸುತ್ತದೆ. ಒಟ್ಟಿನಲ್ಲಿ ಹೃತಿಕ್ ತಮ್ಮ ಬಿಡುವಿನ ಸಮಯ ಕಳೆಯಲು ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.