ಈ ಚಿಕ್ಕ ಕೆಲಸ ಮಾಡಿ ಸಾಕು, ನಿಮ್ಮ ಖಾತೆಗೆ ನೇರವಾಗಿ 10 ಸಾವಿರ ಬರುತ್ತದೆ, ಅಷ್ಟಕ್ಕೂ ನೀವು ಏನು ಮಾಡ್ಬೇಕು ಗೊತ್ತೇ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕರೋನಾ ಮಹಾಮಾರಿಯಿಂದ ಎಷ್ಟು ಸಾ’ವು ನೋವುಗಳು ಸಂಭವಿಸಿವೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂದಿಗೂ ಕೂಡ ಅದೆಷ್ಟೋ ಜನರಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳಲೂ ಆಗುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ಬೀದಿ ವ್ಯಾಪಾರಿಗಳಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಕೂಲಿ ಕಾರ್ಮಿಕರೂ ಕೂಡ ಕೆಲಸವಿಲ್ಲದೇ ಕಷ್ಟಪಡುವಂತಾಗಿದೆ. ಆದರೆ ನೀವು ನಿಮ್ಮ ವ್ಯಾಪಾರವನ್ನು ಮತ್ತೆ ಶುರು ಮಾಡುವ ಹಾಗಿದ್ರೆ, ಅಥವಾ ವ್ಯಾಪಾರವನ್ನೇ ಉದ್ಯೋಗವಾಗಿಸಿಕೊಳ್ಳುವ ಹಾಗಿದ್ರೆ ನಿಮಗೆ ಬಂಡವಾಳದ ಚಿಂತೆ ಬೇಡ. ಇದಕ್ಕಾಗಿಯೇ ’ಪ್ರಧಾನಿ ಸ್ವಾನಿಧಿ ಯೋಜನೆ’ ನೀಡುತ್ತೆ 10 ಸಾವಿರ ರೂಪಾಯಿ!

ಹೌದು ಬಂಡವಾಳದ ಕೊರತೆಯಿಂದ ಬೀದಿ ವ್ಯಾಪಾರಗಳನ್ನು ಮಾಡುವುದು ಸಾಧ್ಯವಾಗದಿದ್ದರೆ, ಈ ಯೋಜನೆ ನಿಮಗೆ ಸಹಾಯವಾಗಬಹುದು. ‘ಪ್ರಧಾನಿ ಸ್ವಾನಿಧಿ ಯೋಜನೆ’ ಅಡಿಯಲ್ಲಿ ಯಾವುದೇ ಖಾತರಿ ಇಲ್ಲದೆ, 10,000 ರೂ. ವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ, ಸಾಲ ಪಡೆದು ಸಣ್ಣ ವ್ಯಾಪಾರವನ್ನು ಪುನಃ ಆರಂಭಿಸಬಹುದು. ಈ ಯೋಜನೆ ಅಡಿಯಲ್ಲಿ ಸಾಲಬೇಕಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಅಂದಹಾಗೆ ಮಾರ್ಚ್ 24, 2020 ಅಥವಾ ಅದಕ್ಕೂ ಮೊದಲು ವ್ಯಾಪಾರದಲ್ಲಿ ತೊಡಗಿರುವವರಿಗೆ ಮಾತ್ರ ಈ ಲೋನ್ ಸಿಗುತ್ತದೆ.

ಈ ಸಾಲದ ಯೋಜನಾ ಅವಧಿಯು ಮಾರ್ಚ್ 2022 ರವರೆಗೆ ಮಾತ್ರ ಇರಲಿದೆ. ಆದ್ದರಿಂದ ನಿಮಗೆ ಸಾಲ ಬೇಕಿದ್ದರೆ ಆದಷ್ಟು ಬೇಗ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಾಲ ಪಡೆದುಕೊಳ್ಳಿ. ನಗರ ಅಥವಾ ಅರೆ ನಗರ, ಗ್ರಾಮೀಣ ಪ್ರದೇಶಗಳ ಬೀದಿ ವ್ಯಾಪಾರಿಗಳಿಗೆ ಈ ಸೌಲಭ್ಯ ಸಿಗುತ್ತದೆ. ಈ ಸಾಲದ ಬಡ್ಡಿಯ ಮೇಲೆ ಸಬ್ಸಿಡಿ ಇದೆ ಹಾಗೂ ಹಣವನ್ನು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಸಾಲಕ್ಕೆ ಯಾವುದೇ ಗ್ಯಾರಂಟಿ ಇಡಬೇಕಾಗಿಲ್ಲ, ಮಾಸಿಕ ಹಣ ತಪ್ಪದೇ ಮಾಡಬೇಕು. ಇಷ್ಟೇ ಅಲ್ಲ, ಪಿಎಂ ಸ್ವಾನಿಧಿ ಯೋಜನೆಯಡಿಯಲ್ಲಿ ಪಡೆದ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದರೆ, ಅಂಥವರಿಗೆ ವಾರ್ಷಿಕ ಶೇಕಡಾ 7 ರ ಬಡ್ಡಿ ದರದಲ್ಲಿ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ. ಬಡ್ಡಿ ಸಹಾಯಧನದ ಮೊತ್ತವನ್ನು ತ್ರೈಮಾಸಿಕ ಆಧಾರದ ಮೇಲೆ ಸಾಲ ತೆಗೆದುಕೊಂಡವರ ಬ್ಯಾಂಕ್ ಖಾತೆಗೆ ನೇರವಾಗಿ ಕಳುಹಿಸಲಾಗುತ್ತದೆ.

Get real time updates directly on you device, subscribe now.