2 ವರ್ಷಕ್ಕೊಮ್ಮೆ ರಿಚಾರ್ಜ್, ಪದೇ ಪದೇ ಬೇಡ. ಫೋನ್ ಕೂಡ ಅವರೇ ಕೊಡುತ್ತಾರೆ ಅದು ಕಡಿಮೆ ಬೆಲೆಗೆ, ಜಿಯೋ ಕಡೆ ಇಂದ ಭರ್ಜರಿ ಆಫರ್. ಏನೆಲ್ಲಾ ಸಿಗುತ್ತದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಜೊಯೋ ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿದ್ದು ಗ್ರಾಹಕ ಸ್ನೇಹಿ ಯೋಜನೆಗಳನ್ನು ರೂಪಿಸುವಲ್ಲಿ ಹೆಸರುವಾಸಿ. ಜಿಯೋ ಕೊಟ್ಟಷ್ಟು ಡೇಟಾ ಪ್ಲ್ಯಾನ್ ಗಳನ್ನು ಸಾಮಾನ್ಯವಾಗಿ ಬೇರೆ ಯಾವ ಟೆಲಿಕಾಂ ಕಂಪನಿಗಳೂ ಕೊಟ್ಟಿರಲಿಕ್ಕಿಲ್ಲ. ನಾವಿಲ್ಲಿ ಜಿಯೋದ ಅತ್ಯಂತ ಪ್ರಯೋಜನಕಾರಿಯಾದಂಥ ಪ್ಲ್ಯಾನ್ ಒಂದರ ಬಗ್ಗೆ ತಿಳಿಸುತ್ತಿದ್ದೇವೆ.
ಜಿಯೋ ಈ ಬಾರಿ ಪರಿಚಯಿಸುತ್ತಿರುವ ಯೋಜನೆಯಲ್ಲಿ ಕಡಿಮೆ ವೆಚ್ಚದಲ್ಲಿ ಉಚಿತ ಡೇಟಾ ಮತ್ತು ಕರೆ ಜೊತೆಗೆ 4ಜಿ ಸ್ಮಾರ್ಟ್‌ಫೋನ್ ಅನ್ನು ನೀಡುತ್ತಿದೆ. ಜಿಯೋದ ಈ ಯೋಜನೆಗೆ ಸರಿಸಾಟಿಯಾದ ಬೇರೆ ಯಾವ ಯೋಜನೆ ಇಲ್ಲ ಅಂತನೇ ಹೇಳಬಹುದು. ಯಾಕಂದ್ರೆ ಇದು ಬರೋಬ್ಬರಿ 2 ವರ್ಷಗಳ ಯೋಜನೆ. ಒಮ್ಮೆ ರೀಚಾರ್ಜ್ ಮಾಡಿದ್ರೆ ನೀವು ಮತ್ತೆ ಮತ್ತೆ ರೀಚಾರ್ಜ್ ಮಾಡುವ ಗೋಜಲಿಗೇ ಹೋಗಬೇಕಾಗಿಲ್ಲ.

ಜಿಯೋದ 2 ವರ್ಷದ ಯೋಜನೆ 1,999 ರೂ.ಗೆ ಸಿಗಲಿದೆ. ಇದರಲ್ಲಿ ಯಾವುದೇ ನೆಟ್‌ವರ್ಕ್‌ಗೆ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆ ಮತ್ತು 48ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಸಿಗುತ್ತದೆ. ಆದರೆ ಇದರಲ್ಲಿ ಎಸ್ ಎಂ ಎಸ್ ಅಥವಾ ಒಟಿಟಿ ಪ್ರಯೋಜನಗಳು ಇರುವುದಿಲ್ಲ. ಆಗಾದ್ಯೂ ಬಳಕೆದಾರರಿಗೆ 4ಜಿ ಸ್ಮಾರ್ಟ್‌ಫೋನ್ ಉಚಿತವಾಗಿ ನೀಡಲಾಗುತ್ತಿದೆ.
ಇನ್ನು ಉಚಿತವಾಗಿ ಸಿಗುವ ಜಿಯೋ ಸ್ಮಾರ್ಟ್ ಫೋನ್ ಬಗ್ಗೆ ನೋಡುವುದಾದರೆ, ಗ್ರಾಹಕರು ಜಿಯೋದ ಈ 4ಜಿ ಸ್ಮಾರ್ಟ್‌ಫೋನ್ ಅನ್ನು ಕೇವಲ 2,999 ರೂ. ಬೆಲೆಗೆ ಪಡೆಯುತ್ತಾರೆ. ಡ್ಯುಯಲ್-ಸಿಮ್ ಸ್ಮಾರ್ಟ್‌ಫೋನ್ 2.4-ಇಂಚಿನ ಕ್ಯೂವಿಜಿಎ ಡಿಸ್ಪ್ಲೇ, 1,500ಎಂಎಹೆಚ್ ಬ್ಯಾಟರಿ ಮತ್ತು 9 ಗಂಟೆಗಳ ಟಾಕ್ ಟೈಮ್ ಇದರಲ್ಲಿದೆ. ಮಾತ್ರವಲ್ಲ, ಇದರಲ್ಲಿರುವ ಎಸ್ ಡಿ ಕಾರ್ಡ್ ಮೂಲಕ 128ಜಿಬಿ ವರೆಗೆ ಸ್ಟೋರೇಜ್, 0.3ಎಂಪಿ ಮುಂಭಾಗ ಮತ್ತು 0.3ಎಂಪಿ ಹಿಂಭಾಗದ ಕ್ಯಾಮೆರಾಗಳಂತಹ ವೈಶಿಷ್ಟ್ಯಗಳ ಅಗ್ಗದ ಬೆಲೆಯ ಫೋನ್ ಇದಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಧ್ವನಿ ಸಹಾಯಕ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. (ಅಕ್ಷರಗಳನ್ನು ಟೈಪ್ ಮಾಡಲು ಗೊತ್ತಾಗದೇ ಇರುವವರಿಗೆ ಇದು ಹೆಚ್ಚು ಸಹಾಯವಾಗುತ್ತದೆ)