ಒಂದು ವೇಳೆ ನಟಿಯಾಗದಿದ್ದರೆ ಅಲಿಯ ಭಟ್ ಏನಾಗುತ್ತಿದ್ದರಂತೆ ಗೊತ್ತೇ?? ಈ ಕೆಲಸ ಮಾಡಲು ಸಾದ್ಯವಾಗುತಿತ್ತಾ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಪ್ರತಿಯೊಂದು ಮೂಲೆಯಲ್ಲಿ ಕೇಳಿಬರುತ್ತಿರುವ ಒಂದೇ ಹೆಸರು ಎಂದರೆ ಅದು ನಟಿ ಆಲಿಯಾ ಭಟ್ ರವರ ಹೆಸರು. ಆಲಿಯಾ ಭಟ್ ರವರು ನಿರ್ದೇಶಕ ಮಹೇಶ್ ಭಟ್ ರವರ ಮಗಳಾಗಿದ್ದಾರೆ. ತಮ್ಮ ಮೊದಲ ಸಿನಿಮಾ ಸ್ಟೂಡೆಂಟ್ ಆಫ್ ದ ಇಯರ್ ಸಿನಿಮಾದಿಂದ ಇಂದಿನವರೆಗೆ ಹಲವಾರು ಟೀಕೆಗಳನ್ನು ಎದುರಿಸಿಕೊಂಡು ಬಂದಿರುವುದು ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅದರಲ್ಲೂ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ಗಂಗೂಬಾಯಿ ಕಾಥಿಯವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ರವರ ಪಾತ್ರಕ್ಕೆ ಮರುಳಾಗದವರಿಲ್ಲ. ಅಷ್ಟರಮಟ್ಟಿಗೆ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದು ಬಾಕ್ಸಾಫೀಸ್ ನಲ್ಲಿ ಕೂಡ ಸದ್ದು ಮಾಡುತ್ತಿದ್ದು ಗಲ್ಲಾಪೆಟ್ಟಿಗೆಯಲ್ಲಿ ಕೋಟಿಕೋಟಿ ಹಣ ಕಲೆಕ್ಷನ್ ಆಗುತ್ತಿದೆ. ಇಷ್ಟು ಮಾತ್ರವಲ್ಲದೆ ಇದೇ ಮಾರ್ಚ್ 25ರಂದು ಬಿಡುಗಡೆಯಾಗುವಂತಹ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಆಲಿಯಾ ಭಟ್.

ಕೆಲವರು ತಂದೆ ನಿರ್ದೇಶಕರೂ ಆಗಿರುವ ಕಾರಣದಿಂದಾಗಿ ಇವರಿಗೆ ನಟನಾ ವೃತ್ತಿ ಸುಲಭವಾಗಿ ದೊರಕಿದೆ ಎಂದು ಹೇಳುತ್ತಾರೆ. ಆದರೆ ತಮ್ಮ ಮೊದಲ ಸಿನಿಮಾ ಕರಣ್ ಜೋಹರ್ ನಿರ್ದೇಶನದ ಸ್ಟೂಡೆಂಟ್ ಆಫ್ ದ ಇಯರ್ ಸಿನಿಮಾಗಾಗಿ 400 ಹುಡುಗಿಯರ ನಡುವೆ ಆಡಿಷನ್ ಕೊಟ್ಟು ಗೆದ್ದುಬಂದಿದ್ದರು. ಇನ್ನೂ ಒಂದು ವೇಳೆ ನಟಿ ಆಗದೆ ಇದ್ದರೆ ಏನು ಆಗುತ್ತಿದೆ ಎಂಬುದನ್ನು ಸಂದರ್ಶನವೊಂದರಲ್ಲಿ ಆಲಿಯಾ ಭಟ್ ಅವರು ಹೇಳಿದ್ದಾರೆ. ಹೌದು ನಟಿ ಆಲಿಯಾ ಭಟ್ ರವರಿಗೆ ಸಂಘಟಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿಯಂತೆ. ಅದರಲ್ಲಿ ತಾವು ಮಾಸ್ಟರ್ ಎಂಬುದಾಗಿ ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ಯೋಜನೆಗಳನ್ನು ಕ್ರಿಯೇಟ್ ಮಾಡುವುದು ಕೂಡ ಆಲಿಯಾ ಭಟ್ ಅವರಿಗೆ ಇಷ್ಟ. ಇತ್ತೀಚಿನ ದಿನಗಳಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಮದುವೆ ಆಗುವ ವಿಚಾರದಲ್ಲಿ ಕೂಡ ಆಲಿಯಾ ಭಟ್ ರವರು ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ.

Get real time updates directly on you device, subscribe now.