ಚಾಲೆಂಜಿಂಗ್ ಸ್ಟಾರ್ ದರ್ಶನ್ 56 ನೇ ಸಿನಿಮಾದ ಕುರಿತು ಮಹತ್ವ ಮಾಹಿತಿ ಸೋರಿಕೆ, ಮಾಹಿತಿ ಕೇಳಿ ಬೇಸರಗೊಂಡ ಅಭಿಮಾನಿಗಳು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಯಶಸ್ವಿ ಚಿತ್ರಗಳನ್ನು ನೀಡುತ್ತಿರುವ ನಟನೆಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು. ಸದ್ಯಕ್ಕೆ ಈಗಾಗಲೇ ಯಜಮಾನ ತಂಡದ ಜೊತೆಗೆ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ಮಾಪಕರಾಗಿ ಬಿ ಸುರೇಶ್ ಹಾಗೂ ಶೈಲಜಾ ನಾಗ್ ರವರು ಹಾಗೂ ನಿರ್ದೇಶಕರಾಗಿ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಇದ್ದಾರೆ. ಡಿ ಬಾಸ್ ರವರೊಂದಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಜನ್ಮ ದಿನದ ಪ್ರಯುಕ್ತ ವಾಗಿ ಹೊಸ ಸಿನಿಮಾವನ್ನು ಕೂಡ ಅನೌನ್ಸ್ ಮಾಡಲಾಗಿತ್ತು. ಹೌದು ಚಿತ್ರದ ಫಸ್ಟ್ ಲುಕ್ ಮಾದರಿಯ ಪೋಸ್ಟರನ್ನು ಬಿಡಲಾಗಿತ್ತು. ಈ ಚಿತ್ರವನ್ನು ರಾಕಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡುತ್ತಿದ್ದರೆ, ನಿರ್ದೇಶನವನ್ನು ತರುಣ್ ಸುಧೀರ್ ಅವರು ಮಾಡುತ್ತಿದ್ದಾರೆ.
ಇನ್ನು ಈ ಡಿ56 ಚಿತ್ರದ ಕುರಿತಂತೆ ಹಲವಾರು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹಿಂದೆ ಇರೋರದ್ದು ದಾರಿ ಮುಂದೆ ಇರೋರದ್ದು ಜವಾಬ್ದಾರಿ ಎನ್ನುವ ಟ್ಯಾಗ್ಲೈನ್ ಕೂಡ ಹೊಂದಿದೆ. ಹೀಗಾಗಿ ಈ ಚಿತ್ರವನ್ನು ತಮಿಳು ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಹೌದು ಗೆಳೆಯರೆ ತಮಿಳಿನ ಸೂಪರ್ ಹಿಟ್ ಚಿತ್ರವಾಗಿರುವ ಅಸುರನ್ ಚಿತ್ರದ ರಿಮೇಕ್ ಎಂಬುದಾಗಿ ಈ ಚಿತ್ರವನ್ನು ಬಿಂಬಿಸಲಾಗುತ್ತಿದೆ. ಈ ಚಿತ್ರ ಈಗಾಗಲೇ ತೆಲುಗಿನಲ್ಲಿ ಕೂಡ ನಾರಪ್ಪ ಹೆಸರಿನೊಂದಿಗೆ ರಿಮೇಕ್ ಆಗಿ ಬಿಡುಗಡೆಯಾಗಿದೆ. ಡಿ ಬಾಸ್ ಕೂಡ ಈ ಪಾತ್ರದಲ್ಲಿ ಮಿಂಚಬಹುದು ಎನ್ನುವ ನಿರೀಕ್ಷೆಗಳು ಈಗ ಚಿತ್ರದ ಘೋಷಣೆಯೊಂದಿಗೆ ಹೆಚ್ಚಾಗಿದೆ. ಆದರೆ ಈ ಕುರಿತಂತೆ ಅಧಿಕೃತ ಮಾಹಿತಿ ಇನ್ನು ಮುಂದಿನ ದಿನಗಳಲ್ಲಿ ಬಿಡುಗಡೆಯಾಗ ಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.