ಧರ್ಮಸ್ಥಳಕ್ಕೆ ಹೋಗಿದ್ದೀರಾ?? ಅಲ್ಲಿ ಸಾಲಿನಲ್ಲಿ ಕುಳಿತು ಊಟ ಮಾಡಿದ್ದೀರಾ?? ಅಲ್ಲಿ ಊಟ ಮಾಡಿದವರಿಗೂ ತಿಳಿಯದ ಸತ್ಯಗಳೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಹಿಂದೂಧರ್ಮವನ್ನು ಅನುಸರಿಸುವವರಿಗೆ ಧರ್ಮಸ್ಥಳದ ಮಂಜುನಾಥನ ದೇವಸ್ಥಾನ ಎನ್ನುವುದು ಸಾಕಷ್ಟು ಪರಮಪವಿತ್ರವಾದ ಸ್ಥಳ ಎಂದು ಹೇಳಲಾಗುತ್ತದೆ. ಭಾರತ ದೇಶದ ಮೂಲೆ ಮೂಲೆಯಿಂದಲೂ ಕೂಡ ಮಂಜುನಾಥನ ಮೂಲ ಸ್ಥಾನವಾಗಿರುವ ಧರ್ಮಸ್ಥಳಕ್ಕೆ ಬಂದು ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಭಾರತ ದೇಶದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯ ಕೂಡ ಅಗ್ರಸ್ಥಾನದಲ್ಲಿ ಕಂಡುಬರುತ್ತದೆ.
ಪ್ರತಿವರ್ಷ ಲಕ್ಷಾಂತರ ಭಕ್ತಾಭಿಮಾನಿಗಳು ಮಂಜುನಾಥನ ದರ್ಶನವನ್ನು ಪಡೆಯಲು ಧರ್ಮಸ್ಥಳಕ್ಕೆ ಆಗಮಿಸುತ್ತಾರೆ. ಇನ್ನು ಕೇವಲ ದರ್ಶನ ಮಾತ್ರವಲ್ಲದೆ ಇಲ್ಲಿ ಬರುವಂತಹ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಕೂಡ ನೀಡಲಾಗುತ್ತದೆ. ನೀವು ಹಲವಾರು ಬಾರಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿರಬಹುದು. ಆದರೆ ಧರ್ಮಸ್ಥಳದಲ್ಲಿ ಭಕ್ತಾಭಿಮಾನಿಗಳಿಗೆ ಅನ್ನಸಂತರ್ಪಣೆ ನೀಡುವ ಕುರಿತಂತೆ ಕೆಲವೊಂದು ವಿಚಾರಗಳ ಕುರಿತಂತೆ ನಿಮಗೆ ತಿಳಿದಿರುವುದು ಸಾಧ್ಯವೇ ಇಲ್ಲ. ನಿಮಗೆ ತಿಳಿಯದೆ ಇರುವಂತಹ ಅದೇ ಕುತೂಹಲಕಾರಿ ವಿಚಾರದ ಕುರಿತಂತೆ ನಾವು ಇಂದು ಮಾತನಾಡಲು ಮಾಡುತ್ತಿದ್ದೇವೆ.
ಹಾಗಿದ್ದರೆ ಧರ್ಮಸ್ಥಳದಲ್ಲಿ ಎಷ್ಟು ಜನ ಪ್ರತಿದಿನ ಅನ್ನಸಂತರ್ಪಣೆಯಲ್ಲಿ ಭಾಗಿಯಾಗುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ರಾಜ್ಯ ಹಾಗೂ ದೇಶದ ಮೂಲೆಮೂಲೆಗಳಿಂದ ಪ್ರತಿದಿನ ಮಂಜುನಾಥನ ಸಾನಿಧ್ಯವನ್ನು ನೋಡಲು ಬರುವಂತಹ ಭಕ್ತಾಭಿಮಾನಿಗಳು ಇಲ್ಲಿ ಅನ್ನಸಂತರ್ಪಣೆಯನ್ನು ಕೂಡ ಸವಿಯುತ್ತಾರೆ. ಪ್ರತಿದಿನ ಇಲ್ಲಿ 35ರಿಂದ 50 ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆಯನ್ನು ಮಾಡಲಾಗುತ್ತದೆ. ಲಕ್ಷದೀಪೋತ್ಸವ ದಿನದಂದು ಬರೋಬ್ಬರಿ ಒಂದು ಲಕ್ಷದವರೆಗೆ ಕೂಡ ಅನ್ನಸಂತರ್ಪಣೆ ಮಾಡಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಕೂಡ ಧರ್ಮದರ್ಶಿಗಳಾಗಿರುವ ಶ್ರೀ ವೀರೇಂದ್ರ ಹೆಗ್ಗಡೆಯವರು ಅನ್ನಸಂತರ್ಪಣೆಯಲ್ಲಿ ಯಾವುದೇ ಕುಂದು ಕೊರತೆ ಬಾರದಂತೆ ನಿರ್ವಹಿಸಿಕೊಂಡು ಬಂದಿದ್ದಾರೆ. ಇದಕ್ಕೆ ತಾನೇ ಧರ್ಮಸ್ಥಳವನ್ನು ಪುಣ್ಯಕ್ಷೇತ್ರ ಎಂದು ಕರೆಯೋದು.