ಕೇವಲ 149ಕ್ಕೆ ಅಥವಾ 179 ರುಪಾಯಿಗೆ ಎಂಥ ರೀಚಾರ್ಜ್ ಪ್ಲ್ಯಾನ್ ಕೊಟ್ಟಿದೆ ಜಿಯೋ ಗೊತ್ತಾ?? ಪ್ರತಿದಿನ ಒಂದು ಜಿಬಿ ಬಳಸುವವರಿಗೆ ಬೆಸ್ಟ್ ಪ್ಲಾನ್.
ನಮಸ್ಕಾರ ಸ್ನೇಹಿತರೇ, ಭಾರತದ ನಂಬರ್ ಒನ್ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್ ಗಳನ್ನು ಪರಿಚಯಿಸಿದ್ದು ಇದರಲ್ಲಿ ಹೆಚ್ಚು ದರದ ರೀಚಾರ್ಜ್ ಯೋಜನೆಗಳಲ್ಲಿ ಇರುವ ಎಲ್ಲಾ ಸೌಲಭ್ಯಗಳನ್ನೂ ಕೊಡಲಾಗುತ್ತಿದೆ. ಮುಖ್ಯವಾಗಿ ಅತೀ ಕಡಿಮೆ ಬೆಲೆಗೆ ದೈನಂದಿನ 1 ಜಿಬಿ ಡೇಟಾ ನಿಮ್ಮ ಮೊಬೈಲ್ ಸೇರಲಿದೆ.
ಮೊದಲಿಗೆ 149ರೂ.ಗಳ ಪ್ರಿಪೇಯ್ಡ್ ಪ್ಲಾನ್ ನೋಡೋಣ. ಈ ಯೋಜನೆಯನ್ನು 20 ದಿನಗಳ ಮಾನ್ಯತೆ ಹೊಂದಿದೆ. ದಿನಕ್ಕೆ ಒಂದು ಜಿಬಿ ಡೇಟಾ ಅಂದರೆ, ಬಳಕೆದಾರರು 20ಜಿಬಿ ಒಟ್ಟು ಡೇಟಾವನ್ನು ಪಡೆಯುತ್ತಾರೆ. ಜೊತೆಗೆ ಅನಿಯಮಿತ ಧ್ವನಿ ಕರೆ ಮತ್ತು 100 ಎಸ್ ಎಂ ಎಸ್ ಜೊತೆಗೆ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳನ್ನು ಪಡೆಯುತ್ತಾರೆ. ನ್ಯಾಯೋಚಿತ ಬಳಕೆ-ನೀತಿ ಡೇಟಾ ಬಳಕೆಯನ್ನು ಮಾಡಿದ ನಂತರ ಇಂಟರ್ನೆಟ್ ವೇಗವು 64 ಕೆಬಿಪಿಎಸ್ ಗೆ ಕಡಿಮೆಯಾಗುತ್ತದೆ.
ಇನ್ನು ಜಿಯೋ ದರೂ 179 ಪ್ರಿಪೇಯ್ಡ್ ಪ್ಲಾನ್. 24 ದಿನಗಳ ವ್ಯಾಲಿಡಿಟಿ, 1ಜಿಬಿ ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳೊಂದಿಗೆ ದಿನಕ್ಕೆ 100 ಸ್ ಎಂ ಎಸ್ ಸೌಲಭ್ಯಗಳನ್ನು ನೀಡುತ್ತದೆ. ಹಾಗೆಯೇ 28 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ 209 ಪ್ರಿಪೇಯ್ಡ್ ಪ್ಲಾನ್ ಕೂಡ ಉಳಿದ 2 ಯೋಜನೆಗಳ ಸೌಲಭ್ಯಗಳನ್ನೇ ಹೊಂದಿದೆ. ದಿನಕ್ಕೆ ಒಂದು ಜಿಬಿ ಡೇಟಾ, 100 ಎಸ್ ಎಂ ಎಸ್ ಜೊತೆಗೆ ಅನಿಯಮಿತ ಧ್ವನಿ ಕರೆ, ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇವಿಷ್ಟು ಅತೀ ಕಡಿಮೆ ದರದಲ್ಲಿ ದಿನಕ್ಕೆ ಒಂದು ಜಿಬಿ ಡೇಟಾ ನೀಡುವ ಪ್ರಿಪೇಯ್ಡ್ ಯೋಜನೆಗಳು. ಆದರೆ ಇದರಲ್ಲಿ ದೀರ್ಘಾವದಿ ವ್ಯಾಲಿಡಿಟಿ ಇಲ್ಲದೇ ಇರುವುದು ಗ್ರಾಹಕರಿಗೂ ಬೇಸರದ ಸಂಗತಿ. ಅದು ಬಿಟ್ಟರೆ ಮಿಕ್ಕ ಎಲ್ಲಾ ಸೌಲಭ್ಯಗಳೂ ಜನರಿಗೆ ಉಪಯೋಗವಾಗುವಂಥವೇ!